ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Darshan Thoogudeepa: ದರ್ಶನ್​ ಜೊತೆ ರೇಣುಕಾಸ್ವಾಮಿ ತಂದೆ ಸಂಧಾನ!? ಸಂಧಾನಕ್ಕೆ ಕಾನೂನು ಸಮ್ಮತಿ ನೀಡುತ್ತಾ ?

12:04 PM Jul 28, 2024 IST | ಕಾವ್ಯ ವಾಣಿ
UpdateAt: 12:04 PM Jul 28, 2024 IST
Advertisement

Darshan Thoogudeepa: ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿ ತಿಂಗಳು ಕಳೆದವು. ಹೀಗಿದ್ದಾಗ ದರ್ಶನ್ ತೂಗುದೀಪ್ ಮತ್ತು ಅವರ ಕುಟುಂಬ ಸದಸ್ಯರು ಈ ಪ್ರಕರಣವನ್ನ ಸೈಲೆಂಟ್ ಮಾಡಲು, ಶಿಕ್ಷೆ ಆಗದಂತೆ ಸೇಫ್ ಝೋನ್ ಕಾಪಾಡಲು ಹಲವು ಪ್ರಯತ್ನ ಮಾಡುತ್ತಿರುವುದು ಗೊತ್ತಿರುವ ವಿಚಾರ. ಈ ಸಂಕಷ್ಟದಿಂದ ಹೇಗಾದ್ರು ಮಾಡಿ ಹೊರ ಬರಬೇಕು ಈ ಕೊಲೆ ಪ್ರಕರಣದಲ್ಲಿ ಸಿಕ್ಕಿರೋ ಸಾಕ್ಷ್ಯಗಳನ್ನ ನೋಡಿದ್ರೆ ದರ್ಶನ್ ಬಚಾವ್ ಆಗೋಕೆ ಸಾಧ್ಯವೇ ಇಲ್ಲ.

Advertisement

ಐಶಾರಾಮಿ ಲೈಫ್​ ನಡೆಸುತ್ತಿದ್ದ ನಟ ದರ್ಶನ್ ಈಗ ಜೈಲಿನಲ್ಲಿ ಬಂದಿಯಾಗಿದ್ದಾರೆ. ಐಶಾರಾಮಿ ಬದುಕು ಕಣ್ಮರೆ ಆಗಿದೆ. ಸಾಕೋ ಸಾಕು ಈ ಜೈಲು ಜೀವನ ಸಾಕು ಎನ್ನುತ್ತಿದ್ದಾರೆ ನಟ ದರ್ಶನ್. ಹೇಗಾದ್ರು ಮಾಡಿ ಜೈಲಿನಿಂದ ಹೊರ ಬರಬೇಕು ಅಂತ ಕಾಯುತ್ತಿದ್ದರೆ ನಟ ದರ್ಶನ್.. ಅಂತೆಯೇ ದರ್ಶನ್ ತೂಗುದೀಪ್ (Darshan Thoogudeepa) ಕೊಲೆ ಆದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಆಗಿತ್ತು. ಯಾವೆಲ್ಲಾ ಮಾರ್ಗಗಳಿವೆಯೋ ಎಲ್ಲವನ್ನೂ ಹುಡುಕುತ್ತಿದೆ ನಟ ದರ್ಶನ್ ಕುಟುಂಬ.

ಹೌದು, ರೇಣುಕಾ ಸ್ವಾಮಿ ಕುಟಂಬದ ಜೊತೆ ಸಂಧಾನಕ್ಕೆ ಪ್ಲಾನ್ ಮಾಡಿದ್ರಾ ದರ್ಶನ್..? ರೇಣುಕಾಸ್ವಾಮಿ ಕುಟುಂಬದ ಜೊತೆ ಸಂಧಾನಕ್ಕೂ ದರ್ಶನ್ ಮುಂದಾಗಿದ್ದಾರೆ ಅನ್ನೋ ಚರ್ಚೆ​ ಶುರುವಾಗಿದೆ.

Advertisement

ಆದ್ರೆ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​​ರನ್ನ ಬಚಾವ್ ಮಾಡೋಕೆ ಸಾಧ್ಯವೇ ಇಲ್ಲ. ಈ ಕೇಸ್​ನ ಇನ್ವೆಸ್ಟಿಕೇಷನ್ ಮಾಡುತ್ತಿರೋ ಪೊಲೀಸರ ತಂಡ ದರ್ಶನ್​​ ಎಲ್ಲೂ ತಪ್ಪಿಸಿಕೊಳ್ಳಲಾಗಂತೆ ಸಾಕ್ಷ್ಯಗಳನ್ನ ಹುಡುಕಿದ್ದಾರಂತೆ. ಈ ಮಧ್ಯೆ ದರ್ಶನ್ ರೇಣುಕಾ ಸ್ವಾಮಿ ಕುಟುಂಬದ ಜೊತೆ ಸಂಧಾನ ಮಾಡಿಕೊಂಡು ಒಂದಷ್ಟು ಪರಿಹಾರ ಕೊಟ್ಟು ಕೇಸ್​ನಿಂದ ಬಚಾವ್ ಆಗೋ ಬಗ್ಗೆಯೂ ಯೋಚನೆ ಮಾಡಿದ್ದಾರಂತೆ. ಅದಕ್ಕಾಗಿ ತನ್ನ ಆತ್ಮೀಯರ ಜೊತೆ ಮಾತುಕತೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಅದು ಅಸಾಧ್ಯ.. ಯಾಕಂದ್ರೆ ಇದು ಹಣ ಕೊಟ್ಟು ಸಂಧಾನ ಮಾಡಿಕೊಳ್ಳುವಂತಹ ಕೇಸ್​ ಅಲ್ಲವೇ ಅಲ್ಲ.

ರೇಣುಕಾ ಸ್ವಾಮಿ ಫ್ಯಾಮಿಲಿಗೆ ಹಣ ಕೊಟ್ಟು ಅವರ ಬಾಯಿ ಮುಚ್ಚಿಸ ಬಹುದು. ಆದ್ರೆ ಈ ಕೇಸ್​​ನಿಂದ ದರ್ಶನ್ ಬಚಾವ್ ಆಗೋದು ಸುಲಭ ಅಲ್ಲ. ಯಾಕಂದ್ರೆ ಇದು ಸರ್ಕಾರ ಮತ್ತು ನಮ್ಮ ವ್ಯವಸ್ಥೆಯ ವಿರುದ್ಧ ಆದ ಪ್ರಕರಣ. ಅತ್ಯಾಚಾರ, ಕೊಲೆಯಂತದ ಗಂಭೀರ ಪ್ರಕರಣ ಆದಾಗ ಸಂಧಾನ ಅನ್ನೋ ಮಾತೇ ಬರಲ್ಲ. ಈ ಪ್ರಕರಣಗಳನ್ನ ಸರ್ಕಾರವೇ ದಾಖಲಿಸಿಕೊಂಡು ಶಿಕ್ಷೆ ಕೊಡಿಸುತ್ತೆ. ಇಲ್ಲಿ ರೇಣುಕಾ ಸ್ವಾಮಿ ಕುಟುಂಬ ಬಂದು ಸಾಕ್ಷಿ ಹೇಳಬಹುದೇ ಹೊರತು ಸಂಧಾನ ಮಾಡಿಕೊಂಡಿದ್ದೇವೆ ಈ ಕೇಸ್​​ನ ಕೈ ಬಿಡಿ ಅಂತ ಹೇಳೋದಕ್ಕೆ ಅವಕಾಶವೇ ಇಲ್ಲ.

ಈ ಮಧ್ಯೆ ದರ್ಶನ್ ಮತ್ತು ರೇಣುಕಾ ಸ್ವಾಮಿ ಕುಟುಂಬ ಸಂಧಾನ ಮಾಡಿಕೊಳ್ಳಲಿದೆ ಅನ್ನೋ ಮಾತಿಗೆ ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ. ಒಂದು ವೇಳೆ ದರ್ಶನ್ ನಮ್ಮ ಮನೆಗೆ ಬಂದರೆ ಬರಲಿ. ಅವತ್ತು ಏನಾಗುತ್ತದೋ ನೋಡೋಣ. ನಾವು ಯಾರನ್ನು ಶತ್ರು ಎನ್ನಲ್ಲ. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಯಾರೇ ಮನೆಗೆ ಬರ್ತೀನಿ ಅಂದ್ರು ಬನ್ನಿ ಎನ್ನುತ್ತೇವೆ. ಬಂದ್ರೆ ಬನ್ನಿ ಕೂತ್ಕೊಳಿ, ಊಟ ಮಾಡಿ ಹೋಗಿ ಅಂತೀವಿ ಅಷ್ಟೇ. ಅವರು ಬಂದು ಕ್ಷಮೆ ಕೇಳುವ ಬಗ್ಗೆ ಈಗ ಯಾಕೆ ಮಾತಾಡೋಣ ಎಂದಿದ್ದಾರೆ.

Advertisement
Advertisement