Mumbai: ಐಎಎಸ್ ಪೋಷಕರ ಮಗಳು 10 ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ
Mumbai: ಐಎಎಸ್ ಅಧಿಕಾರಿ ಪೋಷಕರ ಮಗಳೊಬ್ಬರು 1೦ನೇ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದ ದಾರುಣ ಘಟನೆಯೊಂದು ನಡೆದಿದ್ದು, ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಮಹಾರಾಷ್ಟ್ರದ ಉನ್ನತ ಇಲಾಖೆಯಲ್ಲಿ ತಂದೆ, ತಾಯಿ ಐಎಎಸ್ ಅಧಿಕಾರಿಗಳು. ದುಡ್ಡು, ಹೆಸರು ಎಲ್ಲವೂ ಇದ್ದರೂ, ಪುತ್ರಿಯ ಈ ಆತ್ಮಹತ್ಯೆಯ ನಿರ್ಧಾರ ನಿಜಕ್ಕೂ ಶಾಕಿಂಗ್.
ಇದನ್ನೂ ಓದಿ:
ಮುಂಜಾನೆ 4 ಗಂಟೆ ಸುಮಾರಿಗೆ ಈಕೆ ರಾಜ್ಯ ಸಚಿವಾಲಯಗಳ ಸಮೀಪ ಇರು ಗಗನಚುಂಬಿ ಕಟ್ಟಡದ 10 ನೇ ಮಹಡಿಯಿಂದ ಕೆಳಗೆ ಹಾಕಿ ಸಾವನ್ನಪ್ಪಿದ್ದಾಳೆ. ಲಿಪಿ ರಸ್ತೋಗಿ (27 ವರ್ಷ) ಎಂಬಾಕೆಯೇ ಸಾವಿಗೀಡಾದ ಯುವತಿ. ರಾಧಿಕಾ ರಸ್ತೋಗಿ, ವಿಕಾಸ್ ರಸ್ತೋಗಿ ಎಂಬ ಐಎಎಸ್ ಅಧಿಕಾರಿಗಳ ಮಗಳೇ ಸಾವಿಗೀಡಾದವಳು.
ಇದನ್ನು ಓದಿ: Hassan Lokasabha: ಹಾಸನದಲ್ಲಿ ಪ್ರಜ್ವಲ್ ಗೆ ಸೋಲೋ? ಗೆಲುವೋ? ಸಮೀಕ್ಷೆಗಳು ಹೇಳೋದೇನು?
ಕೆಳಗೆ ಬಿದ್ದ ಈಕೆಯನ್ನು ಅಲ್ಲಿನ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ. ಪೊಲೀಸರು ಆಕೆ ವಾಸವಿದ್ದ ಮನೆಯಿಂದ ಪತ್ರವೊಂದನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಮೃತ ಲಿಪಿ ಅವರು ಕಾನೂನು ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆಯಲ್ಲಿ ತನ್ನ ಸಾಧನೆ ಕುರಿತು ಆಕೆಗೆ ತೃಪ್ತಿ ಇರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಈಕೆ ಹರ್ಯಾಣದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಕೋರ್ಸ್ ಮಾಡುತ್ತಿದ್ದಳು. ತಂದೆ ವಿಕಾಸ್ ರಸ್ತೋಗಿ ಅವರು ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿಯೂ, ಅಮ್ಮ ರಾಧಿಕಾ ರಸ್ತೋಗಿ ರಾಜ್ಯ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
ತಮ್ಮ ಪುತ್ರಿಯ ಈ ದುರಂತ ಅಂತ್ಯ ಇಬ್ಬರನ್ನೂ ದಿಗ್ಭ್ರಮೆಗೊಳಿಸಿದೆ.
ಇದನ್ನೂ ಓದಿ: Udupi: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯಂತೆ ಭಯಾನಕ ಕೃತ್ಯ - ಬೆಳಕಿಗೆ ಬಂದಿದ್ದೇ ರೋಚಕ !!