For the best experience, open
https://m.hosakannada.com
on your mobile browser.
Advertisement

Deadly Accident: ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದು 10 ಜನರ ಭೀಕರ ಸಾವು

Deadly Accident: ಅಹಮದಾಬಾದ್ ವಡೋದರಾ ಎಕ್ಸ್‌ಪ್ರೆಸ್‌ವೇಯ ನಾಡಿಯಾಡ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.
08:00 PM Apr 17, 2024 IST | ಸುದರ್ಶನ್
UpdateAt: 08:00 PM Apr 17, 2024 IST
deadly accident  ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದು 10 ಜನರ ಭೀಕರ ಸಾವು
Advertisement

Deadly Accident: ಅಹಮದಾಬಾದ್ ವಡೋದರಾ ಎಕ್ಸ್‌ಪ್ರೆಸ್‌ವೇಯ ನಾಡಿಯಾಡ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ರಸ್ತೆ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಕಾರು ಟ್ಯಾಂಕರ್‌ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಕಾರು ವಡೋದರಾದಿಂದ ಅಹಮದಾಬಾದ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.

Advertisement

ಅಪಘಾತದ ನಂತರ, ವಡೋದರಾ-ಅಹಮದಾಬಾದ್ ಎಕ್ಸ್‌ಪ್ರೆಸ್ ಹೆದ್ದಾರಿ ಜಾಮ್ ಆಗಿದ್ದು, ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಮೃತ ದೇಹಗಳನ್ನು ಹೊರತೆಗೆಯಲು ಎರ್ಟಿಗಾ ಕಾರನ್ನು ಕತ್ತರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಎಕ್ಸ್‌ಪ್ರೆಸ್‌ವೇಯಲ್ಲಿ ಹಿಂದಿನಿಂದ ಟ್ರಕ್‌ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಅಸಡ್ಡೆಯಿಂದ ಎಡಗೈಯಲ್ಲಿ ದೀಪ ಹಚ್ಚಲು ಹೋದ ರಾಹುಲ್ ಗಾಂಧಿ; ತಿಳಿಹೇಳಿ ಬಲಗೈಯಲ್ಲಿ ಬೆಳಗಿಸಿದ ಕೃಷ್ಣ ಬೈರೇಗೌಡ; ಸಂಸ್ಕೃತಿಯೇ ಗೊತ್ತಿಲ್ಲದ ನಾಯಕ ಎಂದ ಜನ

Advertisement

ಈ ನಡುವೆ ಖೇಡಾ ಎಸ್ಪಿ ರಾಜೇಶ್ ಗಧ್ವಿ ಹೇಳಿಕೆ ನೀಡಿದ್ದು, "ತಾಂತ್ರಿಕ ದೋಷದಿಂದ ವಡೋದರಾ-ಅಹಮದಾಬಾದ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ಯಾಂಕರ್ ನಿಂತಿತ್ತು. 10 ಜನರಿದ್ದ ಕಾರು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ, ಅದರಲ್ಲಿ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 2 ಜನರು ಗಾಯಗೊಂಡಿದ್ದು, ಅವರನ್ನು ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದರು. ಶವಗಳನ್ನು ಹೊರತೆಗೆದು ಮತ್ತು ಕಾನೂನು ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ.

ಅಪಘಾತದ ಕಾರು ಅಹಮದಾಬಾದ್‌ನಿಂದ ಹಾದುಹೋಗುತ್ತಿದ್ದು, ಅದರ ನೋಂದಣಿ ಸಂಖ್ಯೆ GJ27 EC 2578 ಆಗಿದೆ. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ. ಕಾರಿನ ಸಂಖ್ಯೆ ಮತ್ತು ಆಧಾರ್ ಕಾರ್ಡ್ ವಿವರಗಳ ಆಧಾರದ ಮೇಲೆ ಮೃತರನ್ನು ಗುರುತಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Jai Sri Ram Slogan: ಜೈ ಶ್ರೀರಾಮ್‌ ಘೋಷಣೆ ಕೂಗಿದ ಯುವಕರಿಗೆ ಮುಸ್ಲಿಂ ಯುವಕರಿಂದ ನಿಂದನೆ, ಹಲ್ಲೆ

Advertisement
Advertisement
Advertisement