ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

ಸವಣೂರು : ತಲವಾರಿನಿಂದ ದಾಳಿ ಮಾಡಿ ಅಡಿಕೆ ಕಳ್ಳತನಕ್ಕೆ ಯತ್ನ ,ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

09:26 PM Nov 25, 2023 IST | Praveen Chennavara
UpdateAt: 06:46 PM Dec 05, 2023 IST

ಸವಣೂರು : ಕಡಬ ತಾಲೂಕು ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್ಸ್ ಎಂಬಲ್ಲಿ ತಲವಾರಿನಿಂದ ದಾಳಿ ಮಾಡಿ ಅಡಿಕೆ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದ್ದು ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸವಣೂರು ಗ್ರಾಮದ ಪಣೆಮಜಲು ಎಡಪತ್ಯ ಫಾರ್ಮ್‌‌ನಲ್ಲಿ ಎ.ಆರ್. ಚಂದ್ರ ಎಂಬವರು ಅಡಿಕೆ, ತೆಂಗು ಮತ್ತಿತರ ಕೃಷಿಯನ್ನು ಹೊಂದಿದ್ದು,ಅವರು ತೋಟದಲ್ಲಿ ಬೆಳೆದ ಅಡಿಕೆಯನ್ನು ತಮ್ಮ ಮನೆಯ ಅಂಗಳದಲ್ಲಿರುವ ಸೋಲಾರ್ ಡ್ರೈಯರ್ ನಲ್ಲಿ ಒಣಗಿಸುತ್ತಿದ್ದು ಒಣಗಿದ ಅಡಿಕೆಯನ್ನು ಮನೆಯ ಹಿಂಬದಿಯ ಗೋಡೌನ್‌ನಲ್ಲಿ ಸಂಗ್ರಹಿಸಿಡುತ್ತಿದ್ದು, ನ.25ರಂದು ಮುಂಜಾನೆ 3 ಗಂಟೆಯ ವೇಳೆಗೆ ಎ.ಆರ್.ಚಂದ್ರ ಅವರ ಮಗ ನಿಷ್ಕಲ್ ರಾಮ ಅವರು ಮೈಸೂರಿನಿಂದ ಬೈಕಿನಲ್ಲಿ ಮನೆಗೆ ಬರುತ್ತಿರುವಾಗ ತಮ್ಮ ಮನೆಯ ಅಂಗಳದಲ್ಲಿ ಒಂದು ಕಾರು ಮತ್ತು ಒಂದು ಸ್ಕೂಟರ್ ನಿಂತಿದ್ದು, ಆ ಪೈಕಿ ಸ್ಕೂಟರಿನಲ್ಲಿ 2 ಗೋಣಿಚೀಲದಲ್ಲಿ ಸುಲಿದ ಅಡಿಕೆಯನ್ನು ತುಂಬಿಸಿ ಇಟ್ಟಿರುವುದು ಕಂಡು ಬಂದಿದ್ದು, ಮನೆಯ ಅಂಗಳದಲ್ಲಿರುವ ಸೋಲಾರ್ ಡ್ರೈಯರಿನ ಒಳಗಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗೋಣಿ ಚೀಲದಲ್ಲಿ ಒಣಗಿದ ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಅಂಗಳದಲ್ಲಿದ್ದ ಕಾರಿಗೆ ತುಂಬಿಸುತ್ತಿರುವುದು ಕಂಡು ಬಂದಿದ್ದು ಆ ವೇಳೆ ನಿಷ್ಕಲ್ ರಾಮ ಅವರು ಅಪರಿಚಿತ ವ್ಯಕ್ತಿಗಳಲ್ಲಿ "ಅಡಿಕೆಯನ್ನು ಯಾಕೆ ಕಾರಿನಲ್ಲಿ ತುಂಬಿಸುತ್ತಿದ್ದೀರಿ?" ಎಂದು ಕೇಳಿದಾಗ ಓರ್ವ ಅಪರಿಚಿತ ವ್ಯಕ್ತಿ "ನಾವು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತೇವೆ, ನೀನೇನಾದರೂ ಅಡ್ಡ ಬಂದರೆ ನಿನ್ನನ್ನು ಇಲ್ಲಿಯೇ ಕೊಂದು ಬಿಡುತ್ತೇವೆ" ಎಂದು ಕೈಯಲ್ಲಿದ್ದ ತಲವಾರನ್ನು ತೋರಿಸಿದ್ದು, ಈ ವೇಳೆ ನಿಷ್ಕಲ್ ರಾಮ್ ನು ಭಯದಿಂದ ಜೋರಾಗಿ ಬೊಬ್ಬೆ ಹಾಕಿದಾಗ , ಬೊಬ್ಬೆ ಕೇಳಿದ ಎ.ಆರ್.ಚಂದ್ರ ಮತ್ತು ಅವರ ಪತ್ನಿ ಬಳಿಗೆ ಬಂದಾಗ ಅವರ ಪೈಕಿ ಒಬ್ಬ ವ್ಯಕ್ತಿಯು "ನೀವು ಹತ್ತಿರ ಬಂದರೆ ನಿಮ್ಮ ಮಗನನ್ನು ಕೊಂದು ಬಿಡುತ್ತೇವೆ ಎಂದು ಹೇಳಿ ನಿಷ್ಕಲ್ ರಾಮ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದು ಇದರಿಂದಾಗಿ ಆತನ ಎಡ ಕೈಯಲ್ಲಿ ತೀವ್ರ ಗಾಯವಾಗಿ ರಕ್ತ ಸುರಿಯಲಾರಂಭಿಸಿದ್ದು, ಇದನ್ನು ನೋಡಿದ ಎ.ಆರ್.ಚಂದ್ರ ಅವರು ಬೊಬ್ಬೆ ಹಾಕಿದ್ದು ,ಈ ಸಂದರ್ಭದಲ್ಲಿ ನೆರೆಕರೆಯ ಕೃಷ್ಣ ಭಟ್, ಹೂವಯ್ಯ ಮೊದಲಾದವರು ಸ್ಥಳಕ್ಕೆ ಬಂದಿದ್ದು ಇದನ್ನು ನೋಡಿದ ಅಪರಿಚಿತ ವ್ಯಕ್ತಿಗಳ ಪೈಕಿ ಒಬ್ಬ ವ್ಯಕ್ತಿಯು ಎರಡು ಗೋಣಿ ಚೀಲದಲ್ಲಿ ಸುಲಿದ ಅಡಿಕೆಯನ್ನು ತುಂಬಿಸಿಟ್ಟಿದ್ದ ಸ್ಕೂಟರನ್ನು ಚಲಾಯಿಸಿಕೊಂಡು ಸ್ಥಳದಿಂದ ತೆರಳಿದ್ದು, ಬಳಿಕ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೂಡಾ ಅಡಿಕೆಯನ್ನು ತುಂಬಿಸಿಟ್ಟಿದ್ದ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಎ.ಆರ್.ಚಂದ್ರ ಹಾಗೂ ಮತ್ತು ಇತರರು ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತನು ತನ್ನ ಹೆಸರು ಬಶೀರ್ ಎಂಬುದಾಗಿ ಹೇಳಿದ್ದಾನೆ ಎನ್ನಲಾಗಿದ್ದು ,ಆತನೇ ನಿಷ್ಕಲ್ ರಾಮ ಅವರಿಗೆ ತಲವಾರಿನಿಂದ ಹಲ್ಲೆ ಮಾಡಿದ ವ್ಯಕ್ತಿ ಎಂದು ಎ.ಆರ್.ಚಂದ್ರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಸ್ಕೂಟರ್ ನಲ್ಲಿ ಸ್ಥಳದಿಂದ ಪರಾರಿಯಾದ ವ್ಯಕ್ತಿಯ ಬಶೀರ್ ನಲ್ಲಿ, ವಿಚಾರಿಸಿದಾಗ ಆತನ ಹೆಸರು ಹಕೀಂ ಎಂದು ತಿಳಿಸಿದ್ದು,ಎ.ಆರ್.ಚಂದ್ರ ಅವರು ತನ್ನ ಮನೆಯ ಅಡಿಕೆ ಗೋಡೌನ್ ಗೆ ತೆರಳಿ ನೋಡಿದಾಗ ಗೋಡೌನ್ ನಲ್ಲಿ ತುಂಬಿಸಿಟ್ಟಿದ್ದ ಅಡಿಕೆಯ ಪೈಕಿ ಎರಡು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಒಟ್ಟು ಸುಮಾರು 60 ಕೆ.ಜಿ ಸುಲಿದ ಅಡಿಕೆಯನ್ನು ಅಲ್ಲಿಂದ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು ,ಅಡಿಕೆಯ ಅಂದಾಜು ಮೌಲ್ಯ ರೂ.24000/- ಆಗಿದ್ದು, ಅದೇ ರೀತಿ ಸೋಲಾರ್ ಡ್ರೈಯ‌ರ್‌ನ ಒಳಗೆ ನೋಡಿದಾಗ ಅದರಲ್ಲಿ ಸುಮಾರು 8 ಗೋಣಿಚೀಲದಷ್ಟು ಸುಲಿಯದ ಒಣ ಅಡಿಕೆಯನ್ನು ಕಳವು ಮಾಡಿರುವುದು ಕಂಡು ಬಂದಿದೆ.

Advertisement

ಅದೇ ರೀತಿ ಸೋಲಾರ್ ಡೈಯರ್ ನಿಂದ ಕಳವು ಮಾಡಿ KA 19 M M 7319 ಸ್ವಿಫ್ಟ್ ಕಾರಿನಲ್ಲಿ ತುಂಬಿಸಿಟ್ಟಿದ್ದ ಸುಲಿಯದ ಒಣ ಅಡಿಕೆಯನ್ನು ನೋಡಲಾಗಿ ಅದರಲ್ಲಿ ಒಟ್ಟು 8 ಪ್ಲಾಸ್ಟಿಕ್ ಗೋಣಿ ಚೀಲ ಸುಲಿಯದ ಅಡಿಕೆಯನ್ನು ತುಂಬಿಸಿಟ್ಟಿರುವುದು ಕಂಡು ಬಂದಿದ್ದು, ಈ ಅಡಿಕೆಯ ಅಂದಾಜು , ರೂಪಾಯಿ 75000/- . ) ಆಗಬಗಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತು ಎ.ಆರ್.ಚಂದ್ರ ಅವರು ನೀಡಿದ ದೂರಿನಲ್ಲಿ ತಿಳಿಸಿದಂತೆ ಅವರ ಮಗ ನಿಷ್ಕಲ್ ರಾಮ ಅವರಿಗೆ ತಲವಾರಿನಿಂದ ದಾಳಿ ಮಾಡಿದ ಹಾಗೂ ಅಡಿಕೆ ಕಳ್ಳತನ ನಡೆಸಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Power TV ರಾಕೇಶ್ ಶೆಟ್ಟಿ ಮೇಲೆ FIR, ಮಹಿಳಾ ದೌರ್ಜನ್ಯ ಹಿನ್ನೆಲೆಯಲ್ಲಿ ಪ್ರಕರಣ, ನೊಂದ ಮಹಿಳೆಯರ ಹೋರಾಟಕ್ಕೆ ಜಯ !

Advertisement
Advertisement
Next Article