Heart Attack: ಸಿಕ್ಸ್ ಹೊಡೆದು ಮುಂದಿನ ಚೆಂಡಿಗೆಂದು ಕಾಯುತ್ತಿರುವಾಗಲೇ ಅಟ್ಟಹಾಸ ಮೆರೆದ ಜವರಾಯ; ವಿಡಿಯೋ ವೈರಲ್
Heart Attack: ಇತ್ತೀಚೆಗೆ ಹದಿಹರೆಯದವರಲ್ಲಿ ಹೃದಯಾಘಾತ ಹೆಚ್ಚಾಗಿ ವರದಿಯಾಗುತ್ತಿದೆ. ಇಂತಹ ಹಲವಾರು ವರದಿಗಳನ್ನು ನಾವು ಇತ್ತೀಚೆಗೆ ಕೇಳುತ್ತಾ ಬಂದಿದ್ದೇವೆ. ಇದಕ್ಕೆ ಪೂರಕವೆಂಬಂತೆ ಇದೀಗ ಕ್ರಿಕೆಟ್ ಆಡುತ್ತಿರುವಾಗ ಯುವಕನೋರ್ವ ಹಠಾತ್ ಕೆಳಗೆ ಬಿದ್ದು, ಪ್ರಾಣಬಿಟ್ಟ ಘಟನೆಯೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
Drumstick: ನುಗ್ಗೆಕಾಯಿ ಬೇಯಿಸಿದ ನೀರನ್ನು ಸೇವಿಸಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?!
ಹಳದಿ ಹಾಗೂ ಪಿಂಕ್ ಬಣ್ಣದ ಶರ್ಟ್ ಧರಿಸಿರುವ ಎರಡು ತಂಡಗಳು ಆಟವಾಡುತ್ತಿದ್ದು, ಇದರಲ್ಲಿ ಪಿಂಕ್ ಬಣ್ಣದ ತಂಡದವರು ಬ್ಯಾಂಟಿಂಗ್ ಮಾಡುತ್ತಿದ್ದರೆ, ಹಳದಿ ತಂಡದವರು ಫೀಲ್ಡಿಂಗ್ ಮಾಡುತ್ತಿದ್ದಾರೆ. ಬ್ಯಾಟಿಂಗ್ ಮಾಡುತ್ತಿರುವ ಯುವಕ ಸಿಕ್ಸ್ ಬಾರಿಸಿದ್ದು, ಕೆಲವೇ ಕ್ಷಣದಲ್ಲಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ.
ಕೂಡಲೇ ಅಲ್ಲಿದ್ದ ಯುವಕರು ಆತನ ಕಡೆಗೆ ಧಾವಿಸಿದ್ದು, ಆತನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದಾರೆ. ಆದರೆ ಆತ ಅಲ್ಲೇ ಸಾವಿಗೀಡಾಗಿದ್ದಾನೆ.
ಸಿಕ್ಸ್ ಬಾರಿಸಿ ಮುಂದಿನ ಚೆಂಡಿಗಾಗಿ ಬ್ಯಾಟ್ ಹಿಡಿದು ನಿಂತಾಗಲೇ ಸಾವು ಬಂದಿದೆ. ಸಾವಿಗೀಡಾದ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
Shivasena-BJP: ಮತ್ತೆ ಮೋದಿ ಜೊತೆ ಉದ್ಧವ್ ದೋಸ್ತಿ ?! ಕ್ಯಾಬಿನೆಟ್ ನಲ್ಲಿ ಠಾಕ್ರೆಗೂ ಸೀಟ್ ಫಿಕ್ಸ್ ?!