For the best experience, open
https://m.hosakannada.com
on your mobile browser.
Advertisement

Death Cap Mushroom: ಅಣಬೆ ತಿನ್ನಿಸಿ ಮೂವರ ಹತ್ಯೆ! ಅಷ್ಟಕ್ಕೂ ಆ ವಿಷಕಾರಿ ಅಣಬೆ ಯಾವುದು ಗೊತ್ತೇ?

death cap mushroom  ಅಣಬೆ ತಿನ್ನಿಸಿ ಮೂವರ ಹತ್ಯೆ  ಅಷ್ಟಕ್ಕೂ ಆ ವಿಷಕಾರಿ ಅಣಬೆ ಯಾವುದು ಗೊತ್ತೇ

Death Cap Mushroom: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಒಂದೇ ಆಹಾರದಲ್ಲಿ ದನದ ಮಾಂಸದ ಜೊತೆ ಡೆತ್ ಕ್ಯಾಪ್ ಮಶ್ರೂಮ್ (Death Cap Mushroom) ಎರಿನ್ ಎಂಬಾಕೆ ನೀಡಿದ್ದು, ಮೂವರು ಸಾವನ್ನಪ್ಪಿದ(Death News)ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಎರಿನ್ ಎಂಬಾಕೆ ಮತ್ತು ಆಕೆಯ ಮಕ್ಕಳಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

Advertisement

ಆದರೆ ಆಹಾರ ಸೇವಿಸಿದ ಮೂರು ಮಂದಿ ಮೃತಪಟ್ಟ ಹಿನ್ನೆಲೆ ಉದ್ದೇಶ ಪೂರ್ವಕವಾಗಿ ಕೊಲೆ ಮಾಡುವ ಸಲುವಾಗಿ ವಿಷ ಸೇರಿಸಿದ ವಿಚಾರ ಬಯಲಾಗಿದೆ. 48 ವರ್ಷದ ಎರಿನ್ ಪೀಟರ್ಸನ್ ಳನ್ನು ಪೊಲೀಸರು(Police) ಬಂಧಿಸಿದ್ದಾರೆ.

ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ಎರಿನ್, ಮಾಜಿ ಪತಿಯ ತಂದೆ ತಾಯಿಗಳಾದ ಡಾನ್ ಮತ್ತು ಗೇಲ್ ಪೀಟರ್ಸನ್ ಮತ್ತು 66 ವರ್ಷದ ಚಿಕ್ಕಮ್ಮ ಹೀದರ್ ವಿಲ್ಕಿನ್ಸನ್ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೂವರ ಪ್ರಾಣ ತೆಗೆದ ಈ ಡೆತ್ ಕ್ಯಾಪ್ ಮಶ್ರೂಮ್ ಮಶ್ರೂಮ್ ಜಾತಿಗೆ ಸೇರಿದ್ದು, ತುಂಬಾ ವಿಷಕಾರಿ ಎನ್ನಲಾಗಿದೆ. ಡೆತ್ ಕ್ಯಾಪ್ ಮಶ್ರೂಮ್‌ನಲ್ಲಿ ಮೂರು ವಿಧದ ವಿಷಕಾರಿ ಪದಾರ್ಥಗಳಿರುತ್ತವೆ. ಅಮಾಟಾಕ್ಸಿನ್, ಫಾಲೋಟಾಕ್ಸಿನ್ ಮತ್ತು ವೈರೋಟಾಕ್ಸಿನ್. ಇದರಲ್ಲಿ ಅಮಾಟಾಕ್ಸಿನ್ ಅತ್ಯಂತ ವಿಷಕಾರಿ ಎನ್ನಲಾಗಿದೆ.

Advertisement

ಇದನ್ನು ಓದಿ: ಬಿಸಿ ಬಿಸಿ ಸಾಂಬಾರ್‌ ಮೈ ಮೇಲೆ ಬಿದ್ದು ಬಾಲಕ ಸಾವು!!!

Advertisement
Advertisement