ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Harish Poonja: ನೈಜ ವಿಷಯ ಮುಚ್ಚಿಟ್ಟು ಪತ್ರಿಕೆ ಮೇಲೆ ಏಕಾಏಕಿ ಮುಗಿಬಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

Dakshina Kannada (ಬೆಳ್ತಂಗಡಿ): ಕಳೆಂಜ ಗ್ರಾಮ ಪಂಚಾಯತ್ (Kalenja Grama Panchayath) ವ್ಯಾಪ್ತಿಯ ಅರಣ್ಯ ಒತ್ತುವರಿ ಪ್ರಕರಣಗಳನ್ನು ಪರಿಹರಿಸುವ ಕುರಿತು ಕರೆದ ಸಭೆಯಲ್ಲಿ ವಾಸ್ತವ ಸಂಗತಿ ಮುಚ್ಚಿಟ್ಟು ಪತ್ರಿಕಾ ಮಾಧ್ಯಮ ಒಂದರ ನಿರಂತರವಾಗಿ ಹರಿಹಾಯ್ದಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ (Belthangady Harish Poonja).
09:44 PM Mar 11, 2024 IST | ಕೆ. ಎಸ್. ರೂಪಾ
UpdateAt: 06:51 AM Mar 25, 2024 IST
Advertisement

Dakshina Kannada (ಬೆಳ್ತಂಗಡಿ): ಕಳೆಂಜ ಗ್ರಾಮ ಪಂಚಾಯತ್ (Kalenja Grama Panchayath) ವ್ಯಾಪ್ತಿಯ ಅರಣ್ಯ ಒತ್ತುವರಿ ಪ್ರಕರಣಗಳನ್ನು ಪರಿಹರಿಸುವ ಕುರಿತು ಕರೆದ ಸಭೆಯಲ್ಲಿ ವಾಸ್ತವ ಸಂಗತಿ ಮುಚ್ಚಿಟ್ಟು ಪತ್ರಿಕಾ ಮಾಧ್ಯಮ ಒಂದರ ನಿರಂತರವಾಗಿ ಹರಿಹಾಯ್ದಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ (Belthangady Harish Poonja). ಪೂಂಜಾರನ್ನು ಹೆಗಲ ಮೇಲೆ ಹೊತ್ತು ಮೆರಿಸಿ ಅವರಿಗೆ ವ್ಯಾಪಕ ಪ್ರಚಾರ ನೀಡಿದ ಇಂತಹಾ ಪತ್ರಿಕಾ ತಂಡದ ಮೇಲೆ ಅವರು ಈಗ ಸವಾರಿ ನಡೆಸಿದ್ದು ಯಾಕೆ, ಎನ್ನುವ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ. ಶಾಸಕ ಹರೀಶ್ ಪೂಂಜಾ ಎಗರಾಟ ಯಾವ ಮಟ್ಟಕ್ಕೆ ಇತ್ತು ಎಂದರೆ, ಪೂಂಜಾರ ಪಿಎ ಎದ್ದು ಬಂದು, "ಕೂಲ್ ಡೌನ್ ಸರ್" ಅಂತ ಹೇಳಿ ಹೆಗಲು ತಟ್ಟಿ ಕೂರಿಸುವಷ್ಟು ಹರೀಶ್ ಪೂಂಜಾ ಹಾಟ್ ಆಗಿದ್ದಾರೆ !

Advertisement

Intresting News: ಆರ್ಮಿಯೇ ಮುಗಿಬಿದ್ದು ಕೊಳ್ಳುವ ಈ ಕಾರಿನ ಪವರ್ ಏನು ಗುರೂ?: 130 ಕುದುರೆ ಶಕ್ತಿಗೂ ಜಗ್ಗದ ಈ…

ಘಟನೆಯ ಪೂರ್ತಿ ವಿವರ:

ಘಟನೆ ಇಂದು ಬೆಳಿಗ್ಗೆ, ಮಾ.11ರಂದು ನಡೆದಿದೆ. ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕ ಹರೀಶ್ ಪೂಂಜ ಬೇಡಿಕೆಯಂತೆ ಅರಣ್ಯ ಇಲಾಖೆಯು ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆಯೊಂದಿಗೆ ಜಂಟಿಯಾಗಿ ನಡೆಸಿದ್ದು, ಅದರಲ್ಲಿ 94 ಮಂದಿ ಒತ್ತುವರಿದಾರರನ್ನು ಗುರುತಿಸಿ ಇಲಾಖೆಯು ಗ್ರಾಪಂಗೆ ಪತ್ರ ಬರೆದಿತ್ತು. ಅದರಲ್ಲಿ ಆ 94 ಮಂದಿಗೆ ನೀಡಿರುವ ಸರಕಾರಿ ಸವಲತ್ತುಗಳ ಕುರಿತು ಇಲಾಖೆಯು ಮಾಹಿತಿ ಕೋರಿತ್ತು.

Advertisement

Intresting News: ಬಲಿ ಕೊಟ್ಟ ಮೇಕೆಯ ಆಹಾರ ಸೇವನೆ! ಕೂಡಲೇ ಮೃತಪಟ್ಟ ವ್ಯಕ್ತಿ!!!

ಈ ಕುರಿತು ಸ್ಥಳೀಯ 'ಸುದ್ದಿ ಬಿಡುಗಡೆ' ಪತ್ರಿಕೆಯು ಮಾಹಿತಿ ಹಕ್ಕು ಮೂಲಕ ಪಡೆದ ದಾಖಲೆ ಸಹಿತ ವಿಶೇಷ ವರದಿ ಪ್ರಕಟಿಸುವ ಮೂಲಕ, ಅರಣ್ಯ ಇಲಾಖೆಯ ಪತ್ರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿತ್ತು. ಆದರೆ, ಈ ಕುರಿತು ಚರ್ಚೆ ನಡೆಸಿ, ಸಾರ್ವಜನಿಕರ ಗೊಂದಲ ನಿವಾರಿಸುವ ಬದಲು ಪತ್ರಿಕೆಯ ಮೇಲೆ ಗೂಬೆ ಕೂರಿಸಿ ಶಾಸಕರು ನುಣುಚಿಕೊಂಡಿದ್ದಾರೆ. ಆ ಮೂಲಕ ಪ್ರಕರಣಕ್ಕೆ ರಾಜಕೀಯ ಲೇಪ ನೀಡಿ, ಚೀಪ್ ತಂತ್ರಗಾರಿಕೆಗೆ ಹರೀಶ್ ಪೂಂಜಾ ಇಳಿದಿದ್ದಾರೆ.

ಅಧಿಕಾರಿಗಳಿಲ್ಲದ ಸಭೆಯಲ್ಲಿ ಹರೀಶ್ ಪೂಂಜಾ ಎಗರಾಟ:

ಕಳೆಂಜದ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾ.11ರಂದು ಮಧ್ಯಾಹ್ನ ಬಳಿಕ ಸಭೆ ಕರೆಯಲಾಗಿತ್ತು. ಸಾರ್ವಜನಿಕ ಸಭೆ ನಡೆಸುವ ಬದಲು ಪಕ್ಷದ ಸಭೆಯಂತೆ ನಡೆದುಕೊಳ್ಳಲಾಗಿದೆ. ಈ ಸಭೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಲಿ, ಅರಣ್ಯ ಇಲಾಖೆಯ ಅಧಿಕಾರಿಗಳ ಸಹಿತ ಯಾವುದೇ ಅಧಿಕಾರಿಗಳನ್ನು ಕೂಡಾ ಅವರು ಆಹ್ವಾನಿಸಿರಲಿಲ್ಲ.

ಅರಣ್ಯ ಇಲಾಖೆಯು ಸರ್ವೇ ನಡೆಸಿರುವುದು, ಜತೆಗೆ 94 ಮಂದಿ ಒತ್ತುವರಿದಾರರೆಂದು ಗುರುತಿಸಿರುವುದನ್ನು ದಾಖಲೆ ಸಮೇತ ವರದಿ ಮಾಡಿದ ಸುದ್ದಿ ಬಿಡುಗಡೆ ಪತ್ರಿಕೆಯ ವಿರುದ್ಧ ಬಳಸಬಾರದ ಭಾಷೆಯಲ್ಲಿ ಜನಪ್ರತಿನಿಧಿಯಾಗಿರುವ ಶಾಸಕ ಹರೀಶ್ ಪೂಂಜ ವಾಗ್ದಾಳಿ ನಡೆಸಿದರೇ ಹೊರತು ವಾಸ್ತವ ವಿಚಾರಗಳತ್ತ ಸಣ್ಣ ಟಾರ್ಚ್ ನಷ್ಟು ಬೆಳಕು ಕೂಡಾ ಚೆಲ್ಲಲಿಲ್ಲ. ಇವತ್ತಿನ ಸಭೆ ವಾಸ್ತವ ಸಂಗತಿ ಎದುರಿಗೆ ಇಟ್ಟ ಪತ್ರಿಕೆಯನ್ನು ಹೀಯಾಳಿಸುವುದಕ್ಕಷ್ಟೇ ಸೀಮಿತವಾಯಿತು. ಇವತ್ತಿನ ಸಭೆಯನ್ನು ದೇವಸ್ಥಾನ ಒಂದರಲ್ಲಿ ಕರೆಯಲಾಗಿತ್ತು. ಅಲ್ಲಿ ಬಿಜೆಪಿ ಬೆಂಬಲಿತ ವ್ಯಕ್ತಿಗಳೇ ತುಂಬಿದ್ದರು, ಕೆಲವೇ ಕೆಲವು ಸಂತ್ರಸ್ತ ಅಥವಾ ಆ 94 ಮಂದಿಯ ಕಡೆಯಿಂದ ಬಂದಿದ್ದರು.

ಗ್ರಾಮಸ್ಥರನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಾ ಅಸಲಿ ಸಂಗತಿ ಗುಟ್ಟಾಗಿಟ್ಟರು!
ಕಳೆಂಜ ಗ್ರಾಮದ ಅಮ್ಮಿನಡ್ಕದಲ್ಲಿ ದೇವಣ್ಣ ಗೌಡರ ಪುತ್ರ ಲೋಲಾಕ್ಷ ಅವರು ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ತಡೆದಿದ್ದ ಶಾಸಕ ಹರೀಶ್ ಪೂಂಜ, 'ಅರಣ್ಯ ಭೂಮಿಯಾಗಿದ್ದರೆ ನಾನೇ ತೆರವು ಮಾಡಿಸುವೆ' ಎಂದು ಹೇಳಿದ್ದರು. ಇದೇ ವಿಚಾರವನ್ನು ಸುದ್ದಿ ಬಿಡುಗಡೆ ಪತ್ರಿಕೆಯು ವರದಿಯಲ್ಲಿ ಉಲ್ಲೇಖಿಸಿತ್ತು. ಇದಕ್ಕೆ ಶಾಸಕ ಹರೀಶ್ ಪೂಂಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ನಾನು ಲೋಲಾಕ್ಷ ಅವರ ಮನೆಯ ಕುರಿತಾಗಿ ಮಾತ್ರ ಈ ಹೇಳಿಕೆ ನೀಡಿದ್ದೆ' ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದರು. ಇದಕ್ಕೆ ಸ್ಥಳದಲ್ಲಿದ್ದ ಶಾಸಕರ ಕೆಲವು ಬೆಂಬಲಿಗರೂ ದನಿಗೂಡಿಸಿದ್ದು, 'ಎಲ್ಲರಿಗೂ ಅನ್ವಯಿಸುವಂತೆ ಈ ಹೇಳಿಕೆಯನ್ನು ಶಾಸಕರು ನೀಡಿರಲಿಲ್ಲ. ಆದರೆ, ಪತ್ರಿಕೆಯು ತನ್ನ ವರದಿಯಲ್ಲಿ ದಾರಿ ತಪ್ಪಿಸುವ ಕೆಲಸ ಮಾಡಿದೆ' ಎಂದು ಆಪಾದಿಸಿದರು.

ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆಗೆ ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸರ್ವೇ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಇದರಲ್ಲಿ ಕಾಂಗ್ರೆಸ್ ಮತ್ತು ರಕ್ಷಿತ್ ಶಿವರಾಂ ಕೈವಾಡ, ಷಡ್ಯಂತ್ರವಿದೆ. ಸುಪ್ರೀಂ ಕೋರ್ಟಿನವರೆಗಾದರೂ ಸರಿಯೇ, ಇದಕ್ಕೆ ಸಂಬಂಧಪಟ್ಟ ಎಲ್ಲ ಖರ್ಚುಗಳನ್ನು ನಾನೇ ನೋಡಿಕೊಳ್ಳುತ್ತೇನೆ. ಗ್ರಾಮಸ್ಥರ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು. ಜನಸಾಮಾನ್ಯರ ಸಮಸ್ಯೆಗೆ ಹಾಗೆ ರಾಜಕೀಯದ ಬಣ್ಣ ಬೆರೆಸಿದರು. ಇದೆಲ್ಲಾ ಯಾಕೆ ಬೇಕು? ವಾಸ್ತವವಾಗಿ ಹಲವಾರು ದಶಕಗಳಿಂದ ಅಲ್ಲಿ ಮನೆ ಮಠ ಮಾಡಿಕೊಂಡು ಕುಟುಂಬ ಸಂಸಾರ ಸಮೇತ ಹಲವು ಕುಟುಂಬಗಳು ಬದುಕುತ್ತಿವೆ. ಬದುಕಲು ಒಂದು ನೆಲೆ ಅಂತ ಇದ್ದ ಜಾಗದಲ್ಲಿ ಗುಡಿಸಲು ಮನೆ ಕಟ್ಟಿಕೊಂಡು ವಾಸಕ್ಕೆ ತೊಡಗುವುದು ಸಹಜ. ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಹೀಗೆ ವಾಸಿಸಲು ಮನೆ ಕಟ್ಟಲು ಮತ್ತು ಇನ್ನಿತರ ಕೃಷಿ ಚಟುವಟಿಕೆ ಮಾಡಲು ಬಿಟ್ಟು ಇದೀಗ ಹಲವಾರು ದಶಕಗಳ ನಂತರ ಎಚ್ಚೆತ್ತುಕೊಂಡು ಒಕ್ಕಲಿಬ್ಬಿಸಲು ಹೊರಟಾಗ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ರೊಚ್ಚಿಗೇಡುವುದು ಸಹಜ. ಅತ್ತ ಅರಣ್ಯ ಇಲಾಖೆ ಸರ್ವೆ ನಡೆಸಿ ಅರಣ್ಯ ಒತ್ತುವರಿ ಮಾಡುವವರನ್ನು ಎಬ್ಬಿಸುವ ಕೆಲಸ ಶುರು ಮಾಡುವುದು ಕೂಡ ಸಹಜ. ಇವೆರಡರ ಮಧ್ಯೆ ಎಷ್ಟು ವರ್ಷಗಳ ಕಾಲ ಅಲ್ಲಿರುವ ಕುಟುಂಬಗಳ ಬಗ್ಗೆ ಕೂಡಾ ಯೋಚಿಸಬೇಕು. ಇಂತಹದೊಂದು ಮಧ್ಯಸ್ತಿಕೆ, ಎಲ್ಲರನ್ನೂ ಕರೆಸಿ ಒಂದು ಸಮಾಲೋಚನೆ ನಡೆಸುವುದು ಬಿಟ್ಟು ವರದಿ ಮಾಡಿದ ಪತ್ರಿಕೆಗಳ ಮೇಲೆ ಎಗರಾಡಿದರೆ ಏನು ಲಾಭ ? ಹಾಗಂತ ಜನ ಕೇಳುತ್ತಿದ್ದಾರೆ. ಶಾಸಕ ಹರೀಶ್ ಪೂಂಜಾ ಯೋಚಿಸಬೇಕು...!!!

Related News

Advertisement
Advertisement