For the best experience, open
https://m.hosakannada.com
on your mobile browser.
Advertisement

Tragic end of Love Story: ಮದುವೆಯಾದ 8 ತಿಂಗಳಿಗೆ ಸುಂದರಿಯೊಬ್ಬಳ ದುರಂತ ಅಂತ್ಯ; ಡೆತ್‌ನೋಟಲ್ಲೇನಿತ್ತು? ಕಾರಣ ಬಹಿರಂಗ!!!

11:28 AM Jan 19, 2024 IST | ಹೊಸ ಕನ್ನಡ
UpdateAt: 12:00 PM Jan 19, 2024 IST
tragic end of love story  ಮದುವೆಯಾದ 8 ತಿಂಗಳಿಗೆ ಸುಂದರಿಯೊಬ್ಬಳ ದುರಂತ ಅಂತ್ಯ  ಡೆತ್‌ನೋಟಲ್ಲೇನಿತ್ತು  ಕಾರಣ ಬಹಿರಂಗ
Advertisement

Tragic end of Love Story: ಅವರಿಬ್ಬರು ಹತ್ತು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಸುಂದರ ಯುವತಿಯ ಬೆನ್ನ ಹಿಂದೆ ಬಿದ್ದು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಹುಡುಗ. ಎಲ್ಲವೂ ಸರಿ ಇತ್ತು. ಆದರೆ ಮದುವೆಯಾದ ಎಂಟೇ ತಿಂಗಳಿಗೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಗಂಡ, ಮನೆ, ಕುಟುಂಬ ಇನ್ನೂ ಶಾಕ್‌ನಲ್ಲಿದೆ.

Advertisement

ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶಮಿತಾ (25) ಎಂಬಾಕೆಯೇ ಮದುವೆಯಾದ ಎಂಟು ತಿಂಗಳಿಗೆ ಗಂಡನ ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವತಿ.

ಇದನ್ನೂ ಓದಿ: Central Health Department: ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ;ರೋಗಿಗಳಿಗೆ ವೈದ್ಯರು ಆ್ಯಂಟಿಬಯೋಟಿಕ್ ನೀಡುವಾಗ ಕಾರಣ ತಿಳಿಸೋದು ಕಡ್ಡಾಯ!!

Advertisement

ಕಾಲೇಜ್‌ ವಿದ್ಯಾಭ್ಯಾಸ ಮಾಡುವಾಗಲೇ ಶಮಿತಾ ಮತ್ತು ವಿದ್ಯಾರ್ಥ್‌ ನಡುವೆ ಪರಿಚಯವಾಗಿತ್ತು. ಆದರೆ ಆ ಸಮಯದಲ್ಲಿ ಪ್ರೀತಿ ನಿವೇದನೆ ಮಾಡಿರಲಿಲ್ಲ. ಅನಂತರ ಉಡುಪಿಯ ಎಂಜಿಎಂ ಕಾಲೇಜ್‌ಗೆ ಶಮಿತಾ ಬಿಕಾಂ ವ್ಯಾಸಂಗ ಮಾಡಲು ಬಂದಾಗ ಮತ್ತೆ ಇವರಿಬ್ಬರ ಮಧ್ಯೆ ಪ್ರೀತಿ ಬೆಳೆಯಿತು. ಫೋನ್‌ ಮೂಲಕವೇ ಪ್ರಪೋಸ್‌ ಮಾಡಿದ ವಿದ್ಯಾರ್ಥ್‌. ಇಬ್ಬರೂ ಒಂದೇ ಜಾತಿ.

ನಂತರ ಪ್ರಿಯಕರ ವಿದ್ಯಾರ್ಥ್‌ ಗೆ ಅರಣ್ಯ ಇಲಾಖೆಯಲ್ಲಿ ವಾಚರ್‌ ಕೆಲಸ ದೊರಕಿತು. ಹತ್ತು ವರ್ಷಗಳಿಂದ ವಾಚರ್‌ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರ ಪ್ರೀತಿ ನಡುವೆ, ಇವರಿಬ್ಬರ ಅಮ್ಮ ಕೂಡಾ ಶಾಲೆಯಲ್ಲಿ ಕ್ಲಾಸ್‌ಮೇಟ್‌ ಎಂಬ ವಿಷಯ ಕೂಡಾ ಗೊತ್ತಾಗುತ್ತದೆ.

ಹಿರಿಯರ ಒಪ್ಪಿಗೆಯ ಮೇರೆಗೆ ಇವರಿಬ್ಬರ ಮದುವೆ ತೀರ್ಥಹಳ್ಳಿಯಲ್ಲಿ ನಡೆಯುತ್ತದೆ. ಸಾವಿರಾರು ಜನ ಬಂದು ಹರಸಿ ಹೋಗಿದ್ದರು. ಪತ್ನಿಯನ್ನು ಎಲ್ಲಾ ರೀತಿಯಲ್ಲಿ ಖುಷಿಯಲ್ಲಿ ಇಟ್ಟಿದ್ದ ಪತಿ. ಈ ಮಧ್ಯೆ ಶಮಿತಾಳಲ್ಲಿ ಮಾನಸಿಕ ಖಿನ್ನತೆ ಮನೆ ಮಾಡಿತು. ಇದನ್ನು ಅರಿತ ಪತಿ ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ್ದ.

ಸಾವಿನ ಘಟನೆ ನಡೆದಿರುವುದು ಮಂಗಳವಾರ ಮಧ್ಯರಾತ್ರಿ 12-1 ಗಂಟೆ ನಡುವೆ. ಪತಿ ಎಂದಿನಂತೆ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದ. ಅತ್ತೆ ಮಾವನಿಗೆ ತಿಳಿಸಿ ಶಮಿತಾ ರಾತ್ರಿ ಮಲಗಲೆಂದು ಉಪ್ಪರಿಗೆ ಹೋಗಿದ್ದಳು. ಆದರೆ ಬುಧವಾರ ಹೆಣವಾಗಿ ಕಂಡಳು. ಯುವತಿಯ ಪೋಷಕರು ಬಂದ ನಂತರ ನೇಣು ಬಿಗಿದ ದೇಹವನ್ನು ಕೆಳಗಿಳಿಸಲಾಯಿತು. ಮೃತದೇಹದ ಬಳಿ ಡೆತ್‌ನೋಟ್‌ ಲಭ್ಯವಾಗಿದ್ದು, ಆರೋಗ್ಯ ಸಮಸ್ಯೆ ಮತ್ತು ಒಂಟಿತನ ಕಾಡುತ್ತಿರುವ ಕುರಿತು ಉಲ್ಲೇಖವಾಗಿದೆ. ಆರುಂಬೆ ಪೊಲೀಸ್‌ ಠಾಣೆಯಲ್ಲಿ ಶಮಿತಾ ಸಾವಿನ ಕೇಸು ದಾಖಲು ಮಾಡಲಾಗಿದೆ.

ಕೇವಲ ಥೈರಾಡ್ಡ್, ಒಂಟಿತನ ಮತ್ತು ಮಕ್ಕಳು ಆಗುವುದಿಲ್ಲ ಎನ್ನುವ ಭಯದಿಂದ ನವ ಗೃಹಿಣಿ ಸಾವಿನ ಕದ ತಟ್ಟಿದ್ದು ನಿಜಕ್ಕೂ ಖೇದಕರ.

Advertisement
Advertisement
Advertisement