ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

KSRTC: 185 ರು ಪ್ರಯಾಣಕ್ಕೆ 200 ರು ಪಡೆದ ಕಂಡಕ್ಟರ್ : ಕಂಡಕ್ಟರ್ ವಿರುದ್ಧ KSRTC ಗೆ ದೂರು ನೀಡಿದ ಪ್ರಯಾಣಿಕ

KSRTC: ಚಿತ್ರದುರ್ಗ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಟಿಕೆಟ್ ದರ 185 ರೂ. ಜತೆಗೆ 15 ರು. ಹೆಚ್ಚಿಗೆ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.
12:53 PM May 20, 2024 IST | ಸುದರ್ಶನ್
UpdateAt: 01:10 PM May 20, 2024 IST
Advertisement

KSRTC: KSRTC ಚಿತ್ರದುರ್ಗ ವಿಭಾಗದ ಕಂಡಕ್ಟರ್ ಒಬ್ಬರು ಚಿತ್ರದುರ್ಗ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಟಿಕೆಟ್ ದರ 185 ರೂ. ಜತೆಗೆ 15 ರು. ಹೆಚ್ಚಿಗೆ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

Advertisement

ಇದನ್ನೂ ಓದಿ: 2nd PUC Migration Certificate: ದ್ವಿತೀಯ ಪಿಯುಸಿ ಪಾಸಾದವರು ತಮ್ಮ ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಈ ರೀತಿ ಆನ್‌ಲೈನ್‌ ಅರ್ಜಿ ಹಾಕಿ!

ಈ ಕುರಿತು ಹೆಚ್ಚುವರಿ ಹಣಕೊಟ್ಟ ಪ್ರಯಾಣಿಕ ಜಶ್ಚಂತ್ ಎಂಬ ವ್ಯಕ್ತಿ @KSRTC_Journeys ಎಕ್ಸ್‌ನಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ತನಿಖೆ ನಡೆಸಿ ಕಂಡಕ್ಟರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Liquid Nitrogen Paan: ಮದುವೆ ಸಮಾರಂಭದಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಪಾನ್‌ ತಿಂದು 12 ವರ್ಷದ ಹುಡುಗಿಯ ಹೊಟ್ಟೆಯಲ್ಲಿ ರಂಧ್ರ

ಅಸಲಿಗೆ ನಡೆದಿದ್ದೇನು :

ಭಾನುವಾರ ಸಂಜೆ 5.20ರ ವೇಳೆಗೆ ಬೆಂಗಳೂರಿನಿಂದ ಹಿರಿಯೂರಿಗೆ ಹೋಗಲು ಜಶ್ಚಂತ್ ಎಂಬುವರು ಬಸ್ ಹತ್ತಿ ಟಿಕೆಟ್ ಪಡೆದಿದ್ದು, ಕಂಡಕ್ಟರ್ 185 ರೂಪಾಯಿ ಟಿಕೆಟ್ ಕೊಟ್ಟಿದ್ದಾನೆ. ಜಶ್ಚಂತ್ ನಮ್ಮೊಟ್ಟಿಗೆ 2 ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿದ್ದು ಅವುಗಳಿಗೆ ಲಗೇಜ್ ಟಿಕೆಟ್ ನೀಡಿಲ್ಲ.

ಟಿಕೆಟ್ ಪಡೆಯುವ ವೇಳೆ ಜಶ್ಚಂತ್ ಕಂಡಕ್ಟರ್ ಗೆ 200 ರು. ನೀಡಿದ್ದು, ಕಂಡಕ್ಟರ್ ಚಿಲ್ಲರೆ ಕೊಡದೆ ಅಷ್ಟು ಹಣವನ್ನು ಇಟ್ಟುಕೊಂಡಿದ್ದು, ಇದೇ ವೇಳೆ ನಿಕ್ಕ ಹಣವನ್ನು ವಾಪಸ್ ಕೇಳಿದ್ದಕ್ಕೆ ಲಗೇಜ್ ಚಾರ್ಜಸ್ 15 ರೂಪಾಯಿ ಆಗಿದೆ ಆದ್ದರಿಂದ ಒಟ್ಟಾರೆ 200 ರೂಪಾಯಿ ತೆಗೆದುಕೊಂಡಿದ್ದೇನೆ ಎಂದು ಉತ್ತರಿಸಿದ್ದಾನೆ.

ಜಶ್ಚಂತ್ ತನಗೆ ಸರಿಯಾಗಿ ಕನ್ನಡ ಬರದ ಕಾರಣ ನಾನು ಅವರೊಂದಿಗೆ ಚರ್ಚೆ ಮಾಡಲು ಹೋಗಲಿಲ್ಲ. ನನ್ನಂತೆ ಅನೇಕ ಜನ, ಭಾಷೆ ಸರಿಯಾಗಿ ತಿಳಿಯದವರು ಬಸ್ಗಳಲ್ಲಿ ಪ್ರಯಾಣಿಸುತ್ತಾರೆ ಅಂತಹವರಿಗೆ ಈ ರೀತಿಯ ಕಂಡಕ್ಟರ್ ಗಳಿಂದ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ದೂರು ದಾಖಲಿಸಿದ್ದಾರೆ.

ಈಗಲೂ ಸಹ ಕೆಲ ಕಂಡಕ್ಟರ್ ಗಳು ಇಂತಹ ಕೃತ್ಯಗಳನ್ನು ಮಾಡುತ್ತಿರುತ್ತಾರೆ, ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಏಕೆಂದರೆ ಯಾರೋ ಒಂದಿಬ್ಬರು ಮಾಡುವ ಇಂತಹ ಕೆಲಸದಿಂದ ಇಡೀ ಇಲಾಖೆಯನ್ನು ಜನ ಕೀಳಾಗಿ ಕಾಣುವಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ

Advertisement
Advertisement