Dakshina kannada: ನೇತ್ರಾವತಿ ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತ; ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು!!
11:06 AM Jan 24, 2024 IST | ಹೊಸ ಕನ್ನಡ
UpdateAt: 11:15 AM Jan 24, 2024 IST
Advertisement
Dakshina Kannada: ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತ (Accident)ಸಂಭವಿಸಿದ್ದು, ಈ ಸಂದರ್ಭ ಸೇತುವೆ ಆವರಣದ ಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ( Death)ಘಟನೆ ವರದಿಯಾಗಿದೆ.
Advertisement
ಇದನ್ನೂ ಓದಿ: ಲಿಂಗ ಪರಿವರ್ತನೆಗೆಂದು ಆಸ್ಪತ್ರೆಗೆ ತೆರಳಿದ 5 ತಿಂಗಳ ಗರ್ಭಿಣಿ! ಮುಂದೇನಾಯ್ತು??
ಮೃತ ದುರ್ದೈವಿಯನ್ನು ಉಳ್ಳಾಲ ತಾಲೂಕಿನ ಕಲ್ಲಾಪು, ಪಟ್ಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಸುರೇಶ್ (32 ) ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಮಂಗಳೂರಿನಿಂದ ಕಲ್ಲಾಪಿಗೆ ಸುರೇಶ್ ಬೈಕಲ್ಲಿ ಧಾವಿಸುತ್ತಿದ್ದ ಸಂದರ್ಭ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಅವಘಡದಲ್ಲಿ ಸೇತುವೆ ಆವರಣ ಗೋಡೆ ತಲೆಗೆ ಬಡಿದಿದ್ದು, ವಿಪರೀತ ರಕ್ತಸ್ರಾವವಾಗಿ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement