ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangluru: ಮಂಗಳೂರಲ್ಲಿ ಕ್ರಿಶ್ಚಿಯನ್ ಶಾಲೆಗಳ ಬಹಿಷ್ಕಾರ - ಶಾಸಕರಿಂದಲೇ ಬಂತು ಕರೆ

10:10 AM Feb 13, 2024 IST | ಹೊಸ ಕನ್ನಡ
UpdateAt: 10:33 AM Feb 13, 2024 IST
Advertisement

Mangaluru: ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಅಯೋಧ್ಯಾ ರಾಮ ಮಂದಿರ ಹಾಗೂ ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಕರಣ ಕರಾವಳಿಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಶಾಲಾ ಮಂಡಳಿ ಶಿಕ್ಷಕಿಯನ್ನು ಶಾಲೆ ಅಮಾನತು ಮಾಡಿದೆ. ಆದರೂ ಈ ಬೆನ್ನಲ್ಲೇ ಮಂಗಳೂರಿನ ಕ್ರಿಶ್ಚಿಯನ್ ಶಾಲೆಗಳನ್ನು ಭಹಿಷ್ಕಾಸಲು ಸ್ವತಃ ಬಿಜೆಪಿ ಶಾಸಕರೇ ಕರೆ ನೀಡಿದ್ದಾರೆ.

Advertisement

ಇದನ್ನೂ ಓದಿ: UT Khader Car: ಸ್ಪೀಕರ್‌ ಖಾದರ್‌ ಅವರ ಹೊಸ ಐಷರಾಮಿ ಫಾರ್ಚುನರ್‌ ಕಾರು! ಈ ಕಾರಿನ ವೈಶಿಷ್ಟ್ಯವೇನು?

Advertisement

 

ಹೌದು, ಬಿಜೆಪಿ(BJP) ಶಾಸಕ ವೈ ಭರತ್ ಶೆಟ್ಟಿ(Bhart shetty) ಹಿಂದೂಗಳು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಶಾಲೆಗಳಿಗೆ ಸೇರಿಸುವುದನ್ನು ತಡೆಯಬೇಕು, ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಹಿಂದೂ ವಿರೋಧಿ ಭಾವನೆಗಳನ್ನು ವ್ಯಕ್ತಪಡಿಸುತ್ತಿವೆ. ಇದು ಮೊದಲೇನಲ್ಲ. ಹೀಗಾಗಿ ಕ್ರಿಶ್ಚಿಯನ್ ಶಾಲೆಗಳನ್ನು(Cristian school)ಭಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಏನು ಮಂಗಳೂರಿನ ಪ್ರಕರಣ?

ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ದೂರು ದಾಖಲಾಗಿದೆ. ವಿಹಿಂಪ ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.ಶಾಲೆಯ ಏಳನೇ ತರಗತಿ ಮಕ್ಕಳಿಗೆ ವರ್ಕ್ ಈಸ್ ವರ್ಶಿಪ್ ಎನ್ನುವ ಪಠ್ಯವಿದ್ದು, ಅದರ ನೆಪದಲ್ಲಿ ಹಿಂದು ಧರ್ಮವನ್ನು ನಿಂದಿಸಿ ತರಗತಿಯಲ್ಲಿ ಬೋಧನೆ ಮಾಡಿ, ಶ್ರೀರಾಮನನ್ನು ಅವಹೇಳನ ಮಾಡಿದ್ದಾರೆಂದು ತಿಳಿದುಬಂದಿದೆ. ಇದೀಗ ಪ್ರತಿಭಟನೆಗೆ ಎಚ್ಚೆತ್ತ ಆಡಳಿತ ಮಂಡಳಿ ಶಿಕ್ಷಕಿಯನ್ನು ಅಮಾನತು ಮಾಡಿದೆ.

Advertisement
Advertisement