For the best experience, open
https://m.hosakannada.com
on your mobile browser.
Advertisement

Dakshina Kannada Lok Sabha Election 2024: ಕರಾವಳಿಯಲ್ಲಿ ಮತ್ತೆ ಅರಳಿದ ಕಮಲ; ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಭರ್ಜರಿ ಗೆಲುವು

Dakshina Kannada Lok Sabha Election 2024: ದಕ್ಷಿಣ ಕನ್ನಡ ಬಿಜೆಪಿಯ ಭದ್ರಕೋಟೆ. ಕಡಲನಗರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದಿದ್ದ ಕಮಲ ತನ್ನ ಗೆಲುವನ್ನು ಮುಂದುವರಿಸಿದೆ.
02:22 PM Jun 04, 2024 IST | ಸುದರ್ಶನ್
UpdateAt: 03:08 PM Jun 04, 2024 IST
dakshina kannada lok sabha election 2024  ಕರಾವಳಿಯಲ್ಲಿ ಮತ್ತೆ ಅರಳಿದ ಕಮಲ  ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಭರ್ಜರಿ ಗೆಲುವು
Advertisement

Dakshina Kannada Lok Sabha Election 2024: ದಕ್ಷಿಣ ಕನ್ನಡ ಬಿಜೆಪಿಯ ಭದ್ರಕೋಟೆ. ಕಡಲನಗರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದಿದ್ದ ಕಮಲ ತನ್ನ ಗೆಲುವನ್ನು ಮುಂದುವರಿಸಿದೆ. ಈ ಬಾರಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಗೆಲುವು ಕಂಡಿದ್ದಾರೆ.

Advertisement

ದ.ಕ.ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಟ್ಟು 16 ಚುನಾವಣೆಗಳು ನಡೆದಿದ್ದು. 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ 9 ಬಾರಿ ಗೆಲುವು ಸಾಧಿಸಿದೆ. 2009,2014,2019 ರಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಿತ್ತು.

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಲಕ್ಷ ಮತಗಳ ಅಂತರ ಪಡೆಯುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾವಣೆ ಗೊಂಡಿದ್ದು, ಗೆಲುವಿನ ಸಂಭ್ರಮ ಆನಂದಿಸುತ್ತಿದ್ದಾರೆ.

Advertisement

ಫಲಿತಾಂಶದ ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ ಅವರು ಕಾಂಗ್ರೆಸ್‌ನ ಪದ್ಮರಾಜ ಆರ್‌.ಪೂಜಾರಿ ಅವರನ್ನು ಲಕ್ಷಕ್ಕೂ ಅಧಿಕ ಮತಗಳಿಗಿಂತ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿರುವುದು ವಿಶೇಷ.

ಶಾಸಕಿ ಭಾಗೀರಥಿ ಮುರಳ್ಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಘೋಷಣೆಗಳನ್ನು ಕೂಗಿ ಸಂಭ್ರಮಪಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ 624483
ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌ ಪೂಜಾರಿ 486195
ಅಂತರ; 138288
ನೋಟಾ 19401

Advertisement
Advertisement
Advertisement