For the best experience, open
https://m.hosakannada.com
on your mobile browser.
Advertisement

Belthangady: ಆಟವಾಡುತ್ತಾ ತೋಟದಲ್ಲಿದ್ದ ಕೆರೆ ಬಳಿ ಹೋಗಿ ಕಾಲು ಜಾರಿ ಬಿದ್ದ 1ವರ್ಷ 11 ತಿಂಗಳ ಮಗು!!

02:59 PM Jan 22, 2024 IST | ಹೊಸ ಕನ್ನಡ
UpdateAt: 02:59 PM Jan 22, 2024 IST
belthangady  ಆಟವಾಡುತ್ತಾ ತೋಟದಲ್ಲಿದ್ದ ಕೆರೆ ಬಳಿ ಹೋಗಿ ಕಾಲು ಜಾರಿ ಬಿದ್ದ 1ವರ್ಷ 11 ತಿಂಗಳ ಮಗು
Advertisement

Belthangady: ಬೆಳ್ತಂಗಡಿಯಲ್ಲಿ(Belthangady) ಮನೆಯಲ್ಲಿದ್ದ ಮಗು ಆಟವಾಡುತ್ತಾ ತೋಟದಲ್ಲಿದ್ದ ಕೆರೆ ಬಳಿ ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ(Death)ಘಟನೆ ವರದಿಯಾಗಿದೆ.

Advertisement

ಮೃತ ದುರ್ದೈವಿಯನ್ನು nಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ನಾಜೆ ನಿವಾಸಿ ರೋಷನ್ ಡಿಸೋಜಾ ಮತ್ತು ಉಷಾ ಡಿಸೋಜಾ ದಂಪತಿಗಳ ಮಗ ರೇಯನ್ ಡಿಸೋಜಾ(1ವರ್ಷ 11 ತಿಂಗಳು) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಮನೆಯ ತೋಟದಲ್ಲಿರುವ ಕೆರೆಗೆ ಇಂದು ಬಿದ್ದಿದ್ದು, ಮಗು ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಮನೆಯವರು ಮತ್ತು ಸ್ಥಳೀಯರ ನೆರವಿನಿಂದ ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಂದೆ ರೋಷನ್ ದೂರು ನೀಡಿದ್ದು, ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Advertisement
Advertisement
Advertisement