For the best experience, open
https://m.hosakannada.com
on your mobile browser.
Advertisement

Dakshina kannada: ಕರಾವಳಿಯ ದಾರಿ ತಪ್ಪಿದ ಶಿಕ್ಷಕರನ್ನು ದಾರಿಗೆ ತರುತ್ತೇನೆ. ಮಧು ಬಂಗಾರಪ್ಪ!!.

10:14 AM Feb 05, 2024 IST | ಹೊಸ ಕನ್ನಡ
UpdateAt: 10:17 AM Feb 05, 2024 IST
dakshina kannada  ಕರಾವಳಿಯ ದಾರಿ ತಪ್ಪಿದ ಶಿಕ್ಷಕರನ್ನು ದಾರಿಗೆ ತರುತ್ತೇನೆ  ಮಧು ಬಂಗಾರಪ್ಪ

ಕರಾವಳಿ ಭಾಗದಲ್ಲಿರುವ ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾರೆ ದೇಶ ಭಕ್ತಿಗೆ ಹೆಚ್ಚಿನ ಆದ್ಯತೆ ನೀಡದೆ, ಭಾವನಾತ್ಮಕ ವಿಚಾರಗಳನ್ನು ಮಕ್ಕಳಿಗೆ ಭೋಧನೆ ಮಾಡುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದ್ದು ಎಲ್ಲವನ್ನೂ ಸರಿ ದಾರಿಗೆ ತರುತ್ತೇನೆ. ಸರ್ಕಾರದಿಂದ ಸಂಬಳ ಪಡೆಯುವುದು. ಯಾವುದೆ ಪಕ್ಷದಿಂದ ಅಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Advertisement

ಇದನ್ನೂ ಓದಿ: Sirsi News: ಚಾಕ್ ಪೀಸ್ ನಿಂದ ಶಿವಲಿಂಗದ ಮೇಲೆ ಗೀಚಿದ ದುಷ್ಕರ್ಮಿಗಳು!

ಹೈಲೈಟ್ಸ್‌:

Advertisement

ಕೆಲ ಶಿಕ್ಷಕರು ದಾರಿತಪ್ಪಿದಂತೆ ಕಾಣುತ್ತಿದೆ.ಅವರನ್ನು ಸರಿದಾರಿಗೆ ತರುತ್ತೇನೆ.

ಉಡುಪಿಯ ಕೊಲ್ಲೂರಿನಲ್ಲಿ ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಭಾವನಾತ್ಮಕ ವಿಚಾರ ಗಳಿಂದ ಮಾತ್ರ ದೇಶ ಬೆಳವಣಿಗೆಯಾಗುವುದಿಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ.

ಉಡುಪಿ: ಕರಾವಳಿ ಭಾಗ ಶಿಕ್ಷಣ ಪದ್ಧತಿಯಲ್ಲಿ ಚೂರು ಬದಲಾವಣೆ ತರಬೇಕಿದೆ. ಶಿಕ್ಷಕರನ್ನು ಹದ್ದುಬಸ್ತಿನಲ್ಲಿ ಇಡಬೇಕಿದೆ. ಸದ್ಯದಲ್ಲೇ ಎಲ್ಲವನ್ನೂ ಸರಿ ದಾರಿಗೆ ತರುವುದಾಗಿ ಮಧು ಬಂಗಾರಪ್ಪ ಹೇಳಿದರು.

ಕೊಲ್ಲೂರಿನಲ್ಲಿ ಮಾತನಾಡಿದ ಅವರು, ಶಿಕ್ಷಕರು ಪಾಠ ಮಾತ್ರ ಮಾಡ್ಬೇಕು. ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ . ಅವರನ್ನು ಮೊದಲಿನ ದಾರಿಗೆ ತರುವುದನ್ನು ನೀವು ನೋಡುತ್ತೀರಿ ಎಂದರು.

ಈ ವಿಷಯದಲ್ಲಿ ಒಂದು ಚೂರು ವ್ಯತ್ಯಾಸ ವಾದರು ಕ್ರಮ ತಗೋತಿವಿ. ಅವರು ಏನು ತಿಪ್ಪರ ಲಾಗ ಹೊಡೆದರು ತಲೆ ಕೆಡೆಸಿಕೊಳ್ಳುವುದಿಲ್ಲ..ಶಿಕ್ಷಕರು ಸರ್ಕಾರಕ್ಕೆ ಸೇವೆ ನೀಡಬೇಕು ಪಕ್ಷಗಳಿಗಲ್ಲ ಎಂದು ಗರಂ ಹಾಗಿದ್ದರೆ.

7 ತಿಂಗಳ ಹಿಂದೆ ಅಧಿಕಾರ ತೆಗೆದುಕೊಂಡಿರುವೆ.

ನಾನು 7 ತಿಂಗಳ ಹಿಂದೆ ಅಧಿಕಾರ ತೆಗೆದುಕೊಂಡಿದ್ದೇನೆ. ನನಗೂ ಸ್ವಲ್ಪ ಸಮಯ ಬೇಕು. ಶಿಕ್ಷಕರು ಕಾಂಗ್ರೆಸ್ ಬಿಜೆಪಿ ಗೆ ಕೆಲಸ ಮಾಡದೆ ಸರ್ಕಾರಕ್ಕೆ ಕೆಲಸ ಮಾಡಲಿ. ಎಂದು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಕರು ಮಕ್ಕಳಿಗೆ ಉತ್ತಮವಾದ ವಿದ್ಯೆ ನೀಡಲಿ. ಪ್ರತಿ ದಿನ ಶಾಲೆಯಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲು ಆದೇಶ ನೀಡಿದ್ದೇವೆ. ಆದರೆ ಈ ಭಾಗದ ಶಾಲೆಗಳಲ್ಲಿ ಇದು ಹಾಗುತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇಲಾಕೆಯಿಂದ ನೋಟಿಸ್ ನೀಡುತ್ತೇವೆ ಎಂದು ಹೇಳಿದ್ದಾರೆ .

ದೇಶ ಭಕ್ತಿಗೆ ಹೆಚ್ಚಿನ ಗಮನ ಕೊಡಿ

ಶಿಕ್ಷಕರು ಭಾವನಾತ್ಮಕ ವಿಚಾರಗಳನ್ನು ಬಿತ್ತುವ ಬದಲು ದೇಶದ ಬಗ್ಗೆ ಅಭಿಮಾನವನ್ನು ಬೆಳಸಿ. ಪಕ್ಷಗಳ ರಾಜಕಾರಣ ಬಿತ್ತ ಬೇಡಿ, 53 ಸಾವಿರ ಶಿಕ್ಷಕರ ಕೊರತೆ ನಾನು ಅಧಿಕಾರ ಸ್ವೀಕರಿಸಿದಾಗ ಇದ್ದದ್ದು ಈಗ 40ಸಾವಿರಕ್ಕೆ ಇಳಿದಿದೆ. ಹಂತಹಂತವಾಗಿ ಎಲ್ಲವೂ ಸರಿಯಾಗಲಿದೆ" ಎಂದು ಹೇಳಿದರು.

Advertisement
Advertisement