Darshan: ಜೈಲಿಂದಲೇ ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ದರ್ಶನ್ - ಏನದು ?!
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಜೈಲಿಂದಲೇ ಅಭಿಮಾನಿಗಳಿಗೆ ಹೊಸ ಮನವಿ ಮಾಡಿದ್ದಾರೆ.
02:04 PM Jun 28, 2024 IST | ಸುದರ್ಶನ್
UpdateAt: 02:04 PM Jun 28, 2024 IST
Advertisement
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಜೈಲಿಂದಲೇ ಅಭಿಮಾನಿಗಳಿಗೆ ಹೊಸ ಮನವಿ ಮಾಡಿದ್ದಾರೆ.
Advertisement
ಹೌದು, ಜೈಲಿನಲ್ಲಿರುವ ದರ್ಶನ್(Darshan) ಜೈಲಿನಿಂದಲೇ ಜೈಲಾಧಿಕಾರಿಗಳ(Jail Officer's) ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದು, ಯಾರೂ ಕೂಡ ತನ್ನನ್ನು ನೋಡಲು ಬರಬೇಡಿ, ನನಗೆ ಏನು ಆಗುವುದಿಲ್ಲ ಎಂದು ಮನವಿ ಮಾಡಿದ್ದಾರೆ.
Advertisement
ದರ್ಶನ್ ಕೊಟ್ಟ ಸಂದೇಶವೇನು?
ಅಭಿಮಾನಿಗಳು ಯಾರೂ ಜೈಲಿಗೆ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಹೀಗಾಗಿ ಯಾರು ಕೂಡ ಜೈಲಿನ ಬಳಿ ಬರಬೇಡಿ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಬೇಡ. ಅದರಲ್ಲೂ ನಿನ್ನೆ ವಿಶೇಷಚೇತನ ಯುವತಿ ಸೌಮ್ಯಾ ಭೇಟಿಗೆ ಆಗಮಿಸಿದ್ದ ಬಗ್ಗೆ ಬೇಸರವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Advertisement