Cristiano Ronaldo: ಸೌದಿಯಲ್ಲಿ ಫುಟ್ಬಾಲ್ ಆಟದ ಸಂದರ್ಭ ಅಸಭ್ಯ ಸನ್ನೆ ಹಿನ್ನೆಲೆ, ಕ್ರಿಸ್ಟಿಯಾನೊ ರೊನಾಲ್ಡೊಗೆ ಅಮಾನತು ಶಿಕ್ಷೆ
ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಇಲ್ಲಿನ ಸೌದಿ ಫುಟ್ಬಾಲ್ ಲೀಗ್‌ನ ಅಲ್ ಶಬಾಬ್ ಫುಟ್ಬಾಲ್ ಕ್ಲಬ್ ವಿರುದ್ಧದ ಪಂದ್ಯದ ವೇಳೆ ಅಸಭ್ಯ ಸನ್ನೆ ಮಾಡಿದ ಹಿನ್ನೆಲೆಯಲ್ಲಿ ಒಂದು ಪಂದ್ಯದ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: Chakravarthy Sulibele: ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರವೇಶಕ್ಕೆ ಹೈಕೋರ್ಟ್ ಹಸಿರು ನಿಶಾನೆ
ಪಂದ್ಯಾವಳಿಯಲ್ಲಿ ಅಲ್‌ನಾಸೆರ್ ಪರ ರೊನಾಲ್ಡ್ ಒಂದು ಗೋಲನ್ನು ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಅಲ್ ನಾಸರ್ ತಂಡ ಅಲ್‌ಶಬಾಬ್ ವಿರುದ್ಧ 3-2 ಗೋಲುಗಳಿಂದ ಗೆದ್ದುಕೊಂಡಿತು. ಪಂದ್ಯದ ಉದ್ದಕ್ಕೂ ಅಲ್‌ಶಬಾಬ್ ಬೆಂಬಲಿಗರು ರೊನಾಲ್ಡೊ ಎದುರಾಳಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಪದ 'ಮೆಸ್ಸಿ' ಘೋಷಣೆಗಳನ್ನು ಕೂಗಿದ್ದು ರೊನಾಲ್ಲೊ ಕೆಂಗಣ್ಣಿಗೆ ಕಾರಣವಾಗಿತ್ತು.
ಹೀಗಾಗಿ ತಾವು ಗೋಲು ಬಾರಿಸಿದ ಸಂದರ್ಭದಲ್ಲಿ ರೊನಾಲ್ಡೊ ಅಲ್‌ಶಬಾಬ್ ಬೆಂಬಲಿಗರು ಕುಳಿತಿದ್ದ ಗ್ಯಾಲರಿಯತ್ತ ಮುಖ ಮಾಡಿ ಕೆಟ್ಟಬೈಗುಳವನ್ನು ಸೂಚಿಸುವಂತೆ ಸೊಂಟದ ಕೆಳಭಾಗದಿಂದ ಕೈಗಳನ್ನು ಆಡಿಸುವ ಮೂಲಕ ತಮ್ಮ ಸಿಟ್ಟು ತೀರಿಸಿಕೊಂಡಿದ್ದರು.
ಪಂದ್ಯಾವಳಿಯ ಶಿಸ್ತು ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ರೊನಾಲ್ಗೊ ಅವರನ್ನು ಒಂದು ಪಂದ್ಯದಿಂದ ಅಮಾನತು ಗೊಳಿಸಿದೆ. ಜತೆಗೆ 6 ಲಕ್ಷಕ್ಕಿಂತಲೂ ಅಧಿಕ ಮೊತ್ತದ ದಂಡ ವಿಧಿಸಲಾಗಿದೆ.