For the best experience, open
https://m.hosakannada.com
on your mobile browser.
Advertisement

Dakshina Kannada: ಆಸಿಡ್ ದಾಳಿ ಪ್ರಕರಣ; ಆಸಿಡ್ ದಾಳಿ ಸಂತ್ರಸ್ತರಿಗೆ ತಲಾ 4 ಲಕ್ಷ ಪರಿಹಾರ

08:43 AM Mar 06, 2024 IST | ಹೊಸ ಕನ್ನಡ
UpdateAt: 11:07 AM Mar 06, 2024 IST
dakshina kannada  ಆಸಿಡ್ ದಾಳಿ ಪ್ರಕರಣ  ಆಸಿಡ್ ದಾಳಿ ಸಂತ್ರಸ್ತರಿಗೆ ತಲಾ 4 ಲಕ್ಷ ಪರಿಹಾರ
Advertisement

ಮಂಗಳೂರು: "ಕಡಬ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಸಿಡ್ ದಾಳಿಗೆ ತುತ್ತಾಗಿರುವ ಮೂವರು ವಿದ್ಯಾರ್ಥಿನಿಯರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುವುದು.'" ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

Advertisement

ಇದನ್ನೂ ಓದಿ:Elon Musk: ಎಲಾನ್ ಮಸ್ಕ್ ಮೇಲೆ ಕೇಸ್ ಜಡಿದ ಟ್ವಿಟರ್ ಮಾಜಿ ಸಿಬ್ಬಂದಿ

ಸಂತ್ರಸ್ತೆಯರನ್ನು ಆಸತ್ರೆಯಲ್ಲಿ ಭೇಟಿಯಾದ ಬಳಿಕ ಮಾತನಾಡಿ, "ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರ ಜತೆ ಮಾತನಾಡಿರುವೆ. ಶೇ.20ರಷ್ಟು, ಇನ್ನೊಬ್ಬಾಕೆಗೆ ಶೇ.12ರಷ್ಟು ಹಾಗೂ ಇನ್ನೊಬ್ಬಾಕೆಗೆ ಶೇ.10ಕ್ಕಿಂತ ಕಡಿಮೆ ಸುಟ್ಟ ಗಾಯಗಳಾಗಿದೆ. ಇಬ್ಬರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯ ಇರುವುದಾಗಿ ವೈದ್ಯರು ತಿಳಿಸಿದ್ದು, ಸರಕಾರದಿಂದ ಈ ಶಸ್ತ್ರಚಿಕಿತ್ಸೆಗೆ 20 ಲಕ್ಷರೂ, ವೈದ್ಯಕೀಯ ಪರಿಹಾರ ದೊರೆಯಲಿದೆ,'' ಎಂದರು.

Advertisement

"ವಿದಾರ್ಥಿನಿಯರು ಪರೀಕ್ಷೆ ಕುರಿತು ಆತಂಕಗೊಂಡಿದ್ದಾರೆ. ಅವರಿಗೆ ಬಾಕಿ ಉಳಿದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಶಿಕ್ಷಣ ಸಚಿವರು ಸೇರಿ ಸಂಬಂಧಪಟ್ಟವರ ಮಾತನಾಡಲಾಗುವುದು,'' ಎಂದರು. ಜತೆ

"ಸಂತ್ರಸ್ತ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಮುಂದೆ ಸ್ವ ಉದ್ಯೋಗ ಕೈಗೊಳ್ಳಲು ಮುಂದಾಗುವುದಿದ್ದರೆ ಅವರಿಗೆ ರಾಜ್ಯ ಸರಕಾರದಿಂದ 5 ಲಕ್ಷ ರೂ. ನೆರವನ್ನೂ ಒದಗಿಸಲಾಗುತ್ತಿದೆ. ವಿದ್ಯಾರ್ಥಿನಿಯರ ಕುಟುಂಬಗಳೂ ಬಡವರಾಗಿರುವ ಕಾರಣ ಖಾಸಗಿ ಆಸ್ಪತ್ರೆಯವರು ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.'' ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

Advertisement
Advertisement
Advertisement