ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Congress Guarantees: ಲೋಕಸಭಾ ಚುನಾವಣೆ ಆದ ಮೇಲೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ನಿಲ್ಲಲಿದೆ - ಹೆಚ್.ಡಿ.ಆರ್

09:06 AM Jan 26, 2024 IST | Praveen Chennavara
UpdateAt: 09:11 AM Jan 26, 2024 IST
Advertisement

ಹಾಸನ : ಲೋಕಸಭಾ ಚುನಾವಣೆ ಆದ ಮೇಲೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ನಿಲ್ಲಲಿದೆ. ಇವತ್ತು ಹಳ್ಳಿ ಕಡೆಗೆ ಬಸ್‌ಗಳನ್ನು ಬಿಡ್ತಿಲ್ಲ ಯಾಕೆಂದರೆ ಬಸ್‌ಗಳನ್ನು ಬಿಟ್ಟರೆ ಮಹಿಳೆಯರೇ ಬರ್ತಾರೆ ಎಂಬ ಆತಂಕ.ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ಗ್ಯಾರೆಂಟಿಯೆಲ್ಲಾ ಖಾಲಿ ಆಗುತ್ತೆ ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ ಹೇಳಿದ್ದಾರೆ.

Advertisement

ಇದನ್ನೂ ಓದಿ:Kadaba: ತೋಡು ದಾಟುವಾಗ ಪಾಲದಿಂದ ನೀರಿಗೆ ಬಿದ್ದು ವ್ಯಕ್ತಿ ಸಾವು

ಅವರು ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Advertisement

ಕಾಂಗ್ರೆಸ್ ಸರ್ಕಾರ ರೈತರ ತಲೆ ಹೊಡೆಯುತ್ತಿದೆ. ಬಿಜೆಪಿ ಸರ್ಕಾರವನ್ನು ಮೂವತ್ತು ಪರ್ಸೆಂಟ್‌ ಎಂದರು. ಇವರದ್ದು ಎಷ್ಟು ಪರ್ಸೆಂಟ್ ಸರ್ಕಾರ..? ರೈತರಿಗೆ ಮೂವತ್ತು ಪೈಪ್, ಐದು ಸ್ಪಿಂಕ್ಲ‌ರ್ ಕೊಡಲು 1600 ಕೊಡಬೇಕಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೂರು ಸಾವಿರ ರೂ ಜಾಸ್ತಿ ಮಾಡಿದ್ದಾರೆ. ನಾವು ಬದುಕಿರುವವರೆಗೂ ನಾನಾಗಲಿ, ದೇವೇಗೌಡರಾಗಲಿ, ಯಾರೇ ಆಗಲಿ ಮುಸಲ್ಮಾನರನ್ನು ಕೈ ಬಿಡಲ್ಲ. ನಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದಾರೆ. ಮುಸ್ಲಿಂ ಸಮುದಾಯದಕ್ಕೆ ಹತ್ತು ಸಾವಿರ ಕೋಟಿ ಕೊಡ್ತಿನಿ ಅಂತ ಕಾಂಗ್ರೆಸ್ ಹೇಳಿದೆ. ಲೋಕಸಭೆ ಚುನಾವಣೆ ಕಳೆದ ಮೇಲೆ ಹತ್ತು ಸಾವಿರ ಇರಲಿ, ಹತ್ತು ರೂಪಾಯಿ ಕೊಡಲ್ಲ ಎಂದು ರೇವಣ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಮಗೆ ಬೇಕಿರುವುದು ಸೀಟ್ ಅಲ್ಲ. ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕು. ಈ ದೇಶಕ್ಕೆ ಮೋದಿಯವರು ಬೇಕಾಗಿದೆ. ಈ ದೇಶ ಉಳಿಯಬೇಕೆಂದರೆ ಮೋದಿ ಬೇಕು. ದೇವೇಗೌಡರು ಮೋದಿಯವರನ್ನು ಪ್ರಧಾನಿಮಂತ್ರಿ ಮಾಡಬೇಕು ಎಂದಿದ್ದಾರೆ. ನಾನು ಹಲವಾರು ಪ್ರಧಾನಿಮಂತ್ರಿಗಳನ್ನು ನೋಡಿದ್ದೇನೆ. ದೇವೇಗೌಡರಿಗೆ ಅತಿಹೆಚ್ಚು ಗೌರವ ಕೊಡುವ ಪ್ರಧಾನಮಂತ್ರಿ ಮೋದಿಯವರು. ದೇವೇಗೌಡರು ಯಾರನ್ನೇ ಅಭ್ಯರ್ಥಿ ಮಾಡಲಿ. ದೇವೇಗೌಡರೇ ಸ್ಪರ್ಧಿಸಿದರೆ ಇನ್ನೂ ಸಂತೋಷ. ಲೋಕಸಭೆ ಚುನಾವಣೆಗೆ ಹಾಸನದಿಂದ ಯಾರೇ ಸ್ಪರ್ಧಿಸಿದರು ಅವರನ್ನು ಗೆಲ್ಲಿಸಿ ಎಂದು ರೇವಣ್ಣ ಮನವಿ ಮಾಡಿದ್ದಾರೆ.

Advertisement
Advertisement