ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Chitral Rangaswamy: ಹೆಣ್ಣು ಮಕ್ಕಳಿಗೆ ನ್ಯಾಯ, ರಕ್ಷಣೆ ಸಿಗಬೇಕಂದ್ರೆ ದರ್ಶನ್ ರಾಜ್ಯದ ಸಿಎಂ ಆಗ್ಬೇಕು - ಚಿತ್ರಾಲ್ ಅಚ್ಚರಿ ಸ್ಟೇಟ್ಮೆಂಟ್ !!

Chitral Rangaswamy: ಚಿತ್ರಾಲ್ ರಂಗಸ್ವಾಮಿ ದರ್ಶನ್ ಪರ ಬ್ಯಾಟ್ ಬೀಸಿ, ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕೆಂದರೆ ದರ್ಶನ್ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ.
08:04 AM Jul 02, 2024 IST | ಸುದರ್ಶನ್
UpdateAt: 08:10 AM Jul 02, 2024 IST
Advertisement

Chitral Rangaswamy: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ತನಿಖೆ ನಡೆಯುತ್ತಲೇ ಇದೆ. ಈ ಬೆನ್ನಲ್ಲೇ ದರ್ಶನ್ ಆತ್ಮೀಯರು, ಕುಟುಂಬದವರು ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಇದರ ಎಡೆಯಲ್ಲಿ ಕೆಲವು ನಟ, ನಟಿಯರು ದರ್ಶನ್(Darshan) ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನು ಮೆಚ್ಚಿಸಲು ಈ ಕೆಲಸವೋ ಗೊತ್ತಿಲ್ಲ. ಅಂತೆಯೇ ಇದೀಗ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ(Chitral Rangaswamy) ದರ್ಶನ್ ಪರ ಬ್ಯಾಟ್ ಬೀಸಿ, ಕಲ್ಪನೆಗೂ ನಿಲುಕದ ಹೇಳಿಕೆ ನೀಡಿದ್ದಾರೆ.

Advertisement

D V Sadananda Gowda: ಮೋದಿಯ ಮೇಲಿಟ್ಟ ಅತಿಯಾದ ಆತ್ಮವಿಶ್ವಾಸವೇ ನಮ್ಮನ್ನು ಸೋಲಿಸಿತು – ಬಿಜೆಪಿ ವಿರುದ್ಧ ಸಿಡಿದೆದ್ದ ಸದಾನಂದ ಗೌಡ !!

Advertisement

ಹೌದು, ಕೆಲವು ದಿನಗಳ ಹಿಂದಷ್ಟೇ ರೇಣುಕಾಸ್ವಾ(Renukaswamy) ಮಿ ನನಗೂ ಅಶ್ಲೀಲ ಮೆಸೇಜ್‌ ಮಾಡಿದ್ದ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದ ಪವರ್‌ ಗರ್ಲ್‌ ಚಿತ್ರಾಲ್‌ ರಂಗಸ್ವಾಮಿ, ದರ್ಶನ್‌ ಕುರಿತಾಗಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅದೇನೆಂದರೆ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕೆಂದರೆ ದರ್ಶನ್ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಆಗ ಮಾತ್ರ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ.

ಚಿತ್ರಾಲ್ ಹೇಳಿದ್ದೇನು?
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಿತ್ರಾಲ್‌ ರಂಗಸ್ವಾಮಿ, 'ನನಗೆ ಇನ್ನೊಂದು ಆಸೆ ಇದೆ. ಅದೇನೆಂದರೆ, ದರ್ಶನ್‌ ಅವರು ಕ್ಲೀನ್‌ ಆಗಿ ಬಂದ ಮೇಲೆ, ರಾಜಕೀಯಕ್ಕೆ ಹೋಗಿ ಸಿಎಂ ಆಗಬೇಕು. ಹಾಗೇನಾದರೂ ಹೆಣ್ಣುಮಕ್ಕಳಿಗೆ ನಿಜವಾಗಿಯೂ ನ್ಯಾಯ ಸಿಗುತ್ತದೆ. ಯಾಕೆಂದರೆ ರೇಪ್‌ ಮಾಡೋರು, ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತೇನೆ. ನಾನೂ ಕೂಡ ದರ್ಶನ್‌ ಸಿಎಂ ಸ್ಥಾನದಲ್ಲಿ ಇರಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ದರ್ಶನ್ ನನ್ನು ಭೇಟಿಯಾಗಿದ್ದರು. ಇದೀಗ ಈ ಪ್ರಕರಣದಲ್ಲಿ ಮೌನ ವಹಿಸಿದ್ದ ದರ್ಶನ್‌ ಅವರ ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್‌ ತೂಗುದೀಪ ಕೂಡ ಸೋಮವಾರ ಜೈಲಿನಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜುಲೈ 4ರತನಕ ದರ್ಶನ್‌ ಜೈಲಿನಲ್ಲಿಯೇ ಇರಲಿದ್ದು, ಆ ನಂತರವೇ ಅವರ ಜಾಮೀನು ಬಗ್ಗೆ ನಿರ್ಧಾರವಾಗಲಿದೆ.

Advertisement
Advertisement