Delhi: ಧರೆಗುರುಳಿದ ಎರಡು ಅಂತಸ್ತಿನ ಕಟ್ಟಡ : ಇಬ್ಬರ ಸಾವು
11:16 AM Mar 21, 2024 IST | ಹೊಸ ಕನ್ನಡ
UpdateAt: 11:33 AM Mar 21, 2024 IST
Advertisement
ಇಂದು ಮುಂಜಾನೆ ಎರಡು ಅಂತಸ್ತಿನ ಕಟ್ಟಡ ದರೆ ಗುರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ದೆಹಲಿಯ ಕಬೀರ್ ನಗರದಲ್ಲಿ ನಡೆದಿದೆ.
Advertisement
ಹಳೆಯ ನಿರ್ಮಾಣ ಕಟ್ಟಡದ ಕುಸಿತಕ್ಕೆ ಒಳಗಾಗಿರುವ ಬಗ್ಗೆ ಮುಂಜಾನೆ 2.16 ಕ್ಕೆ ರಕ್ಷಣಾ ಸೇವೆಗಳಿಗೆ ಕರೆ ಬಂದಿತು. ಮೂವರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು ರಕ್ಷಣಾ ಕಾರ್ಯಾಚರಣೆ ಮಾಡುವ ಮೂಲಕ ಅವರೆಲ್ಲರನ್ನೂ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯವ ದಾರಿ ಮಧ್ಯೆ ಇಬ್ಬರು ಸಾವನ್ನಪ್ಪಿದ್ದು. ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ .
Advertisement
ಮೃತರನ್ನು ಅರ್ಷದ್ ( 30 ) ಮತ್ತು ತೌಹಿದ್ ( 20 ) ಎಂದು, ಗಾಯಗೊಂಡ ವ್ಯಕ್ತಿಯನ್ನು ರೆಹಾನ್ ( 22 ) ಎಂದು ಗುರುತಿಸಲಾಗಿದೆ. ಕಟ್ಟಡದ ಮಾಲೀಕನನ್ನು ಶಾಹಿದ್ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement