For the best experience, open
https://m.hosakannada.com
on your mobile browser.
Advertisement

Indian cricket players: ಹಿಂದೂಗಳಾದ್ರೂ ಗೋ ಮಾಂಸ ತಿನ್ನುತ್ತಾರೆ ಟೀಂ ಇಂಡಿಯಾದ ಈ ಆಟಗಾರರು - ಹಾಗಿದ್ರೆ ಭೀಫ್ ತಿನ್ನೋ ಆ ಮಹಾಶಯರು ಯಾರ್ಯಾರು ?

ಅಚ್ಚರಿ ಎಂದರೆ ಟೀಮ್ ಇಂಡಿಯಾದ ಮೂವರು ಹಿಂದೂ ಧರ್ಮದ ಆಟಗಾರರು (Indian cricket players) ಗೋಮಾಂಸ ತಿಂದಿದ್ದಾರೆ ಎನ್ನುವ ಸಂಗತಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
10:24 AM Sep 05, 2023 IST | ಹೊಸ ಕನ್ನಡ
UpdateAt: 10:26 AM Sep 05, 2023 IST
indian cricket players  ಹಿಂದೂಗಳಾದ್ರೂ ಗೋ ಮಾಂಸ ತಿನ್ನುತ್ತಾರೆ ಟೀಂ ಇಂಡಿಯಾದ ಈ ಆಟಗಾರರು   ಹಾಗಿದ್ರೆ ಭೀಫ್ ತಿನ್ನೋ ಆ ಮಹಾಶಯರು ಯಾರ್ಯಾರು
Advertisement

Indian cricket players:ಟೀಂ ಇಂಡಿಯಾ ಆಟಗಾರರೆಂದರೆ ಹೆಚ್ಚಿನವರಿಗೆ ಫೇವರಿಟ್. ನಿಮ್ಮ ಹೀರೋ ಯಾರು, ಫೇವರೇಟ್ ಸೆಲಬ್ರಿಟಿ ಯಾರು ಅಂತ ಯಾರಾದ್ರೂ, ಯಾರ ಬಳಿಯಾದರೂ ಕೇಳಿದ್ರೆ ಹೆಚ್ಚಿನವರು ಟೀಂ ಇಂಡಿಯಾ ಆಟಗಾರರ ಹೆಸರನ್ನೇ ಹೇಳುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ಟೀಮ್ ಇಂಡಿಯಾ ಸಾಧನೆ ಅದ್ವಿತೀಯ. ಆದರೆ ಬಹುತೇಕ ಆಟಗಾರರು ತಮ್ಮ ಪ್ರತಿಭೆ ಮೂಲಕ ಗಮನಸೆಳೆವುದರೊಂದಿಗೆ ಜೀವನಶೈಲಿಯಿಂದಲೂ ಆಗಾಗ ಚರ್ಚೆಗೆ ಗ್ರಾಸವಾಗುತ್ತಿರುತ್ತಾರೆ. ಅಚ್ಚರಿ ಎಂದರೆ ಟೀಮ್ ಇಂಡಿಯಾದ ಮೂವರು ಹಿಂದೂ ಧರ್ಮದ ಆಟಗಾರರು (Indian cricket players) ಗೋಮಾಂಸ ತಿಂದಿದ್ದಾರೆ ಎನ್ನುವ ಸಂಗತಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಹೌದು, ಟೀಮ್ ಇಂಡಿಯಾದ ಆಟಗಾರರ ಬಗ್ಗೆ ಹೇಳುವುದಾದರೆ ಕೇವಲ ಆಟದಿಂದ ಮಾತ್ರವಲ್ಲದೆ ಅವರ ಜೀವನಶೈಲಿ, ಬದುಕುವ ರೀತಿ, ಉಡುಗೆ – ತೊಡುಗೆಗಳು, ಆಹಾರ ಪದ್ಧತಿ ಮೊದಲಾದವುಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂತೆಯೇ ಇದೀಗ ಸದ್ಯ ಗೋಮಾಂಸವನ್ನು ಸೇವಿಸಿದ ಮೂರು ಆಟಗಾರರ ಬಗ್ಗೆ ಭಾರೀ ಆಕ್ರೋಶ ಕೇಳಿಬರುತ್ತಿದೆ. ಅದರಲ್ಲೂ ಈ ಮೂವರು ಹಿಂದೂ ಧರ್ಮಗಳಾಗಿದ್ದು ಗೋಮಾಂಸವನ್ನು ತಿಂದಿದ್ದಾರೆ ಎನ್ನುವ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹೆಚ್ಚು ವೈರಲ್ ಆಗುತ್ತಿದೆ. ಹಾಗಿದ್ರೆ ಯಾರು ಆ ಮೂರು ಜನ? ಇದಕ್ಕೆ ಜನರು ಏನೆಂದು ಹೇಳುತ್ತಿದ್ದಾರೆ?

Indian cricket players

Advertisement

ರೋಹಿತ್ ಶರ್ಮ: ಟೀಮ್ ಇಂಡಿಯಾದ ಅತ್ಯುತ್ತಮ ಕ್ರಿಕೆಟರ್ ಎನಿಸಿಕೊಂಡಿರುವ ರೋಹಿತ್ ಶರ್ಮ (Rohit Sharma), ಅನೇಕ ಯುವ ಕ್ರಿಕೆಟಿಗರಿಗೆ ಮಾದರಿಯೂ ಹೌದು ಹಲವು ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವವೂ ಹೌದು. ಇತ್ತೀಚಿಗೆ ಗೋಮಾಂಸವನ್ನು ಸೇವಿಸಿದ್ದಾರೆ ಎನ್ನುವ ವಿಷಯದಲ್ಲಿ ವೈರಲ್ ಆಗುತ್ತಿದೆ. ತಮ್ಮ ಆಟದ ಶೈಲಿ, ನಾಯಕತ್ವದಿಂದ ಗಮನ ಸೆಳೆಯುವ ಅವರು 2021ರಲ್ಲಿ ಗೋಮಾಂಸ ತಿಂದಿದ್ದಾರೆ ಎನ್ನುವ ವಿಚಾರವೇ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಆದರೆ ಈ ಬಗ್ಗೆ ಹಿಟ್ ಮ್ಯಾನ್ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

ನವದೀಪ್ ಸೈನಿ: ವೇಗದ ಬೌಲರ್ ನವದೀಪ್ ಸೈನಿ ಕೂಡ ಇದೇ ಕಾರಣಕ್ಕೆ ನೆಟ್ಟಿಗರಿಂದ ಟ್ರೋಲಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನವದೀಪ್ ಸೈನಿ ಗೋಮಾಂಸ ತಿನ್ನುತ್ತಿರುವ ಫೋಟೋ ವೈರಲ್ ಆಗಿದೆ. ನವದಿಪ್ ಸೈನಿ ಆಹಾರದ ಬಿಲ್ ನ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದು ರೋಹಿತ್ ಶರ್ಮಾ ಅವರ ಜೊತೆಗೆ ನವದೀಪ ಸೈನಿ ಕೂಡ ಇದ್ದರು ಎಂದು ತಿಳಿದು ಬಂದಿದೆ. ಅವರು ಕೂಡ ಗೋ ಮಾಂಸ ಸೇವಿಸಿದ್ದರು ಎನ್ನುವ ವಿಚಾರ ಬಹಿರಂಗವಾಗಿದ್ದು, ನೆಟ್ಟಿಗರು ಗರಂ ಆಗಿದ್ದರು.

ಪೃಥ್ವಿ ಶಾ: ಟೀಮ್ ಇಂಡಿಯಾದ ಭರವಸೆಯ ಆಟಗಾರ ಪೃಥ್ವಿ ಶಾ (Prithvi Shaw). ಆದರೆ ಇತ್ತೀಚಿಗೆ ಅವರು ತಮ್ಮ ಬ್ಯಾಟಿಂಗ್ ಪ್ರದರ್ಶನಕ್ಕಿಂತಲೂ ವೈಯಕ್ತಿಕ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಸಪ್ನಾ ಗಿಲ್ ಜೊತೆಗೆ ಪೃಥ್ವಿ ಶಾ ಜಗಳವಾಡಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಇನ್ನು ಗೋ ಮಾಂಸ ತಿಂದಿರುವ ವಿಚಾರದಲ್ಲಿ ಪೃಥ್ವಿ ಶಾ ಅವರ ಹೆಸರು ಕೂಡ ಸೇರಿಕೊಂಡಿದೆ. 2021 ರಲ್ಲಿ ರೋಹಿತ ಶರ್ಮಾ ಅವರ ಜೊತೆಗೆ ಪೃಥ್ವಿ ಶಾ ಹಾಗೂ ನವದೀಪ್ ಸೈನಿ ಕೂಡ ಜೊತೆಗಿದ್ದರು ಎಂದು ಹೇಳಲಾಗುತ್ತದೆ. ಸದ್ಯ ಈ ಸುದ್ದಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಗೊತ್ತಾಗಿದ್ದು ಹೇಗೆ?
ಈ ಮೂವರು ಆಟಗಾರರು ಆಹಾರ ಸೇವಿಸಿದ ಹೋಟೆಲ್ ಬಿಲ್ ಬಹಿರಂಗವಾಗುವುದರೊಂದಿಗೆ ಈ ವಿಷಯ ಹೊರ ಜಗತ್ತಿಗೆ ತಿಳಿಯಿತು. ಬಿಲ್ ನಲ್ಲಿ ಬೀಫ್ ಎಂದು ಉಲ್ಲೇಖವಾಗಿದ್ದು ಈ ಫೋಟೋ ವೈರಲ್ ಆಗಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಗೋ ಹತ್ಯೆ ಮಹಾ ಪಾಪ ಎನ್ನುವ ಹಾಗೂ ಗೋವನ್ನು ಪೂಜಿಸುವ ಹಲವರು ಈ ಮೂವರನ್ನು ಟ್ರೋಲ್ ಮಾಡಿದ್ದಾರೆ. ನೀವೇ ಹೀಗೆ ಮಾಡಿದರೆ ಬೇರೆಯವರಿಗೆ ಹೇಗೆ ಮಾದರಿ ಆಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Uma bharati: ಬಿಜೆಪಿ ವಿರುದ್ಧವೇ ಸಿಡಿದೆದ್ದ ಬಿಜೆಪಿ ಫ್ರೈರ್ ಬ್ರಾಂಡ್ ಉಮಾಭಾರತಿ- ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ ನಾಯಕಿ !!

Advertisement
Advertisement
Advertisement