ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Cooking Tips: ಹಾರ್ಟ್​ ಪ್ರಾಬ್ಲಂ ಬರದೇ ಇರಲು ಇಡ್ಲಿ ಹಿಟ್ಟಿಗೆ ಅಕ್ಕಿ ಬದಲು ಇದನ್ನು ಮಿಕ್ಸ್​ ಮಾಡಿ!

Cooking Tips: ಸಾಮಾನ್ಯವಾಗಿ ಅಕ್ಕಿ ಹಿಟ್ಟಿನಲ್ಲಿ  ಇಡ್ಲಿ ಹಾಗೂ ದೋಸೆಯನ್ನು ತಯಾರಿಸುತ್ತಾರೆ. ಆದರೆ ಇದಕ್ಕಿಂತಲೂ ಆರೋಗ್ಯಕರವಾದ ರೀತಿಯಲ್ಲಿ ಇಡ್ಲಿ-ದೋಸೆಯನ್ನು ಮಾಡಬಹುದಾಗಿದೆ.
12:33 PM Jun 15, 2024 IST | ಕಾವ್ಯ ವಾಣಿ
UpdateAt: 12:33 PM Jun 15, 2024 IST
Advertisement

Cooking Tips: ಇತ್ತೀಚಿಗೆ ಅತೀ ಚಿಕ್ಕ ವಯಸ್ಸಿನವರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ (Heart Attack Signs) ಸಾವು ಉಂಟಾಗುತ್ತಿದೆ. ಆದ್ದರಿಂದ ಹಾರ್ಟ್ ಪ್ರಾಬ್ಲಮ್ ಭಯ ಹೆಚ್ಚಿನವರಲ್ಲಿ ಇದ್ದೇ ಇದೆ. ಅದಕ್ಕಾಗಿ ಅಂತಹವರಿಗಾಗಿ ಈ ಆಹಾರ ಟಿಪ್ಸ್ (Cooking Tips) ನೀಡಲಾಗಿದೆ.

Advertisement

Eye Care: ಇನ್ಮೇಲೆ ಕಣ್ಣಿನ ಸಮಸ್ಯೆ ಬರೋದೇ ಇಲ್ಲ! ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

ಹೌದು, ಸಾಮಾನ್ಯವಾಗಿ ಅಕ್ಕಿ ಹಿಟ್ಟಿನಲ್ಲಿ  ಇಡ್ಲಿ ಹಾಗೂ ದೋಸೆಯನ್ನು ತಯಾರಿಸುತ್ತಾರೆ. ಆದರೆ ಇದಕ್ಕಿಂತಲೂ ಆರೋಗ್ಯಕರವಾದ ರೀತಿಯಲ್ಲಿ ಇಡ್ಲಿ-ದೋಸೆಯನ್ನು ಮಾಡಬಹುದಾಗಿದೆ.

Advertisement

ಮುಖ್ಯವಾಗಿ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿ ತಿನ್ನುವುದರಿಂದ ದೇಹಕ್ಕೆ ತುಂಬಾ ಆರೋಗ್ಯಕರ ಹೌದು. ಆದರೆ ಅಕ್ಕಿಯ ಬದಲಿಗೆ ಬಾರ್ಲಿಯನ್ನು ಬಳಸಿ ಕೂಡ ನೀವು ಇಡ್ಲಿ ಮಾಡಬಹುದು.

ಬಾರ್ಲಿ ಯಲ್ಲಿ ಇಡ್ಲಿ ಮಾಡಲು, 1 ಕಪ್ ಬಾರ್ಲಿಯನ್ನು ಶುಚಿಯಾಗಿ ತೊಳೆದು 3 ಗಂಟೆಗಳ ಕಾಲ ನೆನೆಸಿಡಬೇಕು. ಜೊತೆಗೆ ಅರ್ಧ ಕಪ್ ಗೋಧಿ ರವೆಯನ್ನು ಪ್ರತ್ಯೇಕವಾಗಿ 1 ಗಂಟೆ ನೆನೆಸಿಡಬೇಕು. ಬಾರ್ಲಿಯನ್ನು ಚೆನ್ನಾಗಿ ನೆನೆಸಿದ ನಂತರ ಉಪ್ಪು, ಮೆಣಸಿನಕಾಯಿ, ಗೋಧಿ ರವೆ ಮತ್ತು ಅರ್ಧ ಕಪ್ ಮೊಸರು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ರುಬ್ಬಿಕೊಂಡು ಒಂದು ಗಂಟೆಗಳ ಕಾಲ ಬಿಡಿ. ನಂತರ ಇದರಿಂದ ಇಡ್ಲಿ ಅಥವಾ ದೋಸೆ ಮಾಡಿದರೆ ಪೌಷ್ಟಿಕ ಆಹಾರ ತಿನ್ನಲು ಸಿದ್ಧ.

ಬಾರ್ಲಿ ನೀರು ಹೃದಯ ಸಂಬಂಧಿ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮುಖ್ಯವಾಗಿ ಬಾರ್ಲಿಯು ವಿಟಮಿನ್ ಬಿಯಲ್ಲಿ ಸಮೃದ್ಧವಾಗಿದೆ ಮತ್ತು ಮಧುಮೇಹಿಗಳಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವುದರಿಂದ ಹಿಡಿದು ನರಗಳನ್ನು ಬಲಪಡಿಸುತ್ತದೆ. ಇನ್ನು ಬಾರ್ಲಿ ಅಕ್ಕಿಯಲ್ಲಿರುವ ಸತುವು, ಹೃದಯದ ಕಾರ್ಯವನ್ನು ಉತ್ತೇಜಿಸುತ್ತದೆ ಮತ್ತು ಹೃದಯಾಘಾತದಂತಹ ಹೃದ್ರೋಗ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸತುವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದು ದೇಹದಿಂದ ಹೆಚ್ಚುವರಿ ನೀರನ್ನು ತೆಗೆದುಹಾಕುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಫೈಬರ್ ಸಮೃದ್ಧವಾಗಿರುವ ಬಾರ್ಲಿಯು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಕರುಳಿನಿಂದ ಹಾನಿಕಾರಕ ವಿಷವನ್ನು ಹೊರಹಾಕುತ್ತದೆ. ಆದ್ದರಿಂದ ಬೆಳಗಿನ ಉಪಾಹಾರದಲ್ಲಿ ಹೆಚ್ಚಾಗಿ ಬಾರ್ಲಿಯನ್ನು ಸೇರಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು.

Different Love Story: ಕುಟುಂಬವನ್ನೇ ತೊರೆದು 80ರ ತಾತನನ್ನು ಮದುವೆಯಾದ 23ರ ಸುಂದರಿ !! ಕೊಟ್ಟ ಕಾರಣ ಮಾತ್ರ ನಿಜಕ್ಕೂ ಶಾಕಿಂಗ್ !!

 

Advertisement
Advertisement