For the best experience, open
https://m.hosakannada.com
on your mobile browser.
Advertisement

Gurkeerat Singh Mann: RCB ಅಭಿಮಾನಿಗಳಿಗೆ ಬಿಗ್ ಶಾಕ್- ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ !!

01:21 PM Dec 05, 2023 IST | ಹೊಸ ಕನ್ನಡ
UpdateAt: 01:23 PM Dec 05, 2023 IST
gurkeerat singh mann  rcb ಅಭಿಮಾನಿಗಳಿಗೆ ಬಿಗ್ ಶಾಕ್  ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಸ್ಟಾರ್ ಕ್ರಿಕೆಟಿಗ
Advertisement

Gurkeerat Singh Mann : ಐಪಿಎಲ್ 2024ಕ್ಕೆ ಭರ್ಜರಿ ಸಿದ್ಧತೆಗಳು ನಡೆದಿದ್ದು ಈಗಾಗಲೇ ಆಟಗಾರರ ಟ್ರೇಡಿಂಗ್ ಹಾಗೂ ರೀಟೈನ್ ಮತ್ತು ರಿಲೀಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ನಡುವೆಯೇ RCB ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದ್ದು ಈ ಸ್ಟಾರ್ ಕ್ರಿಕೆಟಿಗ ತಮ್ಮ ಕ್ರಿಕೆಟ್ ಲೋಕಕ್ಕೇ ವಿದಾಯ ಘೋಷಿಸಿದ್ದಾರೆ.

Advertisement

ಹೌದು, ಆರ್‌ಸಿಬಿ, ಕೋಲ್ಕತಾ ನೈಟ್ ರೈಡರ್ಸ್ ಸೇರಿದಂತೆ ಐಪಿಎಲ್ ಟೂರ್ನಿಯಲ್ಲಿ ಮಿಂಚಿ, ಆಲ್ರೌಂಡರ್ ಕ್ರಿಕೆಟಿಗನಾಗಿ ಖ್ಯಾತಿ ಪಡೆದ ಟೀಂ ಇಂಡಿಯಾ, ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಖ್ಯಾತ ಕ್ರಿಕೆಟಿಗ ಗುರುಕೀರತ್ ಸಿಂಗ್ ಮನ್(Gurkeerat Singh Mann) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

Advertisement

ತಮ್ಮ ಪೋಸ್ಟ್ ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದೇ ನನಗೆ ಹೆಮ್ಮೆಯ ವಿಚಾರ. ನನ್ನ ಕ್ರಿಕೆಟ್ ಕರಿಯರ್‌ನಲ್ಲಿ ನಿರಂತರ ಪ್ರೋತ್ಸಾಹ ನೀಡಿದ ಪೋಷಕರು, ಕೋಚ್, ಪಂಜಾಬ್ ಕ್ರಿಕೆಟ್ ಸಂಸ್ಥೆ, ಬಿಸಿಸಿಐಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಅಂದಹಾಗೆ 2016ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗುರುಕೀರತ್ ಸಿಂಗ್ ಕೇವಲ 3 ಪಂದ್ಯ ಮಾತ್ರ ಆಡಿದ್ದಾರೆ.

ಇನ್ನು ಈ ಹಿಂದೆ ಟ್ರೇಡಿಂಗ್ ಹಾಗೂ ರೀಟೈನ್ ಮತ್ತು ರಿಲೀಸ್‌ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು(RCB) ತನ್ನ ಸ್ಟಾರ್ ಆಲ್ರೌಂಡರ್ ಶೆಹಬಾಜ್ ಅಹಮದ್ ಅವರನ್ನು ತಂಡದಿಂದ ಬಿಟ್ಟುಕೊಟ್ಟಿದೆ. ಅಂದರೆ ಸನ್‌ರೈಸರ್ಸ್ ಹೈದರಾಬಾದ್‌ಗೆ ನೀಡಿ ಅಲ್ಲಿಂದ ಮಯಾಂಕ್ ಡಾಗರ್‌ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದು RCB ಅಭಿಮಾನಿಗಳಿಗೆ ಕೊಂಚ ನಿರಾಸೆ ಉಂಟುಮಾಡಿತ್ತು. ಇದೀಗ ಗುರುಕೀರತ್ ಸಿಂಗ್ ಮಾನ್ ಅವರ ಈ ನಡೆಯು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ.

ಇದನ್ನೂ ಓದಿ: BJP: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬದಲು !! ರಾಜ್ಯ ರಾಜಕೀಯ ಮಹಾನ್ ಸಂಚಲನ

Advertisement
Advertisement
Advertisement