Dakshina kannada: ಜಿಲ್ಲೆಯ ಮಠ ಮಂದಿರಗಳ 'ಕೈ' ಹಿಡಿಯುವುದೇ ರಾಜ್ಯ ಸರ್ಕಾರ!? ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಶೀಘ್ರ ಬಿಡುಗಡೆಯತ್ತ ಬೇಕಿದೆ ಕರಾವಳಿಯ ಕೈ ನಾಯಕರ ಶ್ರಮ
ದಕ್ಷಿಣ ಕನ್ನಡ ಜಿಲ್ಲೆಯ ಮಠ ಮಂದಿರಗಳ ಕೆಲಸ ಕಾರ್ಯಗಳಿಗಾಗಿ ಕಳೆದ ಬಾರಿಯ ಬಿಜೆಪಿ ಸರ್ಕಾರ ಮೀಸಲಿಟ್ಟಿದ್ದ ಅನುದಾನ ತೆರೆಯ ಮರೆಗೆ ಸರಿದ ಬೇಸರವೊಂದು ಸದ್ಯ ಜಿಲ್ಲೆಯ ಭಕ್ತರನ್ನು ಕಾಡಿದೆ.ಕಳೆದ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಕೆಲ ದಿನಗಳ ಹಿಂದಷ್ಟೇ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಇಂತಹದೊಂದು ಅನುದಾನ ಮೀಸಲಿಟ್ಟಿದ್ದು, ಮಠ ಮಂದಿರಗಳ ಪೀಠಾಧಿಪತಿಗಳಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿದ ಬಳಿಕ ಅನುದಾನ ಬಿಡುಗಡೆಯ ಬಗ್ಗೆ ಯಾವುದೇ ಧ್ವನಿ ಬಾರದೇ ಇರುವುದು ಸದ್ಯ ಬೇಸರಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಹಲವಾರು ಮಠ ಮಂದಿರಗಳಿದ್ದು ಅವುಗಳಲ್ಲಿ ಕೆಲವೇ ಕೆಲವು ಮಠಗಳು ಅಭಿವೃದ್ಧಿ ಹೊಂದಿದ್ದು, ಭಕ್ತರ ಬರುವಿಕೆಯಿಂದ ಕೊಂಚ ಶ್ರೀಮಂತಿಕೆಯಿಂದ ಕೂಡಿದೆ. ಆದರೆ ಇನ್ನುಳಿದ ಮಠಗಳು ಅಭಿವೃದ್ಧಿ ಹೊಂದದ ಬ್ರಾಹ್ಮಣೇತರ ಮಠಗಳಾಗಿದ್ದು, ಜನಪ್ರತಿನಿಧಿಗಳು ಸರ್ಕಾರದ ಅನುದಾನಕ್ಕೆ ಕೈಚಾಚಿ ಅಭಿವೃದ್ಧಿ ಹೊಂದಬೇಕಾದ ಅನಿವಾರ್ಯತೆ ಇದೆ.ಇದೇ ಸಂದರ್ಭ ಅಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದ್ದ ಅನುದಾನದ ಪಟ್ಟಿಯಲ್ಲಿ ಬಡ ಮಠ, ಮಂದಿರಗಳನ್ನು ಗಣನೆಗೆ ತೆಗೆದುಕೊಳ್ಳದೆ ಅನುದಾನ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: Udupi News: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದು ಬಾವಿಗೆ ಬಿದ್ದ ವ್ಯಕ್ತಿ!!
ಆ ಬಳಿಕದ ಪಟ್ಟಿಯಲ್ಲಿ ಬ್ರಾಹ್ಮಣೇತರ ಬಡ ಮಠ ಮಂದಿರಗಳನ್ನು ಗುರುತಿಸಿ ಅನುದಾನದ ಭರವಸೆ ಜೊತೆಗೆ ಮೊತ್ತವನ್ನೂ ಕಾಯ್ದಿರಿಸಿದ್ದರಾದರೂ ಚುನಾವಣೆಯಲ್ಲಿ ಸರ್ಕಾರ ಬದಲಾಗಿ ಅನುದಾನಕ್ಕೆ ತಡೆ ಹಿಡಿದಿರುವುದು ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲೆ ಬೇಸರ ಮೂಡಿಸುವಂತಾಗಿದೆ. ಈಗಾಗಲೇ ಜಿಲ್ಲೆಯಿಂದ ಕೈ ಪಾಳಯದ ಇಬ್ಬರು ಶಾಸಕರಿದ್ದು, ಅದರಲ್ಲೂ ಸಭಾಪತಿಗಳಾದ ಯು.ಟಿ ಖಾದರ್ ಕೂಡಾ ಕರಾವಳಿಯ ಸೋಲಿಲ್ಲದ ಸರದಾರ.ಹೀಗಿರುವಾಗ ಈ ಮೊದಲು ಸಚಿವ, ಶಾಸಕರಾಗಿ ಅಧಿಕಾರ ಹಿಡಿದಿದ್ದ ಕೈ ಪಾಳಯದ ಮಾಜಿ ನಾಯಕರುಗಳು ಕೂಡಾ ಬಡ ಮಠ ಮಂದಿರಗಳ ಭಕ್ತರಾಗಿದ್ದು ಅನುದಾನ ಬಿಡುಗಡೆಗಾಗಿ ಒಕ್ಕೊರಲ ಧ್ವನಿ ಎತ್ತಬೇಕಿದೆ.
ಕಳೆದ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಕೆಲವೇ ದಿನಗಳಿರುವಾಗ ಬಿಜೆಪಿ ಸರ್ಕಾರ ಅನುದಾನ ಘೋಷಿಸಿದ್ದರೂ ಜಾರಿಗೆ ತರುವಲ್ಲಿ ವಿಫಲಗೊಂಡಿದ್ದೇ ಭರವಸೆ ಹುಸಿಯಾಗಿಸಿದೆ. ಅಲ್ಲದೇ ಅನುದಾನದ ಭರವಸೆಯಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಿರುವ ಮಠ ಮಂದಿರಗಳು ಅನುದಾನದ ಜಾರಿಯ ತಡೆ ಎಲ್ಲಾ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಕಾಂಗ್ರೆಸ್ ಪಾಳಯದ ಘಟಾನುಘಟಿ ನಾಯಕರೇ ತುಂಬಿರುವ ಕರಾವಳಿಯಲ್ಲಿ ಬಡ ಮಠ ಮಂದಿರಗಳಿಗಾಗಿ ಮೀಸಲಿಟ್ಟ ಅನುದಾನ ಬಿಡುಗಡೆಗೆ ಹಿರಿಯ ನಾಯಕರ ಹೈಕಮಾಂಡ್ ಮಟ್ಟಕ್ಕೆ ವಿಚಾರ ತಲುಪಿಸಬೇಕಾಗಿದೆ.
ಹಲವಾರು ಕಾರ್ಯಕ್ರಮಗಳಲ್ಲಿ ಸ್ವಾಮೀಜಿ, ಮಠ ಮಂದಿರಗಳ ಪೀಠಾಧಿಪತಿಗಳ ಜೊತೆ ವೇದಿಕೆ ಹಂಚಿಕೊಳ್ಳುವ ಕೈ ನಾಯಕರು ಮಠ ಮಂದಿರಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವ ಬಗ್ಗೆ ಅಧಿಕಾರಿಗಳ, ಸರ್ಕಾರದ ಗಮನಸೆಳೆಯಬೇಕಾಗಿದೆ.