ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Deep Fake Technology: ಸೋಶಿಯಲ್‌ ಮೀಡಿಯಾಗೆ ಕೇಂದ್ರದಿಂದ ಖಡಕ್‌ ವಾರ್ನಿಂಗ್‌; Deep Fake ಹಾವಳಿಗೆ ಬಿತ್ತು ಕಡಿವಾಣ!!

02:10 PM Dec 27, 2023 IST | ಅಶ್ವಿನಿ ಹೆಬ್ಬಾರ್
UpdateAt: 02:10 PM Dec 27, 2023 IST
Advertisement

Deep Fake Technology: ಇತ್ತೀಚೆಗೆ ಎಐ ಚಾಲಿತ ಡೀಪ್ ಫೇಕ್ (Deepfake) ತಂತ್ರಜ್ಞಾನ ಬಳಸಿ ಅನೇಕ ಗಣ್ಯ ವ್ಯಕ್ತಿಗಳ, ಸೆಲೆಬ್ರಿಟಿಗಳ ತೇಜೋವಧೆ (Deep Fake Technology)ಮಾಡುವ ಉದ್ದೇಶದಿಂದ ಅವರ ಅಶ್ಲೀಲವಾದಂತಹ ನಕಲಿ ಚಿತ್ರಗಳನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ. ಈ ಕುರಿತು ಕೇಂದ್ರ ಆತಂಕ ವ್ಯಕ್ತಪಡಿಸಿ ತಡೆಗಟ್ಟುವ ಉದ್ದೇಶದಿಂದ ತಂತ್ರಜ್ಞಾನ ಕಂಪನಿಗಳಿಗೆ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದೆ.

Advertisement

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ (Technology) ಸಚಿವಾಲಯ ಇತ್ತೀಚೆಗೆ ಸಲಹಾ ಸೂಚನೆಯನ್ನು ಜಾರಿ ಮಾಡಿ ಎಲ್ಲ ಬಗೆಯ ಸಾಮಾಜಿಕ ಮಾಧ್ಯಮ ತಂತ್ರಜ್ಞಾನ ಕಂಪನಿಗಳಿಗೆ ಎಚ್ಚರದಿಂದಿರಲು ಸೂಚನೆ ನೀಡಿದೆ. ಕೇಂದ್ರದಿಂದ ಜಾರಿಗೊಳಿಸಲಾದ ಸಲಹೆಯ ಅನುಸಾರ, “ಐಟಿ ನಿಯಮಗಳ ಅಡಿಯಲ್ಲಿ ಅನುಮತಿಸದ ವಿಷಯಗಳು, ನಿರ್ದಿಷ್ಟವಾಗಿ ನಿಯಮ 3(1) (ಬಿ) ಅಡಿಯಲ್ಲಿ ಪಟ್ಟಿ ಮಾಡಲಾದ ಹಾಗೂ ಅದರ ಸೇವಾ ನಿಯಮಗಳು ಮತ್ತು ಬಳಕೆದಾರ ಒಪ್ಪಂದಗಳ ಮೂಲಕ ಇಂಟರ್ನೆಟ್ ಬಳಕೆದಾರರಿಗೆ ಸ್ಪಷ್ಟವಾಗಿ ಮತ್ತು ನಿಖರವಾದ ಭಾಷೆಯಲ್ಲಿ ತಿಳಿಸಬೇಕು.

ನಿಯಮ 3(1)(b) ಐಟಿ ನಿಯಮಗಳು, ಮಧ್ಯವರ್ತಿಗಳು ತಮ್ಮ ನಿಯಮಗಳು, ನಿಬಂಧನೆಗಳು, ಗೌಪ್ಯತೆ ನೀತಿ ಮತ್ತು ಬಳಕೆದಾರರ ಒಪ್ಪಂದವನ್ನು ಬಳಕೆದಾರರ ಆದ್ಯತೆಯ ಭಾಷೆಯಲ್ಲಿ ತಿಳಿಸಲು ಕಡ್ಡಾಯವಾಗಿ ಸೂಚಿಸಲಾಗಿದೆ. ಮೊದಲ-ನೋಂದಣಿ ಸಮಯದಲ್ಲಿ ಮತ್ತು ಸಾಮಾನ್ಯ ಹಾಗೂ ನಿರ್ದಿಷ್ಟವಾಗಿ ಲಾಗಿನ್‌ ಮಾಡುವ ಪ್ರತಿಯೊಂದು ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಸಂದರ್ಭ/ಹಂಚಿಕೊಳ್ಳುವಾಗ ಕೂಡ ಈ ಬಗ್ಗೆ ಎಚ್ಚರಿಕೆಯನ್ನು ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು.

Advertisement

ನಿಯಮ 3(1)(b) ಉಲ್ಲಂಘನೆಯ ಸಂದರ್ಭದಲ್ಲಿ IPC ಮತ್ತು IT ಆಕ್ಟ್ 2000 ಸೇರಿದಂತೆ ದಂಡದ ನಿಬಂಧನೆಗಳ ಬಗ್ಗೆಯೂ ಬಳಕೆದಾರರಿಗೆ ತಿಳಿಸಲಾಗಿದೆ ಎಂಬುದನ್ನು ಡಿಜಿಟಲ್ ಮಧ್ಯವರ್ತಿಗಳು ಖಾತ್ರಿ ಪಡಿಸಬೇಕು. ಸೇವಾ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳು ಸಂದರ್ಭಕ್ಕೆ ಅನ್ವಯವಾಗುವ ಸಂಬಂಧಿತ ಭಾರತೀಯ ಕಾನೂನುಗಳ ಅಡಿಯಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಕಾನೂನು ಉಲ್ಲಂಘನೆಗಳನ್ನು ವರದಿ ಮಾಡಲು ಮಧ್ಯವರ್ತಿಗಳು/ಪ್ಲಾಟ್‌ಫಾರ್ಮ್‌ಗಳು ಬಾಧ್ಯತೆ ಹೊಂದಿದೆ ಎಂದು ಸಲಹಾ ಸೂಚನೆಗಳಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಪುಲ್ವಾಮ ದಾಳಿ ಇನ್ನೊಮ್ಮೆ ರೆಡಿಯಾಗಿ ಎಂದ ಮುಸ್ಲಿಂ ವಿದ್ಯಾರ್ಥಿ; ಟ್ವಿಟ್ಟರ್‌ನಲ್ಲಿ ಪೋಸ್ಟ್‌, ಕೇಸ್‌ ದಾಖಲು!!!

Advertisement
Advertisement