ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Darshan property: ಪೋಲೀಸರ ಅತಿಥಿ ಆಗಿರೋ ದರ್ಶನ್ ಎಷ್ಟು ಕೋಟಿ ಒಡೆಯ ?!

Darshan property: ದರ್ಶನ್ ಬಳಿ ಇರುವ ಆಸ್ತಿ ವಿಚಾರವಾಗಿಯೂ ಚರ್ಚೆ ಶುರುವಾಗಿದೆ. ಹಾಗಿದ್ರೆ ದರ್ಶನ್ ಬಳಿ ಇರೋ ಆಸ್ತಿ(Darshan property) ಎಷ್ಟು? ಈತ ಎಷ್ಟು ಕೋಟಿ ಒಡೆಯ ಗೊತ್ತಾ?
12:36 PM Jun 18, 2024 IST | ಸುದರ್ಶನ್
UpdateAt: 01:27 PM Jun 18, 2024 IST
Advertisement

Darshan property: ರೇಣುಕಾಸ್ವಾಮಿ ಕೊಲೆ(Renukaswamy Murder Case) ಆರೋಪದಡಿಯಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಪೊಲೀಸ್‌ ಕಸ್ಟಡಿಯಲಿದೆ. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ. ಅಂತೆಯೇ ಇದೀಗ ದರ್ಶನ್ ಬಳಿ ಇರುವ ಆಸ್ತಿ ವಿಚಾರವಾಗಿಯೂ ಚರ್ಚೆ ಶುರುವಾಗಿದೆ. ಹಾಗಿದ್ರೆ ದರ್ಶನ್ ಬಳಿ ಇರೋ ಆಸ್ತಿ(Darshan property) ಎಷ್ಟು? ಈತ ಎಷ್ಟು ಕೋಟಿ ಒಡೆಯ ಗೊತ್ತಾ?

Advertisement

KSRTC: ಕೆಎಸ್​ಆರ್​ಟಿಸಿ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ! ರಸ್ತೆಗೆ ಇಳಿಯಲಿದೆ ಸಾವಿರಗಳಷ್ಟು ಹೊಸ ಬಸ್​!

ದರ್ಶನ್ ತೂಗುದೀಪ್(Darshan Thugudeep) ಅವರು ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, $ 12 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವರದಿಯೊಂದರ ಪ್ರಕಾರ, 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisement

ಅವರು ಮೈಸೂರನಲ್ಲಿ(Mysore)ಫಾರ್ಮ್ ಹೌಸ್ ಹೊಂದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಹಲವೆಡೆ ಜಮೀನು ಹಾಗೂ ಹೂಡಿಕೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಾಚುಗಳ ಕಲೆಕ್ಷನ್‌ಮ ಕಾರು ಹೊಂದಿದ್ದಾರೆ ಎನ್ನಲಾಗಿದೆ.

ದರ್ಶನ್ ಬಳಿ ಇರುವ ಕಾರುಗಳು:
ಬಿಳಿ ಬಣ್ಣದ ಲಂಬೋರ್ಗಿನಿ ಕಾರ್, ಪೋರ್ಶೆ, ಥಾರ್, ಫೋರ್ಡ್ ಎಂಡವಿಯ‌ರ್ ಇದರ ಬೆಲೆ ಮೂವತ್ತಾರು ಲಕ್ಷ ರೂಪಾಯಿ. ಇದಲ್ಲದೆ ಮಿನಿ ಕೂಪರ್ ಕಾರು ಹೊಂದಿದ್ದಾರೆ ಇದರ ಬೆಲೆ 47 ಲಕ್ಷ ಎನ್ನಲಾಗಿದೆ. ಅಲ್ಲದೆ 50 ಲಕ್ಷ ರೂಪಾಯಿಯ ಟೊಯೋಟ ಫಾರ್ಚುನರ್ ಕಾರ್, ಬಿಎಂಡೂ 520 ಡಿ ಕಾರು 65 ಲಕ್ಷ ರೂಪಾಯಿ, ಇದರೊಂದಿಗೆ 1 ಕೋಟಿ 16 ಲಕ್ಷದ ಮೌಲ್ಯದ ಆಡಿ ಕಾರು, ಜಾಗ್ವಾರ್ ಎಕ್ಸ್ ಕೆ ಕಾರು ಇದರ ಬೆಲೆ 1.2 ಕೋಟಿ, ಟೊಯೋಟಾ ವೆಲ್ಲೋರ್ ಇದರ ಬೆಲೆ 1.2 ಕೋಟಿ, ಇಲ್ಲದೆ ರೇಂಜ್ ರೋವರ್ ವೋಗ್ ಇದರ ಬೆಲೆ 2.64 ಕೋಟಿ. ಇದಲ್ಲದೆ ರೇಂಜ್ ರೋವರ್ ಡಿಫೆಂಡ್ ಇದರ ಬೆಲೆ 2.3 ಕೋಟಿ, ಲ್ಯಾಂಬೋರ್ಗಿನಿ ಹುರುಸ್ ಕಾರು 4.18 ಕೋಟಿ. ಲ್ಯಾಂಬೋರ್ಗಿನಿ ಅವೆಂಡ‌ರ್ ಎಸ್ 5 ಕೋಟಿ ಮೌಲ್ಯದ ಕಾರನ್ನು ಹೊಂದಿದ್ದಾರೆ ಎನ್ನಲಾಗಿದೆ.

ದರ್ಶನ್ ಬೆಳೆದು ಬಂದದ್ದು:
ದರ್ಶನ್ ತೂಗುದೀಪ ಹುಟ್ಟಿದ್ದು 16 ಫೆಬ್ರವರಿ 1977ರಲ್ಲಿ. ಸ್ಯಾಂಡಲ್ವುಡ್’ನ ಡಿ ಬಾಸ್ ಎಂದೇ ಪ್ರಸಿದ್ಧಿ ಪಡೆದಿದ್ದ ನಟ, ನಿರ್ಮಾಪಕ ಮತ್ತು ವಿತರಕ. ದರ್ಶನ್ 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಪ್ರಾರಂಭಿಸಿದ್ದರು. ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ದರ್ಶನ್, 2002ರಲ್ಲಿ ತೆರೆಕಂಡ ಚಲನಚಿತ್ರ ಮೆಜೆಸ್ಟಿಕ್ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಯಜಮಾನ (2019), ರಾಬರ್ಟ್ (2021), ಕಾಟೇರ (2023), ಗಜ (2008), ನವಗ್ರಹ (2008), ಸಾರಥಿ (2011), ಬುಲ್ ಬುಲ್ (2013), ಕರಿಯಾ (2003) ಹೀಗೆ ಅನೇಕ ಹಿಟ್ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಸದ್ಯ ಕೊಲೆ ಪ್ರಕರಣದಡಿ ಪೋಲೀಸರ ಅತಿಥಿಯಾಗಿದ್ದಾರೆ.

ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಈ ಕಾರ್ಡ್ ಮೂಲಕ ಹಲವು ಸೇವಾ ಸೌಲಭ್ಯ ಪಡೆಯಲಿದ್ದೀರಿ!

Advertisement
Advertisement