For the best experience, open
https://m.hosakannada.com
on your mobile browser.
Advertisement

Mohammad shami: ಕ್ರಿಕೆಟರ್ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ಗೆ ಕಾರಣ ಒಂದು ಕುರಿಮರಿ - ಆಸಕ್ತಿಕರ ವಿಷ್ಯ ಬಿಚ್ಚಿಟ್ಟ ಸ್ನೇಹಿತ !

01:32 PM Jul 27, 2024 IST | ಸುದರ್ಶನ್
UpdateAt: 01:32 PM Jul 27, 2024 IST
mohammad shami  ಕ್ರಿಕೆಟರ್ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ಗೆ ಕಾರಣ ಒಂದು ಕುರಿಮರಿ   ಆಸಕ್ತಿಕರ ವಿಷ್ಯ ಬಿಚ್ಚಿಟ್ಟ ಸ್ನೇಹಿತ
Advertisement

Mohammad shami: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್ ಬೇಕಾದ ಬೌಲಿಂಗ್ ವಿಷಯದಲ್ಲಿ ಹೊಸ ಸಾಧ್ಯತೆಯೊಂದನ್ನು ಹೇಳಿದ್ದಾರೆ. ಒನ್ ಡೇ ಇಂಟರ್ನ್ಯಾಷನಲ್ ಮ್ಯಾಚ್ ನ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬಳಿಕ ಆಟದಿಂದ ದೂರ ಉಳಿದಿದ್ದರು. ಶಸ್ತ್ರಚಿಕಿತ್ಸೆಯ ನಂತರ, ಇದೀಗ ಅವರು ಫಿಟ್ ಆಗಿದ್ದು, ರೀ ಎಂಟ್ರಿಗೆ ತಯಾರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವೇಗದ ಬೌಲಿಂಗ್ ಗೆ ಕಾರಣ ಒಂದು ಕುರಿಮರಿ ಎನ್ನುವ ಆಸಕ್ತಿಕರ ವಿಷಯ ಹೊರ ಬಂದಿದೆ.

Advertisement

ಹೌದು ಮಹಮ್ಮದ್ ಶಮಿ (Mohammad shami) ಅವರ ವೇಗದ ಬೌಲಿಂಗ್ ಗೆ ಕಾರಣ ಒಂದು ಕುರಿಮರಿ. ಒಂದು ಕೆಜಿ ಮಟನ್ ಮೊಹಮ್ಮದ್ ಶಮಿ ಅವರ ವೇಗದ ಬೌಲಿಂಗ್ ಗೆ ಕಾರಣ ಎನ್ನುವುದನ್ನು ಆತನ ಗೆಳೆಯ ಬಹಿರಂಗಪಡಿಸಿದ್ದಾರೆ. ಶಮಿಯ ಡಯಟ್ ಬಗ್ಗೆ ಆತನ ಸ್ನೇಹಿತ ಉಮೇಶ್ ಕುಮಾರ್ ಹೇಳಿಕೆ ನೀಡಿ, ಮೊಹಮ್ಮದ್ ಶಮಿಗೆ ಮಾಂಸಾಹಾರ ಎಂದರೆ ತುಂಬಾ ಇಷ್ಟ. ಮಟನ್ ಇಲ್ಲದೇ ಹೋದರೆ ಗಲಿಬಿಲಿಯಾಗುತ್ತದೆ. ಪ್ರತಿನಿತ್ಯ 1 ಕೆಜಿ ಮಟನ್ ಇರಬೇಕು ಎಂದ ಅವರು, ಸತತ ಎರಡು ಮೂರು ದಿನ ಮಟನ್ ತಿನ್ನದೇ ಇದ್ದರೆ ಶಮಿ ಬೌಲಿಂಗ್ ವೇಗ ಗಂಟೆಗೆ 15 ಕಿ.ಮೀ.ಗೆ ಇಳಿಯಬಹುದು ಎಂದಿದ್ದಾರೆ ಉಮೇಶ್ !

ಮೊಹಮ್ಮದ್ ಶಮಿಗೆ ಮಟನ್ ಎಂದರೆ ತುಂಬಾ ಇಷ್ಟ. ಆತ ತನ್ನ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಬೇಕಾದರೂ ಸಹಿಸಿಕೊಳ್ಳುತ್ತಾನೆ. ಆದರೆ ಮಟನ್ ಒಂದು ಇಲ್ಲದೆ ಹೋದರೆ ಆತನ ಜೀವನ ಕಷ್ಟ. ಮಟನ್ ತಿನ್ನದೆ ಒಂದು ದಿನ ಹೋಗಬಹುದು, ಆದರೆ ಎರಡನೇ ದಿನಕ್ಕೆ ಆತ ಆತಂಕವನ್ನು ಅನುಭವಿಸುತ್ತಾರೆ. ಮೂರನೇ ದಿನವೂ ಮಟನ್ ಊಟ ಮಾಡದಿದ್ದರೆ ಆತನ ನಿಯಂತ್ರಣ ತಪ್ಪುತ್ತದೆ. ಇದರಿಂದ ಅವರ ಬೌಲಿಂಗ್ ವೇಗ ಗಂಟೆಗೆ 15 ಕಿಲೋಮೀಟರ್ ಕಡಿಮೆಯಾಗಬಹುದು' ಎಂದು ಆತನ ಆತ್ಮೀಯ ಗೆಳೆಯ ಉಮೇಶ್ ಹೇಳಿದ್ದಾರೆ.

Advertisement

Advertisement
Advertisement
Advertisement