For the best experience, open
https://m.hosakannada.com
on your mobile browser.
Advertisement

Umapathi Gowda: ದರ್ಶನ್‌ಗೆ ಇರುವ ಎಣ್ಣೆ ನಶೆಯ ಚಟ ಈ ಸ್ಥಿತಿಗೆ ತಂದಿದೆ- ಉಮಾಪತಿ ಖಡಕ್‌ ಸ್ಟೇಟ್ಮೆಂಟ್‌

Umapathi Gowda: ಉಮಾಪತಿ ಗೌಡ ನಟ ದರ್ಶನ್‌ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಲೇ ಬಂದಿದ್ದು, ಇದೀಗ ಮತ್ತೊಮ್ಮೆ, ನಟನ ವಿರುದ್ಧ ಟೀಕೆ ಮಾಡಿದ್ದಾರೆ.
05:05 PM Jun 18, 2024 IST | ಕಾವ್ಯ ವಾಣಿ
UpdateAt: 05:08 PM Jun 18, 2024 IST
umapathi gowda  ದರ್ಶನ್‌ಗೆ ಇರುವ ಎಣ್ಣೆ ನಶೆಯ ಚಟ ಈ ಸ್ಥಿತಿಗೆ ತಂದಿದೆ  ಉಮಾಪತಿ ಖಡಕ್‌ ಸ್ಟೇಟ್ಮೆಂಟ್‌

Umapathi Gowda: ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan Thoogudeepa) ಬಂಧನವಾಗಿದ್ದು, ಇದೀಗ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಗೌಡ ಟೀಕೆ ಮಾಡಿದ್ದಾರೆ. ಉಮಾಪತಿ ಗೌಡ ನಟ ದರ್ಶನ್‌ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಲೇ ಬಂದಿದ್ದು, ಇದೀಗ ಮತ್ತೊಮ್ಮೆ, ನಟನ ವಿರುದ್ಧ ಟೀಕೆ ಮಾಡಿದ್ದಾರೆ.

Advertisement

ಮದುವೆ ಮನೆಯಿಂದ ವಧುವನ್ನೇ ಹೊತ್ತೋಯ್ದ ನಾಲ್ಕು ಯುವಕರು!ವಿಡಿಯೋ ವೈರಲ್

ಉಮಾಪತಿ ಅವರು ಮಾಡಿದ ಪಾಪ ಕರ್ಮಗಳು ಅವರನ್ನೇ ಕಿತ್ತು ತಿನ್ನುತ್ತಿದೆ ಎಂದು ಹೇಳಿದ್ದಾರೆ. ನಾನು ದರ್ಶನ್ ಅವರಿಂದ ದೂರಾಗಿದ್ದು ಒಳ್ಳೆಯದ್ದೇ ಆಯಿತು. ಭಗವಂತ ನನ್ನನ್ನು ಕಾಪಾಡಿದ. ವ್ಯಕ್ತಿ ಬೆಳೆಯಬೇಕಾದ್ರೆ, ಗುರು ಮತ್ತು ಗುರಿ ಇರಬೇಕು. ಇಲ್ಲ ಅಂದ್ರೆ ಈ ರೀತಿ ಆಗುತ್ತದೆ. ಇನ್ನು ಕೋಟಿ ಆಸ್ತಿ, ಬೆಲೆ ಬಾಳುವ ಕಾರು, ಮನೆ ಇದ್ಯಾವುದು ಲೆಕ್ಕಕ್ಕೆ ಬರೋದಿಲ್ಲ, ದೇಹದಲ್ಲಿ ರೋಗ ಇದ್ರೆ ಏನು ಪ್ರಯೋಜನ. ದರ್ಶನ್ ಗೆ ಸ್ವಲ್ಪ ಕೋಪ ಜಾಸ್ತಿ ಎಂದು ಉಮಾಪತಿ ಗೌಡ (Umapathi Gowda) ಹೇಳಿದ್ದಾರೆ.

Advertisement

ದರ್ಶನ್ ಗೆ ಯಾರ ಸಹವಾಸನೋ ಗೊತ್ತಿಲ್ಲ ಇಂದು ಹೀಗಾಗಿದ್ದಾರೆ. ಅವರು ಮಾಡಿರೋದು ಅಪರಾಧ. ಕಾನೂನಿನಲ್ಲಿ ಏನಾಗುತ್ತೋ ಆಗಲಿ. ರೇಣುಕಾ ಸ್ವಾಮಿ ಕುಟುಂಬದ ಜತೆ ನಾನು ನಿಲ್ಲುತ್ತೇನೆ. ದರ್ಶನ್ ರಿಂದ ಇದುವರೆಗೂ ಶೋಷಣೆಗೆ ಒಳಗಾದವರು ಹಲವರು ಇದ್ದಾರೆ. ಅವರು ಈ ಕೊಲೆಗೆ ಕಾರಣ ಯಾಕಂದ್ರೆ ದರ್ಶನ್ ದಬ್ಬಾಳಿಕೆ ಯನ್ನು ಸಹಿಸಿಕೊಂಡು ಬಂದಿರೋದು ತಪ್ಪು. ಇದನ್ನ ವಿರೋಧಿಸಬೇಕು. ಮಾಡಿರೋ ಕರ್ಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿದರೆ ಶಿಕ್ಷೆ ಆಗಲೇ ಬೇಕು ಎಂದು ಹೇಳಿದ್ದಾರೆ.

ಇನ್ನು ತನಗೆ ಎರಡು ಮುಖವಿದೆ ಎಂದು ದರ್ಶನ್‌ ಹೇಳಿರುವ ಮಾತಿಗೂ ಪ್ರತಿಕ್ರಿಯೆ ನೀಡಿದ ಉಮಾಪತಿ, 'ದರ್ಶನ್ ಎರಡು ಮುಖ ಏನು ಅಂತ ಗೊತ್ತಾಗಿದೆ. ಮೈಸೂರಲ್ಲಿ ನನ್ನ ಮೇಲೆ ಗನ್ ಇಟ್ಟಿದ್ದರು. ನನ್ನನ್ನು ಶೂಟ್‌ ಮಾಡೋಕೆ ಪ್ರಯತ್ನ ಮಾಡಿದ್ರು.

ಇನ್ನು ಎಣ್ಣೆ ಏಟಲ್ಲಿ ಸಾಕಷ್ಟು ಗಲಾಟೆ ಆಗಿವೆ. ಎಣ್ಣೆ ಕೊಡಿಸಿದ್ದು ಕಡಿಮೆ ಆಯ್ತು ಅಂತ ರಾಬರ್ಟ್ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಿದ್ದೂ ಇದೆ. ಅವತ್ತು ದರ್ಶನ್ ಜತೆ ಗಲಾಟೆ ಆದಾಗ ನನ್ನ ಮಗಳು ಬಂದು ನನ್ನ ತಬ್ಬಿಕೊಂಡು ಅತ್ತಿದ್ದಳು. ಬೇಸರದಿಂದ ನನ್ನ ಅಮ್ಮ ದೇವರ ಮೇಲೆ ಎಲ್ಲವನ್ನೂ ಬಿಡು ಅಂಥ ಹೇಳಿದ್ದರು. ಇವತ್ತು ಆತನ ಸ್ಥಿತಿ ಹೀಗಾಗಿದೆ ಎಂದು ಉಮಾಪತಿ ಗೌಡ ಟೀಕೆ ಮಾಡಿದ್ದಾರೆ.

Advertisement
Advertisement
Advertisement