ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Delhi: ಮೋದಿ ಪ್ರಮಾಣವಚನ ವೇಳೆ ಹಿಂಬದಿಯಲ್ಲಿ ನಿಗೂಢ ಪ್ರಾಣಿಯ ಸಂಚಾರ - ವಿಡಿಯೋ ವೈರಲ್ !!

Delhi: ಮೋದಿಯವರ ಪ್ರಮಾಣವಚನ ಸಮಾರಂಭದ ವೇಳೆ ವೇದಿಕೆಯ ಹಿಂಬಾಗದಲ್ಲಿ ನಿಗೂಢ ಪ್ರಾಣಿಯೊಂದು ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು ನೆಟ್ಟಿಗರನ್ನು ಸೋಜಿಗರನ್ನಾಗಿಸಿದೆ.
09:18 AM Jun 11, 2024 IST | ಸುದರ್ಶನ್
UpdateAt: 09:27 AM Jun 11, 2024 IST
Advertisement

Delhi: ಜೂನ್ 9ರಂದು ದೆಹಲಿಯ(Delhi) ರಾಷ್ಟ್ರಪತಿ ಭವನದ(Rastrapati Bhavan) ಎದುರು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದ ವೇಳೆ ವೇದಿಕೆಯ ಹಿಂಬಾಗದಲ್ಲಿ ನಿಗೂಢ ಪ್ರಾಣಿಯೊಂದು ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು ನೆಟ್ಟಿಗರನ್ನು ಸೋಜಿಗರನ್ನಾಗಿಸಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

Advertisement

ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ ವಿವರ ಇಲ್ಲಿದೆ ; ಕುಮಾರಸ್ವಾಮಿ, ಶೋಭಾ, ಸೋಮಣ್ಣಗೆ ಯಾವ ಖಾತೆ?

ಹೌದು, ನರೇಂದ್ರ ಮೋದಿ (PM Narendra Modi) ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ (Prime minister) ಜೂನ್ 9 ರಂದು ಪ್ರಮಾಣ ವಚನ (Oath taking) ಸ್ವೀಕಾರಿಸಿದರು. ಈ ಕಾರ್ಯಕ್ರಮದಲ್ಲಿ ದುರ್ಗಾ ದಾಸ್ ಪ್ರಮಾಣ ವಚನ ಸ್ವೀಕರಿಸಿ ಏಳುತ್ತಿದ್ದಾಗ ಹಿನ್ನೆಲೆಯಲ್ಲಿ ಯಾವುದೋ ನಿಗೂಢವಾದ ಪ್ರಾಣಿಯೊಂದು ಸಂಚಾರ ನಡೆಸಿದೆ. ಮೋಲ್ನೋಟಕ್ಕೆ ಇದು ಚಿರತೆಯಂತೃ(leopord) ಕಂಡುಬಂದಿದೆ. ಸಮಾರಂಭದ ವಿಡಿಯೋದಲ್ಲಿ ಇದು ಕಂಡುಬಂದಿದ್ದು, ವಿಡಿಯೋ ವೈರಲ್‌ (viral video) ಆಗುತ್ತಿದ್ದಂತೆ ಇದೀಗ ಎಲ್ಲರ ಆಶ್ಚರ್ಯ, ಆತಂಕಗಳಿಗೆ ಕಾರಣವಾಗಿದೆ.

Advertisement

ಅಂದಹಾಗೆ ಈ ವರ್ಷದ ಅತಿದೊಡ್ಡ ರಾಜಕೀಯ ಇವೆಂಟ್‌ ಆಗಿರುವ ಈ ಕಾರ್ಯಕ್ರಮದಲ್ಲಿ ಈ ಅನಪೇಕ್ಷಿತ, ಅನಿರೀಕ್ಷಿತ ಅತಿಥಿಯ ಆಗಮನ ಇದೀಗ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ಗಮನ ಸೆಳೆಯುತ್ತಿದೆ. ಅನೇಕ X ಬಳಕೆದಾರರು ತಮ್ಮ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಹಲವರು ಅಚ್ಚರಿ ಹಾಗೂ ಆತಂಕ ಹೊರಸೂಸಿದ್ದಾರೆ. ಬಹಳಷ್ಟು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ಕೆಲವರು ಇದು ಚಿರತೆ ಎಂದು ಬಣ್ಣಿಸಿದ್ದಾರೆ. ಕೆಲವರು ಇದು ವೈಲ್ಡ್ ಕ್ಯಾಟ್ ಅಥವಾ ಕಾಡಿನ ಬೆಕ್ಕಿರಬಹುದು ಎಂದಿದ್ದಾರೆ. ಇನ್ನೂ ಕೆಲವರು ಇದು ದೊಡ್ಡ ಗಾತ್ರದ ಬೆಕ್ಕು ಅಥವಾ ಸೆಕ್ಯೂರಿಟಿ ನಾಯಿ ಇರಬಹುದು ಎಂದು ಅಂದಾಜಿಸಿದ್ದಾರೆ. ಚಿರತೆ ಎಲ್ಲಿಂದ ಬಂದಿರಬಹುದು, ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಸೆಕ್ಯುರಿಟಿ ಅದನ್ನು ಸಮಾರಂಭ ನಡೆಯುವ ಜಾಗದವರೆಗೂ ಹೇಗೆ ಬರಲು ಬಿಟ್ಟರು, ನಿಜಕ್ಕೂ ಈ ವಿಡಿಯೋದಲ್ಲಿ ಕಾಣಿಸಿರುವುದು ನಿಜವೇ ಎಂಬಿತ್ಯಾದಿ ಚರ್ಚೆಗಳು ಆರಂಭವಾಗಿವೆ.

Shivrajkumar: ಯುವರಾಜ್‌ಕುಮಾರ್ ಡಿವೋರ್ಸ್ ಬಗ್ಗೆ ನಟ ಶಿವಣ್ಣ ಹೇಳಿದ್ದಿಷ್ಟು !!

Related News

Advertisement
Advertisement