For the best experience, open
https://m.hosakannada.com
on your mobile browser.
Advertisement

Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ; ಆರು ಮಂದಿ ವಶಕ್ಕೆ

10:43 AM Mar 23, 2024 IST | ಹೊಸ ಕನ್ನಡ
UpdateAt: 12:47 PM Mar 23, 2024 IST
belthangady  ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ  ಆರು ಮಂದಿ ವಶಕ್ಕೆ

Mangaluru: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣವೊಂದು ನಿನ್ನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬೆಳ್ತಂಗಡಿಯ ಮೂವರು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಪೊಲೀಸರು ಈ ಘಟನೆಗೆ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕ್ರರಣದ ಪ್ರಮುಖ ವ್ಯಕ್ತಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Udupi Chikmagaluru Constituency: ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲೀಷ್‌ ಬರಲ್ಲ, ಅವರನ್ನು ಗೆಲ್ಲಿಸಬೇಡಿ-ಜೆಪಿ ಹೆಗ್ಡೆ

ಇವರನ್ನು ಮಾ.22 ರಂದು ರಾತ್ರಿ ವಶಕ್ಕೆ ಪಡೆಯಲಾಗಿದೆ.

Advertisement

ಹನ್ನೊಂದು ದಿನದ ಹಿಂದೆ ತುಮಕೂರಿಗೆಂದು ವ್ಯವಹಾರ ಕುರಿತು ಮದಡ್ಕದ ರಫೀಕ್‌ ಎಂಬುವವರ ಎಸ್‌ಪ್ರೆಸ್‌ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ಸಾಹುಲ್‌ ಹಮೀದ್‌ (45), ಇಸಾಕ್‌(56), ಸಿದ್ದಿಕ್‌( 34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Russia: ರಷ್ಯಾದಲ್ಲಿ ಉಗ್ರ ದಾಳಿ : ಕಾನ್ಸರ್ಟ್ ಹಾಲ್ ನಲ್ಲಿ 60 ಮಂದಿ ಸಾವು 145 ಮಂದಿ ಗಂಭೀರ ಗಾಯ : ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಗ್ರೂಪ್ (ISIS)

ನಕಲಿ ಚಿನ್ನದ ದಂಧೆಯ ಆಸೆಗೆ ಇವರು ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ವಿಚಾರಣೆ ಸಂದರ್ಭ ತಿಳಿದು ಬಂದಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವ ಸಂದರ್ಭ ಚಿನ್ನದ ಹಂಡೆ ದೊರಕಿದ್ದು, ಚಿನ್ನವನ್ನು ಕಡಿಮೆ ಬೆಲೆಗೆ ನಿಮಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆದು ಹಣ ದೋಚುವ ಪ್ಲ್ಯಾನ್‌ ಮಾಡಿ ಕರೆಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ನಂತರ ಇವರ ಕೈಕಾಲನ್ನು ಕಟ್ಟಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಾವು; ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ದುಷ್ಕರ್ಮಿಗಳು

ಮಾ.22 ರಂದು ಸುಮೊಟೋ ಪ್ರಕರಣವನ್ನು ಕೋರಾ ಪೊಲೀಸ್‌ ಠಾಣೆಯಲ್ಲಿ ದಾಖಲು ಮಾಡಿ, ತನಿಖೆ ನಡೆಸಲಾಗುತ್ತಿದೆ. ಬೆಳ್ತಂಗಡಿಯ ಮೂವರ ಶವ ಸಂಪೂರ್ಣವಾಗಿ ಸುಟ್ಟು ಹೋಗಿರುವ ಪರಿಣಾಮ ಡಿಎನ್‌ಎ ಪರೀಕ್ಷೆ ನಂತರ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ ಪೊಲೀಸರು. ಒಂದು ವಾರ ಡಿಎನ್‌ಎ ವರದಿ ಬರಲು ಬೇಕಾಗುತ್ತದೆ ಎಂದು ಪೊಲೀಸರು ಮನೆಮಂದಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Advertisement
Advertisement