ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Heart attack: ಹೃದಯಘಾತಕ್ಕೆ ಮೈದಾನದಲ್ಲೇ ಕರ್ನಾಟಕದ ಕ್ರಿಕೆಟಿಗ ಸಾವು !!

10:38 AM Feb 23, 2024 IST | ಹೊಸ ಕನ್ನಡ
UpdateAt: 11:44 AM Feb 23, 2024 IST
Advertisement

Heart attack: ಈಗಂತೂ ಹೃದಯಾಘಾತ ಯಾರಿಗೆ ಸಂಭವಿಸುತ್ತದೆ ಎಂದು ಹೇಳಲಾಗದು. ನಡೆದರೆ, ಆಟವಾಡಿದರೆ, ಓಡಿದರೆ, ಮಾತನಾಡಿದರೆ, ನಗಾಡಿದರೂ ಹಾರ್ಟ್ ಅಟ್ಯಾಕ್ ಆಗುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಅಂತೆಯೇ ಇದೀಗ ಕರ್ನಾಟಕದ ಕ್ರಿಕೆಟಿಗನೊಬ್ಬ ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ್ದಾನೆ.

Advertisement

ಇದನ್ನೂ ಓದಿ: Tulsi Leaves Color: ತುಳಸಿ ಎಲೆ ಕಪ್ಪಾದರೆ ನಿಮ್ಮ ಜೀವನದಲ್ಲಿ ಇದೆಲ್ಲ ಸಂಭವಿಸುತ್ತೆ

Advertisement

ಹೌದು, ಕ್ರಿಕೆಟ್ ಟೂರ್ನಿಯಲ್ಲಿ ಮೈದಾನದಲ್ಲೇ ಹೃದಯಾಘಾತದಿಂದ(heart attack) ಕರ್ನಾಟಕದ ವೇಗಿ ಕೆ. ಹೊಯ್ಸಳ(k hoysal) ಸಾವನ್ನಪ್ಪಿದ್ದಾರೆ. ಏಜಿಸ್ ಸೌತ್ ಝೋನ್ ಟೂರ್ನಿಯ ವೇಳೆ ದುರ್ಘಟನೆ ಸಂಭವಿಸಿದ್ದು, ಕೆ.ಹೊಯ್ಸಳ ಅವರ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

ಅಂದಹಾಗೆ ಏಜಿಸ್ ಸೌತ್ ಝೋನ್ ಟೂರ್ನಿಯುತ್ತಿದ್ದು, ಇಂದು ಕರ್ನಾಟಕ ತಂಡದ ಪರ ಹೊಯ್ಸಳ (k hoysal) ಆಡುತ್ತಿದ್ದರು. ತಮಿಳುನಾಡು ವಿರುದ್ದ ಪಂದ್ಯ ಗೆದ್ದ ಬಳಿಕ ಸಭೆ ಕರೆಯಲಾಗಿತ್ತು. ಪಂದ್ಯದ ಬಳಿಕ ವಿಶ್ರಾಂತಿ ಪಡೆದಿದ್ದ ಕೆ.ಹೊಯ್ಸಳ ತಮ್ಮ ಸಹ ಆಟಗಾರರ ಜೊತೆ ಸಭೆಗೆ ತೆರಳಿದ್ದರು. ಆಟದ ಮೈದಾನದಲ್ಲೇ ಮೀಟಿಂಗ್ ಮಾಡುತ್ತಿರುವಾಗ ಹೊಯ್ಸಳ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದ್ದು ಕೂಡಲೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ದುರಾದೃಷ್ಟವಶಾತ್ ವೈದ್ಯರು ತಪಾಸಣೆ ನಡೆಸಿ ಬಳಿಕ ಹೊಯ್ಸಳ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.

Related News

Advertisement
Advertisement