ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Vitla: ಅಡ್ಯನಡ್ಕ ಬ್ಯಾಂಕ್‌ ಲಾಕರ್‌ ಬ್ರೇಕ್‌ ಪ್ರಕರಣ; ತನಿಖೆ ಚುರುಕು, ಇಬ್ಬರು ಪೊಲೀಸ್‌ ವಶ?

ಮೂಲಗಳಿಂದ ಸ್ಥಳೀಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಅವರು ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ
11:27 AM Feb 11, 2024 IST | ಸುದರ್ಶನ್
UpdateAt: 11:27 AM Feb 11, 2024 IST
Advertisement

Vitla: ಕರ್ನಾಟಕ ಬ್ಯಾಂಕ್‌ ಅಡ್ಯನಡ್ಕ ಶಾಖೆಯ ಲಾಕರ್‌ ಬ್ರೇಕ್‌ ಪ್ರಕರಣವೊಂದು ಇತ್ತೀಚೆಗೆ ನಡೆದಿತ್ತು. ಪೊಲೀಸರು ಈ ಕಳ್ಳತನದ ಪ್ರಕರಣದ ಸುಳಿವು ಸಿಗದೇ ಹರಸಾಹಸ ಪಡುತ್ತಿದ್ದು, ಇದೀಗ ಕೇರಳಕ್ಕೆ ಎರಡು ತನಿಖಾ ತಂಡ ತೆರಳಿದ್ದು, ಬ್ಯಾಂಕ್‌ ದರೋಡೆ ಮಾಡಿದ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದೆ.

Advertisement

ಮೂಲಗಳಿಂದ ಸ್ಥಳೀಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಅವರು ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ ಕೇರಳಕ್ಕೆ ತೆರಳಿದೆ ಎನ್ನಲಾಗಿದೆ.

ಇನ್ನು ಪೊಲೀಸ್‌ ವಶದಲ್ಲಿರುವವರು ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ? ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆಯೇ ಎಂಬುವುದು ಇನ್ನೂ ಖಚಿತ ಗೊಂಡಿಲ್ಲ. ಬ್ಯಾಂಕ್‌ ಹಾಗೂ ಪೊಲೀಸ್‌ ಇಲಾಖೆ ಈ ಬ್ಯಾಂಕ್‌ ಲಾಕರ್‌ನಂತಹ ಗಂಭೀರ ಪ್ರಕರಣದ ಕುರಿತು ಯಾವುದೇ ಮಾಹಿತಿಯನ್ನು ಇಲ್ಲಿಯವರೆಗೆ ಬಹಿರಂಗ ಪಡಿಸಿಲ್ಲ.

Advertisement

ಶುಕ್ರವಾರ ಬೆಳಿಗ್ಗೆ ಕಳ್ಳತನವಾದ ಕೃತ್ಯ ಬೆಳಕಿಗೆ ಬಂದಿದೆ. ಅದರ ನಂತರ ಬೆರಳಚಚು ತಜ್ಞರು ಬಂದು ಸಾಕ್ಷ್ಯ ಸಂಗ್ರಹಿಸಿ, ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ನಂತರ ಸಂಜೆ ಹೊತ್ತಿಗೆ ಕಳ್ಳರು ಹಾನಿ ಮಾಡಿದ ಸ್ಟ್ರಾಂಗ್‌ ಹಾಗೂ ಸೇಫ್‌ ಲಾಕರ್‌ ಬೀರನ್ನು ಸ್ಥಳಾಂತರ ಮಾಡುವ ಕೆಲಸ ರಾತ್ರಿಯವರೆಗೆ ನಡೆದಿದೆ. ಈ ಸಂದರ್ಭದಲ್ಲಿ ಹಾನಿಯಾದ ಲಾಕರ್‌ಗೆ ಬಟ್ಟೆ ಮುಚ್ಚಿ ರಾತ್ರೋರಾತ್ರಿ ಸ್ಥಳಾಂತರ ಮಾಡಲಾಗಿದೆ.

ಇವುಗಳನ್ನು ಮುಂದೆ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸಲ್ಲಿಸುವ ಸಾಧ್ಯತೆ ಇದೆ. ಕಳೆದ ಒಂದು ತಿಂಗಳಿನಿಂದ ಪರಿಸರದಲ್ಲಿ ಅನುಮಾನಸ್ಪದವಾಗಿ ಓಡಾಟ ನಡೆಸಿದವರ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದರೆ.

Related News

Advertisement
Advertisement