For the best experience, open
https://m.hosakannada.com
on your mobile browser.
Advertisement

Nithish Kumar: ಸದ್ಯ NDAಯಲ್ಲಿ ಇದ್ದೇವೆ, ಕಾಲಾಂತರದಲ್ಲಿ ಬದಲಾವಣೆ ಆಗಬಹದು, ಅಧಿಕಾರ ಶಾಶ್ವತ ಅಲ್ಲ - ಬಿಜೆಪಿಗೆ ಶಾಕ್ ಕೊಟ್ಟ ನಿತೀಶ್ ಕುಮಾರ್ !!

Nithish Kumar: ಲೋಕಸಭಾ ಚುನಾವಣೆಯಲ್ಲಿ ಬಹುಮತ ಬರದ ಹಿನ್ನೆಲೆಯಲ್ಲಿ ಬಿಜೆಪಿ(BJP) NDA ಮೈತ್ರಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಲು ಮುಂದಾಗಿದೆ.
09:48 AM Jun 07, 2024 IST | ಸುದರ್ಶನ್
UpdateAt: 09:58 AM Jun 07, 2024 IST
nithish kumar  ಸದ್ಯ ndaಯಲ್ಲಿ ಇದ್ದೇವೆ  ಕಾಲಾಂತರದಲ್ಲಿ ಬದಲಾವಣೆ ಆಗಬಹದು  ಅಧಿಕಾರ ಶಾಶ್ವತ ಅಲ್ಲ   ಬಿಜೆಪಿಗೆ ಶಾಕ್ ಕೊಟ್ಟ ನಿತೀಶ್ ಕುಮಾರ್

Nithish Kumar: ಲೋಕಸಭಾ ಚುನಾವಣೆಯಲ್ಲಿ ಬಹುಮತ ಬರದ ಹಿನ್ನೆಲೆಯಲ್ಲಿ ಬಿಜೆಪಿ(BJP) NDA ಮೈತ್ರಿ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಈ ನಡುವೆ ನಿತೀಶ್ ಕುಮಾರ್(Nithish Kumar) ನೀಡಿರುವ ಆ ಒಂದು ಹೇಳಿಕೆಯು ಬಿಜೆಪಿಗೆ ಒಂದು ರೀತಿಯಲ್ಲಿ ಶಾಕ್ ನೀಡಿದೆ.

Advertisement

ಬಿಜೆಪಿಗೆ ಬಹುಮತ ಬರದ ಹಿನ್ನೆಲೆಯಲ್ಲಿ ಟಿಡಿಪಿ(TDP) ಮತ್ತು ಜೆಡಿಯು(JDU) ಪಕ್ಷಗಳು ಕಿಂಗ್ ಮೇಕರ್ ಆಗಿವೆ. ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದು NDA ಸರ್ಕಾರ ರಚಿಸಲು ಬೆಂಬಲ ಸೂಚಿಸಿವೆ. ಜೊತೆಗೆ ತಮ್ಮ ನಿರ್ಧಾರದ ಬಗ್ಗೆ ಚರ್ಚೆಯಾಗುತ್ತಿದ್ದ ಊಹಾ ಪೋಹಗಳಿಗೆ ತೆರೆ ಕೂಡ ಎಳೆದಿದ್ದಾರೆ. ಆದರೆ ನಿತೀಶ್ ತಾವು ಬೆಂಬಲ ನೀಡುವ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿದ್ದರು. ಅದೀಗ ಕೊಂಚ ಆತಂಕಕ್ಕೆ ಕಾರಣವಾಗಿದೆ.

ನಿತೀಶ್ ಕುಮಾರ್ ಹೇಳಿದ್ದೇನು?
NDA ಗೆ ಬೆಂಬಲ ನೀಡಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ನಾವು ಎನ್‌ಡಿಎಯಲ್ಲಿ ಇದ್ದೇವೆ. ಇರುತ್ತೇವೆ. ಆದರೆ ಕಾಲಾನಂತರದಲ್ಲಿ, ಏನಾದರೂ ಬದಲಾವಣೆ ಇದ್ದರೆ ನಿಮಗೆ ತಿಳಿಸುತ್ತೇವೆ. ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ಏರಿಳಿತಗಳು ಇರುತ್ತವೆ. ದೇಶ ಶಾಶ್ವತ, ಪ್ರಜಾಪ್ರಭುತ್ವ ಶಾಶ್ವತ, ರಾಜಕೀಯ ಪಕ್ಷಗಳು ಶಾಶ್ವತ. ಆದರೆ, ಅಧಿಕಾರ ಶಾಶ್ವತವಲ್ಲ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Advertisement

Puttur: ಮತ್ತೆ ಪುಣ್ಚಪ್ಪಾಡಿ ಗ್ರಾಮದಲ್ಲಿ ಕಾಡಾನೆ ಸಂಚಾರ ,ಕೃಷಿ ಹಾನಿ;

ಇಲ್ಲಿ ನಿತೀಶ್ ಹೇಳಿಕೆಯಲ್ಲಿ ಎರಡು ರೀತಿಯ ಒಳಾರ್ಥಗಳನ್ನು ಗಮನಿಸಬಹುದು. ಒಂದು 'ನಾವು ಎನ್‌ಡಿಎಯಲ್ಲಿ ಇದ್ದೇವೆ. ಇರುತ್ತೇವೆ. ಆದರೆ ಕಾಲಾನಂತರದಲ್ಲಿ, ಏನಾದರೂ ಬದಲಾವಣೆ ಇದ್ದರೆ ನಿಮಗೆ ತಿಳಿಸುತ್ತೇವೆ' ಎಂಬುದು. ಅಂದರೆ ನಾವು ಕೊನೇವರೆಗೂ NDA ಜೊತೆ ಇರುತ್ತೇವೆ ಎಂಬ ನಂಬಿಕೆ ಸ್ವತಃ ನಿತೀಶ್ ಕುಮಾರ್ ಅವರಿಗೇ ಇಲ್ಲ. ಕಾಲಾಂತರದಲ್ಲಿ ನಮ್ಮ ಮನಸ್ಥಿತಿ ಬದಲಾಗಬಹುದು, ಭಿನ್ನಾಭಿಪ್ರಾಯಗಳು ಏರ್ಪಡಬಹುದು, ಲಾಭಿಗಳು ಶುರುವಾಗಬಹುದು ಹೀಗಿ ಏನಾದರೂ ನೆಪಗಳಿಂದ ನಾವು ಬೆಂಬಲ ವಾಪಸ್ ಪಡೆಯಬಹುದು ಎಂಬ ಅರ್ಥದಲ್ಲಿ ಹೇಳಿರಬಹುದು. ಅಥವಾ ಏನಾದರೂ ಮಹತ್ವದ ನಿರ್ಧಾರಗಳನ್ನು ತಾಳುವಾಗ ನಿಮಗೂ ತಿಳಿಸುತ್ತೇವೆ ಎಂದೂ ಮಾಧ್ಯಮಗಳಿಗೆ ತಿಳಿಸಿರಬಹುದು.

ಇನ್ನೊಂದು ವಿಷಯವನ್ನು ನೋಡುವುದಾದರೆ ದೇಶ ಶಾಶ್ವತ, ಪ್ರಜಾಪ್ರಭುತ್ವ ಶಾಶ್ವತ, ರಾಜಕೀಯ ಪಕ್ಷಗಳು ಶಾಶ್ವತ. ಆದರೆ, ಅಧಿಕಾರ ಶಾಶ್ವತವಲ್ಲ' ಎಂದು ಮಾರ್ಮಿಕವಾಗಿ ನುಡಿದಿರುವುದು. ಇಲ್ಲಿ ಮೋದಿ, ಬಿಜೆಪಿ ಅಧಿಕಾರ ಶಾಶ್ವತ ಅಲ್ಲ ಎಂದಾಗಿಯೂ ಹೇಳಿರಬಹುದು. ಜೊತೆಗೆ ನಾನಗೂ ಅಧಿಕಾರ ಬೇಕೆಂಬ ಸೂಚನೆಯನ್ನೂ ಕೊಟ್ಟಿರಬಹುದು. ಅಥವಾ ಎಲ್ಲದರಲ್ಲೂ ಎಚ್ಚರಿಕೆ ಹೆಜ್ಜೆ ಇಡಿ ಎಂದೂ ಸಂದೇಶ ನೀಡಿರಬಹುದು.

ಒಟ್ಟಿನಲ್ಲಿ ನಿತೀಶ್ ಕುಮಾರ್ ಅವರ ಹೇಳಿಕೆ ಮಾತ್ರ ಬಿಜೆಪಿಗೆ ಒಂದು ರೀತಿಯಲ್ಲಿ ಆತಂಕ ಉಂಟುಮಾಡಿರುತ್ತದೆ. ಯಾಕೆಂದರೆ ನಿತೀಶ್ ಕುಮಾರ್ ಅವರನ್ನು ಯಾವ ಸಂದರ್ಭದಲ್ಲಿಯೂ ನಂಬಲಾಗದು. ಅಧಿಕಾರಕ್ಕಾಗಿ ಅವರು ಎಷ್ಟು ಸಲ ಮೈತ್ರಿ ಬದಲಾವಣೆ ಮಾಡಿದ್ದಾರೆ, ಹೇಗೆ ಮಂಗನಂತೆ ಒಂದೆಡೆಯಿಂದ ಮತ್ತೊಂದೆಡೆಗೆ ಹಾರುತ್ತಾರೆ ಎನಬುದು ಎಲ್ಲರಿಗೂ ತಿಳಿದಿದೆ. ಇವರನ್ನೆಲ್ಲಾ ಯಾವ ಸಂದರ್ಭದಲ್ಲಿಯೂ ನಂಬಲು ಅಸಾಧ್ಯ. ಹೀಗಾಗಿ ಬಿಜೆಪಿ ಜಾಗ್ರತೆಯ ಹೆಜ್ಜೆಯನ್ನು ಇಡಬೇಕು ಅಷ್ಟೆ.

Sullia: ಕಾಂಗ್ರೆಸ್‌ ಕುರಿತು ಅವಹೇಳನಕಾರಿ ಸ್ಟೇಟಸ್‌ ಪ್ರಕರಣ; ಠಾಣೆಗೆ ದೂರು

Advertisement
Advertisement
Advertisement