For the best experience, open
https://m.hosakannada.com
on your mobile browser.
Advertisement

Karnataka government : ಇನ್ಮುಂದೆ ಈ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗೋದಿಲ್ಲ ಯಾವುದೇ ಸಂಬಳ - ಸರ್ಕಾರದಿಂದ ಖಡಕ್ ನಿರ್ಧಾರ !!

02:31 PM Jan 05, 2024 IST | ಹೊಸ ಕನ್ನಡ
UpdateAt: 02:34 PM Jan 05, 2024 IST
karnataka government   ಇನ್ಮುಂದೆ ಈ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗೋದಿಲ್ಲ ಯಾವುದೇ ಸಂಬಳ   ಸರ್ಕಾರದಿಂದ ಖಡಕ್ ನಿರ್ಧಾರ

Karnataka government: ರಾಜ್ಯ ಸರ್ಕಾರದಿಂದ ಹೊಸ ಆದೇಶವೊಂದು ಹೊರ ಬಿದ್ದಿದ್ದು, ಇನ್ಮುಂದೆ ಈ ಸರ್ಕಾರಿ ನೌಕರರಿಗೆ ಯಾವುದೇ ರೀತಿ ವೇತನವನ್ನು ಕೊಡದಿರಲು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Advertisement

ಹೌದು, ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ(University) ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ಅನೇಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಹೀಗೆ ಅನುಮತಿ ಇಲ್ಲದೆ ಭರ್ತಿಮಾಡಿಕೊಂಡ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ. ಇದರಿಂದ ಅನೇಕ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ವೇತನ ಸಿಗುವುದಿಲ್ಲ.

ಅಂದಹಾಗೆ ಇದೀಗ ರಾಜ್ಯದಲ್ಲಿ 41 ಸರ್ಕಾರಿ ವಿವಿಗಳಿದ್ದು, ಕೆಲವು ವಿವಿಗಳ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಕೆಲವು ಹುದ್ದೆಗಳನ್ನು ಭರ್ತಿಮಾಡಿಕೊಂಡಿದ್ದಾರೆ. ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ವಿವಿಗಳ ಕುಲಪತಿಗಳು ಉದ್ಧಟತನ ತೋರಿ ಹುದ್ದೆ ಭರ್ತಿಮಾಡಿಕೊಂಡಿದ್ದಾರೆ.

Advertisement

ಇದನ್ನೂ ಓದಿ: ಮಂಗಳೂರು: ಪ್ರೀತಿಸಿದ್ದು ಒಬ್ಬಳನ್ನು, ಮದುವೆ ಮತ್ತೊಬ್ಬಳ ಜೊತೆ !! ತಾಳಿ ಕಟ್ಟೋ ಟೈಮ್ ಗೆ ಖಡಕ್ ಎಂಟ್ರಿ ಕೊಟ್ಟ ಮಾಜಿ ಪ್ರೇಯಸಿ, ಮುಂದೆನಾಯ್ತು !!

ಇನ್ನು ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಇವರಿಗೆ ಇನ್ನು ಸರ್ಕಾರ ಯಾವ ವೇತನವನ್ನೂ ನೀಡುವುದಿಲ್ಲ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ. ಆರ್ಥಿಕ ಇಲಾಖೆ ನೀಡುವ ವೇತನಾನುನುದಾನ ಬಳಕೆ ಸಾಧ್ಯವಿರುವುದಿಲ್ಲ ಎಂದು ಸರ್ಕಾರ ಖಡಕ್ ಆಗಿ ಸೂಚಿಸಿದೆ.

Advertisement
Advertisement