ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Planning Commission of India: ಸದ್ಯದಲ್ಲೇ 6 ಮತ್ತು 7ನೇ ವೇತನ ಆಯೋಗದನ್ವಯ ವೇತನ, ಹಿಂಬಾಕಿ ಪಾವತಿ - ಹೈಕೋರ್ಟ್ ನಿಂದ ಮಹತ್ವದ ಆದೇಶ !!

09:50 AM Nov 21, 2023 IST | ಕಾವ್ಯ ವಾಣಿ
UpdateAt: 10:01 AM Nov 21, 2023 IST
Advertisement

Delhi High court Planning Commission of India: ಈಗಾಗಲೇ ರಾಷ್ಟ್ರ ರಾಜಧಾನಿಯ ವಿವಿಧ ಖಾಸಗಿ ಶಾಲೆಗಳ (Private Schools) ಬೋಧಕ ಮತ್ತು ಬೋಧಕೇತರ ಉದ್ಯೋಗಿಗಳು 6ನೇ ಮತ್ತು 7ನೇ ವೇತನ ಆಯೋಗಗಳ ಪ್ರಯೋಜನಗಳನ್ನು ಮತ್ತು ಬಡ್ಡಿಯೊಂದಿಗೆ ತಮ್ಮ ಬಾಕಿಗಳ ಪಾವತಿಸುವಂತೆ ಮತ್ತು ಇತರ ಬೇಡಿಕೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಕುರಿತಂತೆ ಖಾಸಗಿ ಶಾಲೆಗಳು ಆರನೇ ಮತ್ತು ಏಳನೇ ಕೇಂದ್ರ ವೇತನ ಆಯೋಗಗಳ (CPC) ಶಿಫಾರಸುಗಳನ್ನು ಜಾರಿಗೊಳಿಸಬೇಕು ಮತ್ತು ತಮ್ಮ ಬೋಧಕ, ಬೋಧಕೇತರ ಸಿಬ್ಬಂದಿಗೆ ಕಡ್ಡಾಯ ವೇತನ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು ಎಂದು ದೆಹಲಿ ಹೈಕೋರ್ಟ್ (Delhi High Court) ಆದೇಶಿಸಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ವೇತನ ಆಯೋಗಗಳ (Planning Commission of India) ಶಿಫಾರಸಿನ ಪ್ರಕಾರ, ಅನುದಾನರಹಿತ ಅಲ್ಪಸಂಖ್ಯಾತ ಶಾಲೆಗಳು ಸಹ ತಮ್ಮ ಉದ್ಯೋಗಿಗಳಿಗೆ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿ ಸಿಂಗ್ ಸ್ಪಷ್ಟಪಡಿಸಿದರು.

ಇನ್ನು 6ನೇ ಮತ್ತು 7ನೇ ವೇತನ ಆಯೋಗಗಳು ಸೂಚಿಸಿದ ಶಿಫಾರಸುಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಉನ್ನತ ಅಧಿಕಾರದ ಸಮಿತಿಗಳನ್ನು (ಎಚ್‌ಪಿಸಿ) ರಚಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಎಚ್‌ಪಿಸಿ ರಚನೆಯಾಗಲಿದೆ. ಕೇಂದ್ರ ಸಮಿತಿಯು ದೆಹಲಿಯ ಶಿಕ್ಷಣ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ. ಅಲ್ಲದೇ ಅದರ ಸದಸ್ಯರಲ್ಲಿ ಶಾಲೆಗಳ ಒಬ್ಬ ಪ್ರತಿನಿಧಿಯನ್ನು ಸಹ ಹೊಂದಿರುತ್ತದೆ. ವಲಯ ಸಮಿತಿಯು ವಲಯ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿದ್ದು, ಇದು ಶುಲ್ಕ ಹೆಚ್ಚಳ, ವೇತನಗಳು ಮತ್ತು ಇತರ ಪ್ರಯೋಜನಗಳ ಸಮಸ್ಯೆಯನ್ನು ಬಗೆಹರಿಸುತ್ತದೆ. ಈ ಸಮಿತಿಯು ತನ್ನ ಸಂಶೋಧನೆಗಳನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡುತ್ತದೆ ಎಂದು ತಿಳಿಸಿದೆ.

Advertisement

ಇದನ್ನೂ ಓದಿ : Cricket World cup: ಭಾರತ ವರ್ಲ್ಡ್ ಕಪ್ ಸೋಲಲು ಅಮಿತಾಬ್ ಬಚ್ಚನ್ ಕಾರಣ ?!

Related News

Advertisement
Advertisement