For the best experience, open
https://m.hosakannada.com
on your mobile browser.
Advertisement

Dakshina Kannada: ದ.ಕ; ಜೂನ್‌ 1-3 ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ಮದ್ಯ ನಿಷೇಧ- ಜಿಲ್ಲಾಧಿಕಾರಿ ಆದೇಶ

Dakshina Kannada: ಜೂನ್‌ 01 ರಂದು ಸಂಜೆ 4 ಗಂಟೆಯಿಂದ ಜೂನ್‌ 03 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮುಕ್ತ ದಿನ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ ಅವರು ಆದೇಶ ಮಾಡಿದ್ದಾರೆ. 
12:18 PM May 29, 2024 IST | ಸುದರ್ಶನ್
UpdateAt: 12:32 PM May 29, 2024 IST
dakshina kannada  ದ ಕ  ಜೂನ್‌ 1 3 ರ ಮಧ್ಯರಾತ್ರಿವರೆಗೆ ಜಿಲ್ಲೆಯಾದ್ಯಂತ ಮದ್ಯ ನಿಷೇಧ  ಜಿಲ್ಲಾಧಿಕಾರಿ ಆದೇಶ
Advertisement

Dakshina Kannada: ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆ-2024ಕ್ಕೆ ಕುರಿತಂತೆ ಜೂನ್‌ 01 ರಂದು ಸಂಜೆ 4 ಗಂಟೆಯಿಂದ ಜೂನ್‌ 03 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮುಕ್ತ ದಿನ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ ಅವರು ಆದೇಶ ಮಾಡಿದ್ದಾರೆ.

Advertisement

ಇದನ್ನೂ ಓದಿ: Viral News: ಪ್ರೀತಿಸಿ ಮದುವೆಯಾದ 12 ದಿನಗಳ ನಂತರ ಗೊತ್ತಾಯ್ತು ಪತ್ನಿಯ ಬಗ್ಗೆ ಬಿಗ್ ಶಾಕಿಂಗ್ ಸತ್ಯ! ಆಗಿದ್ದೇನು ಗೊತ್ತಾ?

Advertisement

ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳು, ಮದ್ಯ ತಯಾರಿಕಾ ಡಿಸ್ಟಿಲರಿಗಳು, ಸ್ಟಾರ್‌ ಹೋಟೆಲ್‌ಗಳು ಹಾಗೂ ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.

ಇದನ್ನೂ ಓದಿ: PUC Exam: 'ದ್ವಿತೀಯ PUC' ವಿದ್ಯಾರ್ಥಿಗಳಿಗೆ ಮಹತ್ವ ಮಾಹಿತಿ! ಪರೀಕ್ಷೆ-3 ಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

ಚುನಾವಣಾ ಸಂದರ್ಭದಲ್ಲಿ ಕಾನೂನೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮದ್ಯದಂಗಡಿಗಳನ್ನು ಹಾಗೂ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಭಾರತ ಚುನಾವಣಾ ಆಯೋಗ ನಿರ್ದೇಶನವನ್ನು ನೀಡಿದೆ.

ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಚುನಾವಣೆ -2024 ಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ
ದಿ.1-06-2024 ರ ಸಂಜೆ 6 ಗಂಟೆಯಿಂದ ದಿನಾಂಕ 03-06-2024 ರ ಮಧ್ಯರಾತ್ರಿ 12 ಗಂಟೆಯವರೆಗೆ ಈ ಅವಧಿಯನ್ನು ಮದ್ಯ ಮುಕ್ತ ದಿನಗಳು ಎಂದು ಘೋಷಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪಆಯುಕ್ತರಿಗೆ ನಿರ್ದೇಶನ ನೀಡಿದೆ.

Advertisement
Advertisement
Advertisement