For the best experience, open
https://m.hosakannada.com
on your mobile browser.
Advertisement

Darshan Thoogudeepa: ಶವ ಎಸೆಯಲು, ಕೊಲೆ ಆರೋಪ ಹೊತ್ತುಕೊಳ್ಳಲು 30 ಲಕ್ಷ ಹಣ ಕೊಟ್ಟಿದ್ದ ದರ್ಶನ್‌?

Darshan Thoogudeepa: ರೇಣುಕಾ ಸ್ವಾಮಿಯ ಶವವನ್ನು ಎಸೆದು ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30ಲಕ್ಷ ರೂಪಾಯಿ ಹಣವನ್ನು ದರ್ಶನ್‌ ಅವರು ನೀಡಿದ್ದಾರೆ ಎನ್ನಲಾಗುತ್ತಿದೆ.
10:25 AM Jun 12, 2024 IST | ಸುದರ್ಶನ್
UpdateAt: 10:25 AM Jun 12, 2024 IST
darshan thoogudeepa  ಶವ ಎಸೆಯಲು  ಕೊಲೆ ಆರೋಪ ಹೊತ್ತುಕೊಳ್ಳಲು 30 ಲಕ್ಷ ಹಣ ಕೊಟ್ಟಿದ್ದ ದರ್ಶನ್‌
Image Credit: Jagran English
Advertisement

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ದರ್ಶನ್‌ ಆಂಡ್‌ ಗ್ಯಾಂಗ್‌ ವಿರುದ್ಧ ಇದೀಗ ಮತ್ತೊಂದು ಆಘಾತಕಾರಿ ವಿಷಯ ಹೊರ ಬಂದಿದೆ. ರೇಣುಕಾ ಸ್ವಾಮಿಯ ಶವವನ್ನು ಎಸೆದು ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30ಲಕ್ಷ ರೂಪಾಯಿ ಹಣವನ್ನು ದರ್ಶನ್‌ ಅವರು ನೀಡಿದ್ದಾರೆ ಎನ್ನಲಾಗುತ್ತಿದೆ.

Advertisement

Mangaluru/Surathkal: ಪ್ರಥಮ ಪಿಯುಸಿಯ ಮಕ್ಕಳ ಪೋಷಕರಿಗೆ ನಕಲಿ ಕರೆ, ಹಣಕ್ಕೆ ಬೇಡಿಕೆ

ರೇಣುಕಾ ಸ್ವಾಮಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ ಡಿ ಬಾಸ್‌ ಗ್ಯಾಂಗ್‌ ಅನಂತರ ಆತ ನಿಧನ ಹೊಂದಿದ ಬಳಿಕ ಶವವನ್ನು ಸಾಗಿಸಲು ಬೇರೆ ಗ್ಯಾಂಗನ್ನು ಕರೆಸಿ ಅವರಿಗೆ ಶವ ಒಪ್ಪಿಸಿದ್ದು, ನಂತರ ಅದನ್ನು ವಿಲೇವಾರಿ ಮಾಡಿ ಎಂದು ದರ್ಶನ್‌ ಅವರೇ ಈ ದುಡ್ಡು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಇನ್ನೊಂದು ಗ್ಯಾಂಗ್‌ ರೇಣುಕಾ ಸ್ವಾಮಿಯ ಶವ ಪಡೆದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿದ್ದಾರೆ. ನಂತರ ಶವ ದೊರತ ಬಳಿ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ಹಣಕಾಸಿನ ವಿಚಾರ ಎಂದು ಹೇಳಿದ್ದಾರೆ.

ಆದರೆ ಯಾವಾಗ ಇವರ ಹೇಳಿಕೆಗಳು ಬೇರೆ ಬೇರೆ ಇದೆ ಎಂದು ಗೊತ್ತಾಯಿತೋ ಪೊಲೀಸರ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ಗೆ ಬೆದರಿದ ಈ ಗ್ಯಾಂಗ್‌ ನಟ ದರ್ಶನ್‌ ಹೆಸರು ಹೇಳಿದ್ದಾರೆ.

ದರ್ಶನ್‌ ಜೊತೆ ಈ ಗ್ಯಾಂಗ್‌ ರಾತ್ರಿಯಿಡೀ ಮೊಬೈಲ್‌ ಸಂಭಾಷಣೆ ಮಾಡಿರುವ ವಿಚಾರ ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿದೆ. ಶವ ವಿಲೇವಾರಿ, ಕೊಲೆ ಆರೋಪ ಹೊರಲು ಈ ಗ್ಯಾಂಗ್‌ಗೆ ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಈ ಗ್ಯಾಂಗ್‌ಗೆ ನೀಡಲಾಗಿತ್ತು ಎನ್ನಲಾಗಿದೆ.

ಇದೀಗ ಎಲ್ಲರೂ ಅಂದರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದವರು, ರೇಣುಕಾ ಸ್ವಾಮಿಯನ್ನು ಅಪಹರಿಸಿಕೊಂಡು ಬಂದವರು, ಶವ ವಿಲೇವಾರಿ ಗ್ಯಾಂಗ್‌ ಎಲ್ಲರೂ ಕೂಡಾ ದರ್ಶನ್‌ ಜೊತೆಗೆ ಜೈಲಿನಲ್ಲಿದ್ದಾರೆ.

ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಮಾರಸ್ವಾಮಿಗೆ ಪಂಚ ಪ್ರಶ್ನೆ ಕೇಳಿದ ಕಾಂಗ್ರೆಸ್ !!ಏನದು ?

Advertisement
Advertisement
Advertisement