ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bigg Boss ವಿರುದ್ದ ಅಸಮಾಧಾನ ಹೊರ ಹಾಕಿದ ಆರ್ಯವರ್ಧನ್ ಗುರೂಜಿ:

04:03 PM Jan 09, 2024 IST | ಅಶ್ವಿನಿ ಹೆಬ್ಬಾರ್
UpdateAt: 04:03 PM Jan 09, 2024 IST
Advertisement

Bigg Boss: ಬಿಗ್ ಬಾಸ್(Bigg Boss)ಎಲ್ಲರ ನೆಚ್ಚಿನ ಮನರಂಜನಾ ಕಾರ್ಯಕ್ರಮಗಳಲ್ಲಿ ಒಂದು. ಅದರಲ್ಲಿಯೂ ಎಷ್ಟೋ ಮಂದಿ ವಾರದ ಕೊನೆಯ ಎರಡು ದಿನಗಳನ್ನು ಮಿಸ್ ಮಾಡದೇ ಕಿಚ್ಚನ ಪಂಚಾಯಿತಿ ನೋಡೋದಕ್ಕೆ ಅಂತಾನೇ ಮೀಸಲಿಟ್ಟು ನೋಡುತ್ತಾರೆ. ಈ ನಡುವೆ, ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ(BIGG BOSS Season 9 Contestant)ಸ್ಪರ್ಧಿಸಿರುವ ಆರ್ಯವರ್ಧನ್ ಗುರೂಜೀ (Aryavardhan Guruji)ಮಾತ್ರ ಪದೇ ಪದೇ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಇದೀಗ ರಿವೀಲ್ ಆಗಿದೆ.

Advertisement

 

ಆರ್ಯವರ್ಧನ್ ಗುರೂಜೀ ಕಿರಿಕ್ ಕೀರ್ತಿ(Kirik Keerthi)ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿದ್ದಾರೆ. ಬಿಗ್ ಬಾಸ್‌ ಮೇಲೆ ನನಗೆ ಕೋಪ ಏಕೆಂದರೆ, ನಾನು ಬರಲ್ಲ ಬರಲ್ಲ ಅಂತ ಹೇಳುತ್ತಿದ್ದೆ. ನಾನ್ನೊಬ್ಬ ಸ್ಟಾರ್‌ ರೀತಿ ಬದುಕಿರುವುದು ಸ್ಟಾರ್ ತರನೇ ಇರುವುದು. ನನ್ನ ಜಾತಕದ ಮೇಲೆ ಡಿಪೆಂಟ್ ಆಗಿದ್ದೀನಿ. ಇದರ ನಡುವೆ ನನ್ನನ್ನು ಅಲ್ಲಿಗೆ ಕರೆಸಿಕೊಂಡು ಸರಿಯಾಗಿ ನಡೆಸಿಕೊಂಡಿಲ್ಲ. ಬಿಗ್ ಬಾಸ್ ಓಟಿಟಿ ಸೀಸನ್ 1 ಆದ ಮೇಲೆ ನಮ್ಮನ್ನು ಕೂಡಿ ಹಾಕಿದರು. ನಾವು ಬ್ಯುಸಿನೆಸ್ ಮ್ಯಾನ್‌ಗಳು ನಮ್ಮನ್ನು ಬಿಟ್ಟು ಬಿಡಿ ಅಂತ ಹೇಳಿದರು ಕೂಡ ಕೇಳಿಲ್ಲ".

Advertisement

 

 

"ಓಟಿಟಿ ಆದ ಮೇಲೆ ಮನೆಗೆ ಬಿಡಲಿಲ್ಲ. ಅಲ್ಲಿ ನನಗೆ ಬೇಸರ ಅಯ್ತು. ಅಲ್ಲಿದ್ದ ಸ್ಪರ್ಧಿಗಳಿಗಿಂತ ನಾನು ಚೆನ್ನಾಗಿ ಅಟವಾಡಿದ್ದೀನಿ...ಪ್ರಪಂಚದಲ್ಲಿ ಏನಾಗುತ್ತದೆ ಎಂದು ಪ್ರಿಡಿಕ್ಟ್‌ ಮಾಡುವವರು ನಾವು...ಹೀಗಿರುವಾಗ ನಮ್ಮನ್ನು ಬಿಗ್ ಬಾಸ್ ಸರಿಯಾಗಿ ಬಳಸಿಕೊಂಡಿಲ್ಲ. ಆ ನೋವು ನನ್ನನ್ನು ಕಾಡುತ್ತಿತ್ತು. ಹೊರಗಡೆ ನಾನು ಹೇಗಿದ್ದೆನೋ ಅದೇ ರೀತಿ ಒಳಗಡೆ ಕೂಡ ನಾನು ಹಾಗೇ ಇರುವೆ, ಎಲ್ಲರಂತೆ ನಾನು ಬದಲಾಗಿಲ್ಲ," ಎಂದು ಅರ್ಯವರ್ಧನ್ ಗುರೂಜಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

 

ಕಿರಿಕ್ ಕೀರ್ತಿ ನಡೆಸಿದ ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ ಮಾತಾಡಿದ್ದು, ಬಿಗ್ ಬಾಸ್ ಅಗ್ರಿಮೆಂಟ್‌ಗೆ ಸಹಿ ಮಾಡಿದ್ದೀನಿ. ಆದರೆ ನನಗೆ ಓದಲು ಬರೆಯಲು ಬರಲ್ಲ. ಬಿಗ್ ಬಾಸ್ ಕಾರ್ಯಕ್ರಮ ನಡೆಸಬೇಕು ಅಂತ ಸುಮಾರು ಸಲ ನನ್ನನ್ನು ಕರೆದಿದ್ದರು. ಹೊರಗೆ ನಾನು ಮಾತನಾಡುತ್ತಿದ್ದೆ ಅದೇ ರೀತಿ ಒಳಗೆ ಹಾಗೆ ಮಾತನಾಡಲಿ ಆಗ ಆಡಿಯನ್ಸ್‌ ಬರುತ್ತಾರೆ ಅನ್ನೋ ಲೆಕ್ಕಚಾರವಿರಬೇಕು. ಈ ನಡುವೆ ಅದೆಷ್ಟೋ ಜನ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ. ಅದನ್ನು ಓದಬಾರದು ಎಂದೇ ದೇವರು ನನಗೆ ಹೀಗೆ ಮಾಡಿದ್ದಾರೆ. ನನಗೆ ಓದಲು ಬರೆಯಲು ಬರಲ್ಲ, ನಾನು ಎಬ್ಬೆಟ್ಟು. ಕನ್ನಡದ 55 ಅಕ್ಷರ ಬಿಟ್ಟು ಬೇರೆ ಏನೂ ಗೊತ್ತಿಲ್ಲ . ನಾನು ತೆಂಡುಲ್ಕರ್ ರೀತಿ, ನಾನೊಬ್ಬ ಫಾರ್ಮ್‌ನಲ್ಲಿ ಇರುತ್ತೀನಿ ಪ್ಲೇಯರ್ ಆಗಿರುತ್ತೀನಿ' ಎಂದಿದ್ದಾರೆ.

 

 

Related News

Advertisement
Advertisement