For the best experience, open
https://m.hosakannada.com
on your mobile browser.
Advertisement

D.K.: ಧಾರಾವಾಹಿಯಲ್ಲಿ ದೈವಾರಾಧನೆಗೆ ಅವಹೇಳನ ಪ್ರಕರಣ; ನಿರ್ದೇಶಕ ಪ್ರೀತಂ ಶೆಟ್ಟಿ ಹೇಳಿದ್ದೇನು?

11:42 AM Feb 11, 2024 IST | ಹೊಸ ಕನ್ನಡ
UpdateAt: 11:43 AM Feb 11, 2024 IST
d k   ಧಾರಾವಾಹಿಯಲ್ಲಿ ದೈವಾರಾಧನೆಗೆ ಅವಹೇಳನ ಪ್ರಕರಣ  ನಿರ್ದೇಶಕ ಪ್ರೀತಂ ಶೆಟ್ಟಿ ಹೇಳಿದ್ದೇನು
Advertisement

Mangaluru: ಸ್ಟಾರ್‌ ಸುವರ್ಣ ವಾಹಿನಿಯ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆಯನ್ನು ಬಳಸಿಕೊಂಡಿದ್ದು, ಇದಕ್ಕೆ ಕರಾವಳಿಯ (Mangaluru )ದೈವಾರಾಧಕರು ಹಾಗೂ ತುಳುನಾಡ ಮಂದಿ ಆಕ್ರೋಶಗೊಂಡು ನಂತರ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದರು. ಇದರ ಬೆನ್ನಲ್ಲೇ ಧಾರಾವಾಹಿ ನಿರ್ದೇಶಕ ಆರ್‌ ಪ್ರೀತಮ್‌ ಶೆಟ್ಟಿ ಮಾತನಾಡಿದ್ದಾರೆ.

Advertisement

" ನಾವು ಎಲ್ಲೂ ದೈವದ ಅಪಹಾಸ್ಯ ಮಾಡಿಲ್ಲ. ಕೊರಗಜ್ಜನ ಭಕ್ತೆ ಈ ಧಾರಾವಾಹಿಯ ನಾಯಕಿ. ಕಷ್ಟ ಬಂದಾಗ ದೈವ ಯಾವ ರೀತಿ ಪರಿಹಾರ ನೀಡುತ್ತದೆ ಎಂಬುವುದನ್ನು ಒಳ್ಳೆಯ ರೀತಿಯಲ್ಲಿ ತೋರಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ನಾನು ಪಿಂಗಾರ ಸಿನಿಮಾವೊಂದನ್ನು ಮಾಡಿದ್ದು, ಅದು ದೈವಾರಾಧನೆ ಬಗ್ಗೆನೇ ಇತ್ತು. ಆ ಸಿನಿಮಾಗೆ ನನಗೆ ನ್ಯಾಷನಲ್‌ ಅವಾರ್ಡ್‌ ಜೊತೆ ಸಾಕಷ್ಟು ಪ್ರಶಸ್ತಿ ದೊರಕಿತು. ನಾನು ಮಂಗಳೂರಿನವನೇ. ನಮ್ಮ ಮನೆಯಲ್ಲೂ ದೈವಾರಾಧನೆ ನಡೆಯುತ್ತದೆ. ಈ ವಿಚಾರ ಗಮನದಲ್ಲಿಟ್ಟುಕೊಂಡೇ ಇದನ್ನು ಮಾಡಿರುವುದು. ಒಂದು ವಾರ ಮಾಂಸ ಸೇವಿಸಬಾರದು. ಶೂಟಿಂಗ್‌ನಲ್ಲಿ ಯಾರೂ ಚಪ್ಪಲಿ ಹಾಕಬಾರದು ಅದನ್ನೆಲ್ಲ ಪಾಲಿಸಿದ್ದೀವಿ. ಇನು ಧಾರಾವಾಹಿಯ ಎಪಿಸೋಡ್‌ ಪ್ರಸಾರ ಮಾಡಬೇಕೋ ಬೇಡವೋ ಎಂಬ ವಿಚಾರ ಚಾನೆಲ್‌ ಮುಖ್ಯಸ್ಥರದ್ದು" ಎಂದು ಹೇಳಿದ್ದಾರೆ.

Advertisement

Advertisement
Advertisement
Advertisement