Dakshina Kannada: ಮಂಗಳೂರಿಗೆ ಬಂದಿಳಿದ ಸೌಜನ್ಯ ಹೋರಾಟಗಾರರ ತಂಡ; ವ್ಯಾಪಕ ಬೆಂಬಲ, ಮುಂದಿನ ನಡೆಯ ಕುರಿತು ಹೇಳಿದ್ದೇನು?
ಮಂಗಳೂರಿನಿಂದ ದೆಹಲಿಗೆ ಹೊರಟ ಸೌಜನ್ಯ ಹೋರಾಟಗಾರರು ಇದೀಗ ಮಂಗಳೂರಿಗೆ ಬಂದಿದ್ದು, ತಮ್ಮ ಮುಂದಿನ ಸೌಜನ್ಯ ಹೋರಾಟದ ಕುರಿತು ಮಾತನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kodi shri: ನಿಜವಾಯ್ತು ಕೋಡಿ ಶ್ರೀಗಳು ನುಡಿದ ಭಯಾನಕ ಸತ್ಯ - ಏನದು ಗೊತ್ತಾ?!
ದೆಹಲಿ ನ್ಯಾಯಪರ ಹೋರಾಟಕ್ಕೆ ನಿರ್ಭಯಾ ಧರ್ಮಸ್ಥಳ ನ್ಯಾಯ ಪರ ಹೋರಾಟಕ್ಕೆ ಕಳೆದ ಒಂದು ತಿಂಗಳಿನಿಂದ ತಯಾರಿ ನಡೆದಿತ್ತು. ಇಡೀ ರಾಷ್ಟ್ರದ ಗಮನ ಸೆಳೆಯಬೇಕೆನ್ನುವ ಉದ್ದೇಶ, ಆಡಳಿತಯಂತ್ರವನ್ನು ಎಚ್ಚರಿಸಬೇಕೆನ್ನುವ ಉದ್ದೇಶದಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರ ಸಮ್ಮುಖದಲ್ಲಿ ದೆಹಲಿ ಹೋರಾಟವನ್ನು ಕೈಗೊಳ್ಳಲಾಗಿತ್ತು. ನಾವು ಹೋರಾಟಗಾರರು ಏನು ಮಾಡುತ್ತೇವೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ.
ಇದು ನಮ್ಮ ಸಂಭ್ರಮದ ಕ್ಷಣಗಳು ಅಲ್ಲ. ಹೋರಾಟದ ಉತ್ಸಾಹ ನೋಡಿ ನಮಗೆ ಖುಷಿ ಆಗುತ್ತದೆ. ದೆಹಲಿ ಮಟ್ಟದಲ್ಲಿ ಕೂಡಾ ಮುಖವಾಡ ಹಾಕಿ ಮಂಗ ಮಾಡೋಕೆ ನೋಡಿದ್ರು, ಆ ಮುಖವಾಡವನ್ನು ನಾವು ತೆಗೆದಿದ್ದೇವೆ. ದೆಹಲಿಯ ಪೊಲೀಸರು, ದೆಹಲಿಯ ಆಟೋ ರಿಕ್ಷಾ ಚಾಲಕ ಸಂಘದವರು ಕೂಡಾ ನಮಗೆ ಸಪೋರ್ಟ್ ಮಾಡಿದರು. ಸುಪ್ರೀಂಕೋರ್ಟ್‌ನ ವಕೀಲರು ನಮ್ಮ ಬೆಂಬಲಕ್ಕೆ ಬಂದಿದ್ರು. ನಮ್ಮ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದವನ್ನು ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.
12 ವರ್ಷದ ಹೋರಾಟ ಹಳ್ಳಿಯಿಂದ ದಿಲ್ಲಿಗೆ ಮುಟ್ಟಿದೆ. ಇಲ್ಲಿಂದ ದಿಲ್ಲಿ ತನಕ ಯಾವ ರೀತಿ ಹೋಗಿದ್ದೇವೆ ನಾವು ಅನ್ನುವುದು ನೀವು ನೋಡಿದ್ದೀರಿ. ಕಣ್ಣಿಗೆ ಕಾಣದಂತಹ ಎಲೆಮರೆಕಾಯಿಯಂತೆ ನಮಗೆ ಸಹಾಯ ಮಾಡಿದವರು ನಮಗೆ ಸಹಕಾರ ಮಾಡಿದ್ದಾರೆ. ಈ ಹೋರಾಟದ ಕಿಚ್ಚು ಇದು ಕೇವಲ ಝಲಕ್ ಅಷ್ಟೇ. ಕಾನೂನಿನ ಆಸುಪಾಸಿನಲ್ಲಿ ಈ ಕೇಸನ್ನು ಕಟ್ಟಿ ಹಾಕುವ ಕೆಲಸ ನಡೆದಿದೆ. ಆ ಬೇರುಗಳಿಗೆ ಎಲ್ಲಾ ಶಕ್ತಿಯನ್ನು ಕೊಟ್ಟು, ಅದರಿಂದ ಕಾನೂನಿನ ಮರ ಬೆಳೆಸಿ, ಅದರಿಂದ ಫಲ ಬೆಳೆಸುವುದನ್ನು ನಾವು ಮಾಡುತ್ತೇವೆ.
ಮುಂದಿನ ದಿನಗಳಲ್ಲಿ ಕ್ರಾಂತಿಯುತ ಹೋರಾಟ ನಡೆಯುವುದಿಲ್ಲ. ಆದಷ್ಟು ಬೇಗ ಚುನಾವಣೆ ಬರುತ್ತದೆ. ಕಾಮಾಂಧರನ್ನು ರಕ್ಷಣೆಯನ್ನು ಮಾಡಿದ ರಾಜಕೀಯ ಪಾಪಿಗಳಿದ್ದಾರೆ? ಇವರನ್ನೆಲ್ಲ ರಸ್ತೆಗಿಳಿಯಲು ಬಿಡುವುದಿಲ್ಲ. ಸೌಜನ್ಯಗೆ ನ್ಯಾಯ ಕೊಟ್ಟೇ ನಿಮ್ಮ ಎಲೆಕ್ಷನ್ ಮಾಡಬೇಕು. ಯಾವ ಜಿಲ್ಲೆಯಲ್ಲಿ ಇದು ನಡೆದಿದೆಯೋ? ಅಲ್ಲಿ ನಿಮ್ಮನ್ನು ಓಡಾಟ ಮಾಡಲು ಬಿಡುವುದಿಲ್ಲ. ಯಾವುದೇ ಪಕ್ಷ ಇರಲಿ, ನಿಮ್ಮನ್ನು ಬಿಡುವುದಿಲ್ಲ. ನಮಗೆ ಬೇಕಾಗಿರುವುದು ನ್ಯಾಯ, ಧರ್ಮ. ಚುನಾವಣೆ ಮಾಡೋಕೂ ಬಿಡುವುದಿಲ್ಲ.
ಯಾರು ನಮ್ಮ ಜೊತೆ ಕೈ ಜೋಡಿಸ್ತಾರೋ, ಎಂಡೋಮೆಂಟ್ ಇದೆಯೋ ಆ ದೇವಸ್ಥಾನ, ನಮ್ಮಪ್ಪನ ಆಸ್ತಿ ಮಾಡಿಕೊಂಡಿದ್ದಾರೋ ಮುಜರಾಯಿ ಇಲಾಖೆಗೆ ಕೊಟ್ಬಿಡಿ. ಯಾಕೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಮಾಡ್ತೀರೋ.
ದ.ಕ. ಜಿಲ್ಲೆಯ ಪೊಲೀಸನವರು ದೆಹಲಿಗೆ ಹೋಗಿ ಅಲ್ಲಿನ ಕಚೇರಿಯ ಪೊಲೀಸನವರ ಟಾಯ್ಲೆಟ್‌ನನ್ನು ತೊಳೆದುಕೊಂಡು ಬರಬೇಕು. ನಮ್ಮನ್ನು ಅರೆಸ್ಟ್ ಮಾಡಿ ಬಿಡುವಾಗ, ಅಲ್ಲಿನ ಪೊಲೀಸನವರು, ನಿಮ್ಮನ್ನು ನಾವು ಹೇಗೆ ಅರೆಸ್ಟ್ ಮಾಡುವುದು? ನೀವು ಹೋಗಿ ಎಂದು ಕಳುಹಿಸಿಕೊಟ್ಟರು. ಇಲ್ಲಿ ಆಗಿದ್ದರೆ? ಕಾಮಾಂಧರ ಶಕ್ತಿಯಿಂದಾಗಿ ಜೈಲಿಗೆ ಕಳುಹಿಸ್ತಿದ್ದರು. ಹ್ಯೂಮನ್ ರೈಟ್ಸ್, ನ್ಯಾಷನಲ್, ಇಂಟರ್‌ನ್ಯಾಷನಲ್ ಅಂತೆ ಎಲ್ಲಾ ಪಾಪಿಗಳು ಕಾಮಾಂಧರ ಕಾಲಿನಡಿಯಲ್ಲಿ ನತಮಸ್ತಕರಾಗಿದ್ದಾರೆ. ಒಂದು ಹತ್ತು ಪೈಸೆ ಕೆಲಸ ಮಾಡಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಮಾಡ್ತಾ ಇದ್ದಾರೆ ಪಾಪಿಗಳು ಎಂದು ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶಭರಿತರಾಗಿ ಹೇಳಿದ್ದಾರೆ.
ಮಾನವ ಹಕ್ಕು ಇಲ್ಲಿ ಇಲ್ಲ ಈ ದೇಶದಲ್ಲಿ. ಎಲ್ಲರೂ ದುಡ್ಡು ಮಾಡೋಕೆ ನೋಡ್ತಾ ಇದ್ದಾರೆ. ನಮ್ಮ ಕಾಲಿನ ಕಸಗಳು ಇವರುಗಳು. ಈ ಒಂದು ಪ್ರಕರಣಕ್ಕೆ ಒಂದು ಅಂತ್ಯ ಕಾಣದೆ ನಾವು ಬಿಡುವುದಿಲ್ಲ. ಮುಂದಿನ ಮಟ್ಟದಲ್ಲಿ ನಾವು ದೆಹಲಿ ಚಲೋ ಯಾತ್ರೆಗಿಂತ ದೊಡ್ಡ ಮಟ್ಟದ ಮಹತ್ತರವಾದ ಕಾರ್ಯಕ್ರಮವನ್ನು ಮಾಡುತ್ತೇವೆ. ಮಾ.10 ಪುತ್ತೂರು ತಾಲೂಕು ಕೊಳ್ತಿಗೆಯಲ್ಲಿ ಸಾಯಂಕಾಲ 3 ಗಂಟೆಗೆ ಸರಿಯಾಗಿ ಸೌಜನ್ಯ ಪರ ಜನಾಂದೋಲನ ಸಭೆ ನಡೆಯಲಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.