ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chanakya Niti: ವೀರ್ಯ ಹೆಚ್ಚಿಸಲು ಚಾಣಕ್ಯ ನೀತಿಯಲ್ಲಿದೆ ದಿವ್ಯ ಔಷಧ!

Chanakya Niti: ಚಾಣಕ್ಯರನ್ನು ಆರ್ಥಿಕ ತಜ್ಞ ಎಂದು ಕರೆಯಲಾಗುತ್ತದೆ. ಚಾಣಕ್ಯ ಹೇಳಿದ ಸಂದೇಶ, ಸಲಹೆ, ಸೂತ್ರಗಳನ್ನು ನೀತಿ (Chanakya Niti) ಎಂದು ವಿವರಿಸಲಾಗುತ್ತದೆ
09:56 AM Jun 04, 2024 IST | ಕಾವ್ಯ ವಾಣಿ
UpdateAt: 09:56 AM Jun 04, 2024 IST
Advertisement

Chanakya Niti: ಚಾಣಕ್ಯರನ್ನು ಆರ್ಥಿಕ ತಜ್ಞ ಎಂದು ಕರೆಯಲಾಗುತ್ತದೆ. ಚಾಣಕ್ಯ ಹೇಳಿದ ಸಂದೇಶ, ಸಲಹೆ, ಸೂತ್ರಗಳನ್ನು ನೀತಿ (Chanakya Niti) ಎಂದು ವಿವರಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ರಾಜಕೀಯದ ಜೊತೆ ಜೊತೆಯಲ್ಲಿ ಸಾಮಾಜಿಕ, ಸಂಬಂಧ, ವ್ಯಾಪಾರ, ಆರೋಗ್ಯದ ಕುರಿತು ಚಾಣಕ್ಯ ನೀತಿಯಲ್ಲಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಚಾಣಕ್ಯ ನೀತಿಯಲ್ಲಿ ಉತ್ತರ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Advertisement

ಜೀವನದಲ್ಲಿ ಪ್ರತಿಯೊಬ್ಬರು ವಿವಾಹವಾದ ಬಳಿಕ ಲೈಂಗಿಕ ಸುಖ ಬಯಸುವರು. ಅದರಲ್ಲೂ ದಂಪತಿಗಳಲ್ಲಿ ಪ್ರೀತಿ, ಉತ್ಸಾಹ ಮತ್ತು ಕಡುಬಯಕೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಅತ್ಯಂತ ನೈಸರ್ಗಿಕ ಮಾನವ ಪ್ರಚೋದನೆಯೇ ಲೈಂಗಿಕತೆ. ಸದ್ಯ ಗಂಡ-ಹೆಂಡತಿ ಸಂಬಂಧ ಹೇಗಿರಬೇಕು ಮತ್ತು ಲೈಂಗಿಕ ಜೀವನದ ಕುರಿತ ಸಲಹೆಗಳನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಹೌದು, ಚಾಣಕ್ಯ ನೀತಿಯಲ್ಲಿ ಪುರುಷರ ವೀರ್ಯ ವೃದ್ಧಿಗೆ ಏನು ಮಾಡಬೇಕು ಎಂದು ಹೇಳಿದ್ದಾರೆ.

ವೀರ್ಯ ವೃದ್ಧಿ ಕುರಿತ ಶ್ಲೋಕ:

Advertisement

ಶಾಕೇನ ರೋಗಾ ವರ್ಧಂತೇ ಪಯಸಾ ವರ್ಧತೇ ತನುಃ|

ಘೃತೇನ ವರ್ಧತೇ ವೀರ್ಯಂ ಮಾಸಾನ್ಮಾಸುಂ ಪ್ರವರ್ಧತೇ ||

ಶ್ಲೋಕದ ಅರ್ಥ: 

ಸಸ್ಯಾಹಾರದ ಸೇವನೆಯಿಂದ ರೋಗ ಉಲ್ಭಣಿಸುತ್ತವೆ. ಶಾರೀರಿಕವಾಗಿ ಸದೃಢರಾಗಲು, ವೀರ್ಯ ವೃದ್ಧಿಗೆ ತುಪ್ಪ ಮತ್ತು ಮಾಂಸ ಸೇವನೆಯಿಂದ ದೇಹದ ಮಾಂಸಖಂಡಗಳ ವೃದ್ಧಿಯಾಗುತ್ತದೆ.

ಶ್ಲೋಕದ ವಿವರಣೆ:

ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಸಸ್ಯಾಹಾರ ನೇರವಾಗಿ ಭೂಮಿಯಿಂದ ಸಿಗುವ ಆಹಾರ ಪದಾರ್ಥವಾಗಿದೆ. ಆದ್ದರಿಂದ ತರಕಾರಿಗಳನ್ನು ಶುಚಿಯಾಗಿ ಸ್ವಚ್ಛಗೊಳಿಸಿ ಸೇವಿಸಬೇಕು. ಇಲ್ಲವಾದ್ರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಜನರು ಮಳೆಗಾಲದಲ್ಲಿ ಸೊಪ್ಪು ಸೇವನೆ ಬಳಕೆ ಕಡಿಮೆ ಮಾಡುತ್ತಾರೆ. ದೈಹಿಕವಾಗಿ ಬಲಿಷ್ಠರಾಗಲು ಹಾಲು ಕುಡಿಯಬೇಕು.

ಪುರುಷರು ಆಹಾರದಲ್ಲಿ ತುಪ್ಪ ಬಳಕೆ ಮಾಡಬೇಕು. ತುಪ್ಪ ಬಳಸೋದರಿಂದ ವೀರ್ಯದ ವೃದ್ಧಿಯಾಗುತ್ತದೆ. ತುಪ್ಪ ಹಲವು ಆರೋಗ್ಯಕರ ಲಾಭಗಳನ್ನು ಹೊಂದಿದೆ. ದೇಹದ ಮಾಂಸಖಂಡಗಳ ವೃದ್ಧಿಗೆ ಮಾಂಸ ಸೇವನೆಗೂ ಆಚಾರ್ಯ ಚಾಣಕ್ಯ ಸಲಹೆ ನೀಡುತ್ತಾರೆ.

Advertisement
Advertisement