ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Dakshina Kannada: ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ; ಫ್ರೀ ಬಸ್‌ನಲ್ಲಿ ಎಲ್ಲೆಡೆ ಸುತ್ತಾಟ, ನಂತರ ಸುಳ್ಯದಲ್ಲಿ ಪತ್ತೆ

Dakshina Kannada: ಎಲಿಜನೆತ್‌ ದೀಪಿಕಾ ಪೊನ್ನುರಾಜು ಎಂಬಾಕೆಯೇ ನಾಪತ್ತೆಯಾದ ವಿದ್ಯಾರ್ಥಿನಿ. ಇದೀಗ ಈಕೆಯನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಮಾಡಿದ್ದಾರೆ. 
10:00 AM May 10, 2024 IST | ಸುದರ್ಶನ್
UpdateAt: 10:02 AM May 10, 2024 IST

Dakshina Kannada: ಎಂಎಸ್ಸಿ ಕಲಿಕೆ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದ ಘಟನೆಯೊಂದು ನಡೆದಿತ್ತು. ಎಲಿಜನೆತ್‌ ದೀಪಿಕಾ ಪೊನ್ನುರಾಜು ಎಂಬಾಕೆಯೇ ನಾಪತ್ತೆಯಾದ ವಿದ್ಯಾರ್ಥಿನಿ. ಇದೀಗ ಈಕೆಯನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಮಾಡಿದ್ದಾರೆ.

Advertisement

ಇದನ್ನೂ ಓದಿ: Kodagu: SSLC ಪಾಸಾದ ಖುಷಿಯಲ್ಲಿದ್ದ ಬಾಲಕಿಯ ತಲೆ ಕಡಿದು ಭೀಕರ ಹತ್ಯೆ!

ಮೇ. 7 ರಂದು ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್‌ ಸೈನ್ಸ್‌ ವಿಷಯದಲ್ಲಿ ಪ್ರಥಮ ವರ್ಷದ ಎಂಎಸ್ಸಿ ವಿದ್ಯಾರ್ಥಿನಿ ಎರಡನೇ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ ಹೊರಗೆ ಬಂದಿದ್ದು, ನಂತರ ನಾಪತ್ತೆಯಾಗಿದ್ದಳು. ಗಾಬರಿಗೊಂಡ ಮನೆ ಮಂದಿ ನಂತರ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.

Advertisement

ಇದನ್ನೂ ಓದಿ: Karnataka Draught Fund: ಗ್ರಾ.ಪಂ.ಗಳಲ್ಲಿ ಬರ ಪರಿಹಾರ ಪಟ್ಟಿ- ಕಂದಾಯ ಸಚಿವ

ವಿದ್ಯಾರ್ಥಿನಿ ತನ್ನ ಪುಸ್ತಕ, ಮೊಬೈಲ್‌ಗಳೆಲ್ಲವನ್ನೂ ಕಾಲೇಜಿನಲ್ಲೇ ಬಿಟ್ಟು, ನಾಪತ್ತೆಯಾಗಿದ್ದು. ಈ ಕಾರಣದಿಂದ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ಸುಳಿವು ದೊರಕಿರಲಿಲ್ಲ. ಮೇ.9 ರಂದು ಪಾಂಡೇಶ್ವರ ಠಾಣೆಗೆ ವಿದ್ಯಾರ್ಥಿನಿ ಸುಳ್ಯ ಅರಂತೋಡಿನಲ್ಲಿ ಇದ್ದಾಳೆ ಎಂಬ ಮಾಹಿತಿ ದೊರಕಿದೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಆಕೆಯನ್ನು ಮಂಗಳೂರಿಗೆ ಕರೆತಂದು ಆಕೆಯ ಪೋಷಕರ ವಶಕ್ಕೆ ನೀಡಿದ್ದಾರೆ.

ಎಂಎಸ್ಸಿ ಪರೀಕ್ಷೆ ಕಷ್ಟವಾಗಿದ್ದು, ಅತಿಯಾದ ಒತ್ತಡದಿಂದ ಸ್ವಲ್ಪ ವಿಶ್ರಾಂತಿ ಬೇಕೆಂದು ನಿರ್ಧರಿಸಿ ಆಕೆ ತೆರಳಿರುವುದಾಗಿ ಪೊಲೀಸರಿಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಈಕೆ ಕಾಲೇಜಿನಿಂದ ಹೊರಬಂದು ಕಂಕನಾಡಿಯಲ್ಲಿ ಚಿಕ್ಕಮಗಳೂರಿಗೆ ಹೋಗುವ ಬಸ್ಸು ಹತ್ತಿದ್ದಾಳೆ. ಕೆಎಸ್‌ಆರ್‌ಟಿಸಿ ಬಸ್‌ ಫ್ರೀ ಆಗಿರುವುದರಿಂದ ನೇರವಾಗಿ ಚಿಕ್ಕಮಗಳೂರಿಗೆ ತೆರಳಿದ್ದಾಳೆ. ನಂತರ ಅಲ್ಲಿಂದ ಮೈಸೂರಿಗೆ ಬಸ್‌ ಹತ್ತಿದ್ದಾಳೆ. ಅಲ್ಲಿಂದ ಮಡಿಕೇರಿಗೆ ಬಸ್ಸಿನಲ್ಲಿ ಬಂದು ಬಸ್‌ ನಿಲ್ದಾಣದಲ್ಲಿ ತಮಿಳು ಮಾತನಾಡುವ ಹುಡುಗಿಯ ಪರಿಚಯವಾಗಿ ಆಕೆಯ ಜೊತೆಗೆ ಬುಧವಾರ ಸುಳ್ಯಕ್ಕೆ ಬಂದಿದ್ದಾಳೆ.

ಅನಂತರ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನ ಆಕೆಯ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದು, ಸುಳ್ಯದಲ್ಲಿ ಹುಡುಗಿ ಇರುವ ಕುರಿತು ಅವರ ಮನೆಯವರು ಪರಿಚಯದ ಮಂಗಳೂರಿನ ಪೊಲೀಸ್‌ ಒಬ್ಬರಿಗೆ ತಿಳಿಸಿದ್ದಾರೆ. ಅನಂತರ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಕರೆತಂದಿದ್ದಾರೆ. ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

Advertisement
Advertisement
Next Article