ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Dharmasthala: ಭಕ್ತರ ಗಮನಕ್ಕೆ; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈ ದಿನದಿಂದ ಮುಂಜಾನೆ ದರ್ಶನ ರದ್ದು

Dharmasthala: ಈ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ ಕಾಲಾವಧಿ ಜಾತ್ರೆಯ ಅಂಗವಾಗಿ ಹೆಚ್ಚಿನ ವಿವರಗಳ ಪ್ರಕಟಣೆಯನ್ನು ಹೊರಡಿಸಿದೆ.
11:17 AM Apr 06, 2024 IST | ಸುದರ್ಶನ್
UpdateAt: 11:22 AM Apr 06, 2024 IST
Advertisement

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಲಾವಧಿ ಜಾತ್ರೆಯು ಎ.12 ರಿಂದ ಪ್ರಾರಂಭವಾಗಿ ಎ.24 ಬುಧವಾರದವರೆಗೆ ನಡೆಯಲಿದೆ. ಈ ಕಾರಣದಿಂದ ಕ್ಷೇತ್ರದಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ.

Advertisement

ಇದನ್ನೂ ಓದಿ: Summer Health Tips: ಅತಿಯಾದ ಬಿಸಿಲಿನ ಝಳ ನಮ್ಮ "ಕರುಳಿನ ಆರೋಗ್ಯ"ದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? : ಇಲ್ಲಿದೆ ನೋಡಿ ಉತ್ತರ

ಈ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ ಕಾಲಾವಧಿ ಜಾತ್ರೆಯ ಅಂಗವಾಗಿ ಹೆಚ್ಚಿನ ವಿವರಗಳ ಪ್ರಕಟಣೆಯನ್ನು ಹೊರಡಿಸಿದೆ. ಇದರಲ್ಲಿ ಭಕ್ತರಿಗೆಂದು ಕೆಲವು ಮುಖ್ಯವಾದ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾಲಾವಧಿ ಜಾತ್ರೆಯ ಸಮಯದಲ್ಲಿ ಹೋಗುವವರು ಈ ವಿಚಾರ ತಿಳಿದಿರಬೇಕು.

Advertisement

ಇದನ್ನೂ ಓದಿ: Supreme Court: ಪಾಕಿಸ್ತಾನಿ ಸೂಫಿ ಸಂತನ ಸಮಾಧಿ ಭಾರತದಲ್ಲಿ ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಎ.18ರಿಂದ ಎ.23 ರವರೆಗೆ ಬೆಳಗ್ಗೆ 8.30 ರವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಸಾಯಂಕಾಲ 5ಗಂಟೆಯಿಂದ 8.30 ರವರೆಗೆ ಮಾತ್ರ ಭಕ್ತರನ್ನು ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಏಪ್ರಿಲ್ 12- ರಾತ್ರಿ 8:30ರಿಂದ ಓಲೆ ಬರೆಯುವುದು

ಏಪ್ರಿಲ್ 13- ಸಂಜೆ 6 ಗಂಟೆಗೆ ಪದ್ಯೋಳಿ ಹೋಗುವುದು, ರಾತ್ರಿ 7:30ಕ್ಕೆ ಧ್ವಜಾರೋಹಣ, ರಾತ್ರಿ 10 ಗಂಟೆಗೆ ಧರ್ಮ ದೈವಗಳ ಭಂಡಾರ ಹೊರಡುವುದು.

ಏಪ್ರಿಲ್ 14- ರಾತ್ರಿ 10 ಗಂಟೆಯ ನಂತರ ಧರ್ಮ ದೈವಗಳ ನೇಮ

ಏಪ್ರಿಲ್ 15- ರಾತ್ರಿ 8 ಗಂಟೆಯಿಂದ ಅಣ್ಣಪ್ಪ ನೇಮ

ಏಪ್ರಿಲ್ 16- ಉತ್ಸವ

ಏಪ್ರಿಲ್ 17- ರಾತ್ರಿ 8:30ಕ್ಕೆ ಬಯಗಿನ ಬಲಿ ಹೊರಡುವುದು, ಹೊಸಕಟ್ಟೆ ಉತ್ಸವ, ರಜತಲಾಲಕಿಯಲ್ಲಿ ಹೊಸಕಟ್ಟೆಗೆ(ವಸಂತ ಮಹಲ್)

ಏಪ್ರಿಲ್ 18- ಬೆಳಗ್ಗೆ ರಥೋತ್ಸವ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ

ಏಪ್ರಿಲ್ 19- ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಲಲಿತೋದ್ಯಾನ ಉತ್ಸವ

ಏಪ್ರಿಲ್ 20-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಕೆರೆಕಟ್ಟೆ ಉತ್ಸವ

ಏಪ್ರಿಲ್ 21-ಬೆಳಗ್ಗೆ ರಥೋತ್ಸವ ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಚಂದ್ರಮಂಡಲ ಗೌರಿ ಮಾರುಕಟ್ಟೆ ಉತ್ಸವ

ಏಪ್ರಿಲ್ 22- ಬೆಳಗ್ಗೆ ರಥೋತ್ಸವ, ದರ್ಶನ ಬಲಿ, ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ರಾತ್ರಿ 8:30 ಗಂಟೆಯ ನಂತರ ಉತ್ಸವ ಪ್ರಾರಂಭ, ಬ್ರಹ್ಮರಥೋತ್ಸವ, ಭೂತ ಬಲಿ

ಏಪ್ರಿಲ್ 23: ಬೆಳಗ್ಗೆ 9 ಗಂಟೆಗೆ ಕವಾಟೋದ್ಘಾಟನೆ, ರಾತ್ರಿ 6 ಆರು ಗಂಟೆ ನಂತರ ದರ್ಶನ ಬಲಿ, ಧ್ವಜ ಅವಾರೋಹಣ

ಎಪ್ರಿಲ್‌ 24: ರಾತ್ರಿ 8.30 ರಿಂದ ಧೂಳ ಬಲಿ ಉತ್ಸವ ನಡೆಯಲಿದೆ.

Advertisement
Advertisement