For the best experience, open
https://m.hosakannada.com
on your mobile browser.
Advertisement

Dating Apps: ಸಿಂಗಲ್ ಇರೋರು ಮಿಂಗಲ್ ಆಗೋ ಅವಕಾಶ - ಸರ್ಕಾರದಿಂದಲೇ ಡೇಟಿಂಗ್ ಆ್ಯಪ್ ಬಿಡುಗಡೆ !!

Dating Apps: ಸರ್ಕಾರವೇ ಡೇಟಿಂಗ್ ಆ್ಯಪ್(Dating App) ಬಿಡುಗಡೆ ಮಾಡಿದೆ. ಇದರ ಮೂಲಕ ನೀವು ಉತ್ತಮ ಸಂಗಾತಿ ಪಡೆಯಬಹುದು.
01:22 PM Jun 09, 2024 IST | ಸುದರ್ಶನ್
UpdateAt: 01:22 PM Jun 09, 2024 IST
dating apps  ಸಿಂಗಲ್ ಇರೋರು ಮಿಂಗಲ್ ಆಗೋ ಅವಕಾಶ   ಸರ್ಕಾರದಿಂದಲೇ ಡೇಟಿಂಗ್ ಆ್ಯಪ್ ಬಿಡುಗಡೆ
Advertisement

Dating Apps: ನೀನಿನ್ನೂ ಸಿಂಗಲ್(Single) ಆಗೇ ಇದ್ದೀರಾ? ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದೀರಾ? ಎಷ್ಟು ಪ್ರಯತ್ನಿಸಿದ್ರೂ ಸರಿಯಾದ ಆಯ್ಕೆ ಸಿಗುತ್ತಿಲ್ಲವೇ? ಹಾಗಿದ್ರೆ ಚಿಂತೆಬಿಡಿ. ಯಾಕೆಂದರೆ ಇದೀಗ ಸರ್ಕಾರವೇ ಡೇಟಿಂಗ್ ಆ್ಯಪ್(Dating App) ಬಿಡುಗಡೆ ಮಾಡಿದೆ. ಇದರ ಮೂಲಕ ನೀವು ಉತ್ತಮ ಸಂಗಾತಿ ಪಡೆಯಬಹುದು.

Advertisement

Govt Employees: ವಾರದ ಈ ದಿನ ಅಧಿಕಾರಿ, ನೌಕರರು ತಮ್ಮ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ!

ಸರ್ಕಾರಗಳು ಜನಪರವಾದ ಯೋಜನೆಗಳನ್ನು ಜಾರಿಗೊಳಿಸೋದು ಸಾಮಾನ್ಯ. ಜನರಿಗೆ ನೆರವಾಗುವುದು, ಅವರ ಕಷ್ಟಗಳನ್ನು ಅರಿತು ಹೊಸ ಕಲ್ಯಾಣ ಕಾರ್ಯಗಳನ್ನು ರೂಪಿಸುವುದು ಕಾಮನ್. ಆದರೆ ಇದೀಗ ಸರ್ಕಾರವು ಸಿಂಗಲ್ ಇರೋರು ಮಿಂಗಲ್ ಆಗೋ ಅವಕಾಶ ಮಾಡಿಕೊಟ್ಟಿದ್ದು ಸರ್ಕಾರದಿಂದಲೇ ಡೇಟಿಂಗ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕೂಡ ಸರ್ಕಾರ ಜನರ ಭಾವನೆ, ಕಷ್ಟಗಳಿಗೆ ನೆರವಾಗಿದೆ.

Advertisement

ಹೌದು, ಜಪಾನ್‌(Japan) ಸರ್ಕಾರ ಇಂತಹದ್ದೊಂದು ಸೌಲಭ್ಯವನ್ನು ತನ್ನ ಜನರಿಗಾಗಿ ಒದಗಿಸಿಕೊಟ್ಟಿದೆ.. ಅವಿವಾಹಿತರು ತನ್ನ ಸಂಗಾತಿಯನ್ನು ಹುಡುಕಿಕೊಂಡು ಸಂಸಾರ ನಡೆಸುವುದನ್ನು ಉತ್ತೇಜಿಸಲು ಜಪಾನ್‌ ಸರ್ಕಾರವೇ ಡೇಟಿಂಗ್‌ ಆಪ್‌ ಒಂದನ್ನು ಪರಿಚಯಿಸಿದೆ.. ಅದರ ಹೆಸರು ʻಟೋಕಿಯೋ ಫುಟಾರಿ ಸ್ಟೋರಿ'(Tokio Putari Story) ಎಂದು.

ಈ ಆಪ್ ಬಿಡುಗಡೆ ಮಾಡಿದ್ದು ಯಾಕೆ?
ಜಪಾನ್ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಶಾತಯುಷಿಗಳನ್ನು ಹೊಂದಿದ್ದು, ದೇಶದ ಜನಸಂಖ್ಯೆಯ ಶೇ. 28 ರಷ್ಟು 65 ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಆದರೆ ವರ್ಷ ಕಳೆದಂತೆ ಜನನ ಪ್ರಮಾಣ ಕುಸಿಯುತ್ತಿದೆ. ಜೊತೆಗೆ ಜಪಾನ್‌ನಲ್ಲಿ ಜನನ ಪ್ರಮಾಣದಲ್ಲಿ ಭಾರಿ ಇಳಿಕೆಯಾಗುತ್ತಿದೆ. ಬಹುತೇಕರು ಸಿಂಗಲ್ ಆಗಿದ್ದುಕೊಂಡು ಕಾಳ ಕಳೆಯುತ್ತಿದ್ದಾರೆ. ಇದರಿಂದ ಪೋಷಕರಾಗುತ್ತಿಲ್ಲ. ಹೀಗಾಗಿ ಭವಿಷ್ಯದಲ್ಲಾಗುವ ಸಮಸ್ಯೆ ತಪ್ಪಿಸಲು ಸರ್ಕಾರ ಮಹತ್ವದ ಡೇಟಿಂಗ್ ಆ್ಯಪ್ ಯೋಜನೆ ಜಾರಿ ಮಾಡಿದೆ.

ಅಂದಹಾಗೆ ಟೋಕಿಯೋ ಫುಟಾರಿ ಸ್ಟೋರಿ ಮೂಲಕ ಸಂಗಾತಿಗಳನ್ನು ಹುಡುಕಿಕೊಂಡು ಬೇಗ ಮದುವೆಯಾಗಿ ಸಂಸಾರ ನಡೆಸಿ ಎಂದು ಜಪಾನ್‌ ಸರ್ಕಾರ ತನ್ನ ದೇಶದ ಅವಿವಾಹಿತರಿಗೆ ಕರೆ ಕೊಟ್ಟಿದೆ.ಜೊತೆಗೆ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಜಾಹೀರಾತುಗಳನ್ನು ನೀಡಲಾಗುತ್ತಿದೆ.

ಕೈ ಕೊಟ್ರೆ ಪ್ರಕರಣ ದಾಖಲು:
ಈ ಯೋಜನೆಯಿಂದ ಸರ್ಕಾರವೇ ಡೇಟಿಂಗ್ ಹಾಗೂ ಲೈಂಗಿಕತೆಗೆ ಉತ್ತೇಜನ ನೀಡುತ್ತಿದೆಯಾ ಅನ್ನೋ ಗಂಭೀರ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಆದರೆ ಯಾರಾದರೂ ಡೇಟಿಂಗ್ ಮಾಡಿ ಅರ್ಧಕ್ಕೆ ಕೈ ಕೊಟ್ಟರೆ ಅಂತವರ ಮೇಲೆ ಪ್ರಕರಣ ದಾಖಲಾಗುತ್ತದೆ. ಕಠಿಣವಾದ ಶಿಕ್ಷೆ ಎದುರಿಸಬೇಕಾದೀತು.

ನಾಲ್ಕು ಮಕ್ಕಳ ತಾಯಿ ಕಾಣೆಯಾದಾಳೆಂದು ಹುಡುಕಾಟ! ಸಿಕ್ಕಿದ್ದು ಹೆಬ್ಬಾವಿನ ಉದರದಲ್ಲಿ!

Advertisement
Advertisement
Advertisement