For the best experience, open
https://m.hosakannada.com
on your mobile browser.
Advertisement

Momos: ಹೆಚ್ಚುವರಿ ಮೋಮೋಸ್ ಸಾಸ್ ಕೇಳಿದಕ್ಕೆ ಗ್ರಾಹಕನ ಮೇಲೆ ಚಾಕುವಿನಿಂದ ಇರಿತ !!

03:32 PM Jan 12, 2024 IST | ಅಶ್ವಿನಿ ಹೆಬ್ಬಾರ್
UpdateAt: 03:32 PM Jan 12, 2024 IST
momos  ಹೆಚ್ಚುವರಿ ಮೋಮೋಸ್ ಸಾಸ್ ಕೇಳಿದಕ್ಕೆ ಗ್ರಾಹಕನ ಮೇಲೆ ಚಾಕುವಿನಿಂದ ಇರಿತ
Advertisement

Momos: ದೆಹಲಿಯ(Delhi)ಶಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮೋಮೊ( Momos)ಸಾಸ್ ಕೇಳಿದ್ದಕ್ಕೆ ಗ್ರಾಹಕನ ಮುಖಕ್ಕೆ ಚಾಕುವಿನಿಂದ(Stabbed)ಇರಿದ ಘಟನೆ ವರದಿಯಾಗಿದೆ.

Advertisement

ಗಾಯಾಳು ವ್ಯಕ್ತಿಯನ್ನು 34 ವರ್ಷದ ಸಂದೀಪ್ ಎಂದು ಗುರುತಿಸಲಾಗಿದೆ. ಸಂದೀಪ್‌ ಅವರು ಸಂಜೆ ರಸ್ತೆ ಬದಿ ಮಾರುತ್ತಿರುವ ಗಾಡಿಯಿಂದ ಮೋಮೊಗಳನ್ನು ಖರೀದಿಸಿದ್ದರಂತೆ. ಹೀಗೆ ಮೋಮೊಸ್ ಖರೀದಿಸಿದ ನಂತರ ಗಾಡಿ ಮಾಲೀಕ ವಿಕಾಸ್ (22) ಬಳಿ ಹೆಚ್ಚಿನ ರೆಡ್‌ ಸಾಸ್ ನೀಡುವಂತೆ ಕೇಳಿದ್ದಾನೆ. ಆದರೆ ಅಂಗಡಿಯಾತ ಸಾಸ್ ಕಡಿಮೆಯಿರುವ ಹಿನ್ನೆಲೆ ಸಾಸ್ ನೀಡಲು ನಿರಾಕರಿಸಿದ್ದಾನೆ.

Advertisement

ಈ ಸಂದರ್ಭ ಮಾತಿಗೆ ಮಾತು ಬೆಳೆದು ವಿಕಾಸ್ ಗ್ರಾಹಕ ಸಂದೀಪ್ ಮುಖಕ್ಕೆ ಎರಡು ಬಾರಿ ಇರಿದಿದ್ದು, ಇದಾದ ಬಳಿಕ ಪರಾರಿಯಾಗಿದ್ದಾನೆ. ಸಂದೀಪ್‌ ಮುಖಕ್ಕೆ ಗಂಭೀರ ಗಾಯಗಳಾಗಿರುವ ಹಿನ್ನೆಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುರಿತಂತೆ ಗಾಡಿ ಮಾಲೀಕ ವಿಕಾಸ್ ವಿರುದ್ಧ ಎಫ್‌ಐಆ‌ರ್ (FIR)ದಾಖಲಾಗಿದೆ. ಪರಾರಿಯಾಗಿರುವ ವಿಕಾಸ್‌ಗಾಗಿ ಪೊಲೀಸರು ಬಲೆ ಬೀಸಿದ್ದು, ಫರ್ಶ್ ಬಜಾ‌ರ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Advertisement
Advertisement
Advertisement