ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Deady Accident: ಗಂಗಾನದಿಗೆ ಪುಣ್ಯಸ್ನಾಕ್ಕೆಂದು ಟ್ರ್ಯಾಕ್ಟರ್‌ನಲ್ಲಿ ತೆರಳಿದ್ದ ಭಕ್ತರ ಪಾಲಿಗೆ ಘೋರ ದುರಂತ; ಟ್ರ್ಯಾಕ್ಟರ್‌ ಕೆರೆಗೆ ಬಿದ್ದು, 7 ಮಕ್ಕಳು ಸೇರಿ 15 ಮಂದಿ ಸಾವು

01:54 PM Feb 24, 2024 IST | ಸುದರ್ಶನ್
UpdateAt: 01:56 PM Feb 24, 2024 IST
Advertisement

Uttar Pradesh: ಟ್ರ್ಯಾಕ್ಟರ್‌ ಟ್ರಾಲಿಯೊಂದು ಕೊಳಕ್ಕೆ ಬಿದ್ದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿರುವ ಘೋರ ದುರಂತವೊಂದು ಉತ್ತರಪ್ರದೇಶದ ಕಸ್ಗಂಜ್‌ ಜಿಲ್ಲೆಯಲ್ಲಿ ಶನಿವಾರ ಘಟಿಸಿದೆ.

Advertisement

ಮಾಘ ಪೂರ್ಣಿಮೆಯ ಶುಭದಿನದಂದು ಭಕ್ತರನ್ನು ಪುಣ್ಯಸ್ನಾನಕ್ಕಾಗಿ ಗಂಗಾನದಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿ ಗ್ರಾಮಸ್ಥರು ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿದ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಟ್ರ್ಯಾಕ್ಟರ್‌ ಚಾಲಕನಿಗೆ ಗಾಡಿ ನಿಯಂತ್ರಣ ತಪ್ಪಿದ್ದು, ಟ್ರ್ಯಾಕ್ಟರ್‌ನ ಹಿಂಬದಿ ಟ್ರಾಲಿ ಕೆರೆಗೆ ಬಿದ್ದಿದೆ.

ಈ ಘೋರ ದುರಂತದಲ್ಲಿ ಎಂಟು ಮಕ್ಕಳು ಮತ್ತು ಏಳು ಮಹಿಳೆಯರು ಸೇರಿ 15 ಮಂದಿ ಸಾವಿಗೀಡಾಗಿದ್ದಾರೆ. ಹಲವು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಅವರನ್ನೆಲ್ಲ ಕಾಸ್ಗಂಜ್‌ನ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Related News

Advertisement
Advertisement