For the best experience, open
https://m.hosakannada.com
on your mobile browser.
Advertisement

Mangaluru Ullala: ಜೇನುಗೂಡಿಗೆ ಹಿಟ್‌ ಆದ ಚೆಂಡು; ಕ್ರಿಕೆಟ್‌ ಆಟಗಾರರನ್ನು ಅಟ್ಟಾಡಿಸಿದ ಜೇನುನೊಣಗಳ ಹಿಂಡು!!!

01:19 PM Feb 05, 2024 IST | ಹೊಸ ಕನ್ನಡ
UpdateAt: 01:26 PM Feb 05, 2024 IST
mangaluru ullala  ಜೇನುಗೂಡಿಗೆ ಹಿಟ್‌ ಆದ ಚೆಂಡು  ಕ್ರಿಕೆಟ್‌ ಆಟಗಾರರನ್ನು ಅಟ್ಟಾಡಿಸಿದ ಜೇನುನೊಣಗಳ ಹಿಂಡು
Advertisement

Mangaluru Ullala: ಜೇನುನೊಣಗಳ ಹಿಂಡೊಂದು ಕ್ರಿಕೆಟ್‌ ಆಟಗಾರರ ಮೇಲೆ ದಾಳಿ ಮಾಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಒಂಬತ್ತುಕೆರೆ ಮೈದಾನದಲ್ಲಿ ನಡೆದಿದೆ.

Advertisement

ಇದನ್ನೂ ಓದಿ: Puttur: ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಮಠಂದೂರು; ಜಿಲ್ಲಾಧ್ಯಕ್ಷರು ಹೇಳಿದ್ದೇನು?

ದಾಳಿಗೆ ಓಟಕ್ಕಿತ್ತ ಆಟಗಾರರು 

Advertisement

ಪಂದ್ಯದ ಸಮಯದಲ್ಲಿ ಒಬ್ಬ ಆಟಗಾರ ಸಿಕ್ಸರ್‌ ಹೊಡೆದಿದು, ಬಾಲು ಸೀದಾ ಹೋಗಿ ಮೈದಾನದಿಂದ ಹೊರಗೆ ತೆಂಗಿನ ಮರಕ್ಕೆ ಬಿದ್ದಿದೆ. ಆದರೆ ಆ ತೆಂಗಿನ ಮರದಲ್ಲಿ ಜೇನುಗೂಡು ಇದ್ದಿದ್ದು, ಆಟಗಾರರಿಗೆ ತಿಳಿದಿರಲಿಲ್ಲ. ಬಾಲ್‌ ಬಿದ್ದದ್ದೇ ತಡ ಅದು ಹೇಗೆ ಮೈದಾನಕ್ಕೆ ದಾಳಿ ಮಾಡಿದೆ ಎಂದರೆ......ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ದಿಕ್ಕಾಪಾಲಾಗಿ ಓಡಿದ್ದಾರೆ.

ಕೊನೆಗೆ ಜೇನುನೊಣಗಳ ದಾಳಿಗೆ ಆಟಗಾರರು ಸೋತೋಗಿ, ಪಂದ್ಯವೇ ರದ್ದು ಮಾಡಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement
Advertisement
Advertisement