For the best experience, open
https://m.hosakannada.com
on your mobile browser.
Advertisement

Parliment election: ಲೋಕಸಭೆಗೆ ಈ 11 ಸಚಿವರನ್ನು ಕಣಕ್ಕಿಸಲು ಮುಂದಾದ ಕಾಂಗ್ರೆಸ್- ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆ ?!

04:56 PM Dec 30, 2023 IST | ಹೊಸ ಕನ್ನಡ
UpdateAt: 04:56 PM Dec 30, 2023 IST
parliment election  ಲೋಕಸಭೆಗೆ ಈ 11 ಸಚಿವರನ್ನು ಕಣಕ್ಕಿಸಲು ಮುಂದಾದ ಕಾಂಗ್ರೆಸ್  ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆ
Advertisement

Parliment election: ಲೋಕಸಭೆಗೆ ಈ 11 ಸಚಿವರನ್ನು ಕಣಕ್ಕಿಸಲು ಮುಂದಾದ ಕಾಂಗ್ರೆಸ್- ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆ ?!

Advertisement

Parliment election : ಮುಂಬರುವ ಲೋಕಸಭಾ ಚುನಾವಣೆಯ(Parliament election)ಕಾವು ಇದೀಗ ದೇಶಾದ್ಯಂತ ರಂಗೇರಿದೆ. ಇದರ ನಡುವೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದ್ದು, ಲಾಭಿಗಳು ಕೂಡ ಜೋರಾಗಿದೆ. ಇದರೆಡೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಟು ಸ್ಥಾನಗಳನ್ನು ಗೆಲ್ಲುವ ಪಣತೊಟ್ಟಿದ್ದು ತನ್ನ ಸರ್ಕಾರದ ಈ 11 ಮಂತ್ರಿಗಳನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ.

ಹೌದು, ಲೋಕಸಭಾ ಚುನಾವಣೆ(Parliament election)ರಾಜ್ಯ ಕಾಂಗ್ರೆಸ್ ಗೆ ಅಗ್ನಿ ಪರೀಕ್ಷೆಯಾಗಿದೆ. ಯಾಕೆಂದರೆ ವಿಧಾನಸಭಾ ಚುನಾವಣೆಯ ಗೆಲುವಿನಷ್ಟು ಇದು ಸುಲಭವಲ್ಲ. ಮೋದಿ ಹವಾ ದೇಶಾದ್ಯಂತ ಇನ್ನೂ ಹಾಗೆಯೇ ಇದೆ. ಹೀಗಾಗಿ ಬಿಜೆಪಿ ವಿರುದ್ಧ ಪ್ರಬಲ ನಾಯಕರನ್ನು ಕಣಕ್ಕಿಳಿಸಿ ಹೇಗಾದರೂ ಗೆಲುವನ್ನು ತಮ್ಮದಾಗಿಸಿಕೊಳ್ಳಬೇಕೆಂಬುದು ಅವರ ತಂತ್ರ. ಇದಕ್ಕೆ ತುಂಬಾ ಖ್ಯಾತಿಗಳಿಸಿ ಹೆಸರು ಮಾಡಿರುವ ಮಂತ್ರಿಗಳೇ ಸರಿಯೆಂದು ಭಾವಿಸಿರುವ ಕಾಂಗ್ರೆಸ್ ಈ ಎಲ್ಲಾ ಕ್ಷೇತ್ರಗಳಲ್ಲಿ ಸಚಿವರನ್ನೇ ಕಣಕ್ಕಿಳಿಸಲು ತೀರ್ಮಾನ ಮಾಡಿದೆ. ಹಾಗಿದ್ದರೆ ಯಾವ ಮಂತ್ರಿಗಳೆಲ್ಲಾ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ನೋಡೋಣ.

Advertisement

• ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
• ತುಮಕೂರು ಲೋಕಸಭಾ ಕ್ಷೇತ್ರದಿಂದ ಕೆ.ಎನ್​.ರಾಜಣ್ಣ
• ಚಾಮರಾಜನಗರ ಎಸ್​ಸಿ ಮೀಸಲು ಕ್ಷೇತ್ರಕ್ಕೆ ಹೆಚ್​ಸಿ.ಮಹದೇವಪ್ಪ
• ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾಗಮಂಗಲ ಶಾಸಕ ಕಂ ಕೃಷಿ ಸಚಿವ ಎನ್​. ಚೆಲುವರಾಯಸ್ವಾಮಿ
• ಬಳ್ಳಾರಿಯಿಂದ ಸಚಿವ ಬಿ.ನಾಗೇಂದ್ರ
• ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾರ್ಮಿಕಿ ಸಚಿವ ಸಂತೋಷ್ ಲಾಡ್
• ಕೋಲಾರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಅನ್ನೋ ಚರ್ಚೆ ನಡೀತಿದ್ದು. ಹಿರಿಯ ಸಚಿವ ಕೆ.ಹೆಚ್​.ಮುನಿಯಪ್ಪ ಮತ್ತು ಗೃಹ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಇಬ್ಬರಲ್ಲಿ ಯಾರು ಯಾವ ಕಡೆ ಸ್ಪರ್ಧಿಸಬೇಕು ಅನ್ನೋ ಚರ್ಚೆ ನಡೀತಿದೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು ಲೋಕಸಭೆಗೆ ಸಚಿವರ ಸ್ಪರ್ಧೆ ಅನಿವಾರ್ಯ ಆಗಬಹುದು ಎಂದು ತೀರ್ಮಾನಿಸಲಾಗಿದೆ. ಹೀಗಾಗಿ ಮಾನಸಿಕವಾಗಿ ಸಿದ್ದರಾಗಿರಿ ಎಂದು ಸಚಿವರುಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement
Advertisement
Advertisement