For the best experience, open
https://m.hosakannada.com
on your mobile browser.
Advertisement

Viral video: ಬರೀ ಎರಡೂವರೆ ಗಂಟೆಯಲ್ಲಿ 5ಮಿಲಿನ್ ವೀವ್ಸ್ ಪಡೆದ ತೆಂಗಿನ ಮರ ಕಟ್ ಮಾಡೋ ವಿಡಿಯೋ !! ಯಪ್ಪಾ.. ಆತನ ನ್ಯಾಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ ಗುರೂ... !!

06:16 PM Jan 30, 2024 IST | ಹೊಸ ಕನ್ನಡ
UpdateAt: 07:36 PM Jan 30, 2024 IST
viral video  ಬರೀ ಎರಡೂವರೆ ಗಂಟೆಯಲ್ಲಿ 5ಮಿಲಿನ್ ವೀವ್ಸ್ ಪಡೆದ ತೆಂಗಿನ ಮರ ಕಟ್ ಮಾಡೋ ವಿಡಿಯೋ    ಯಪ್ಪಾ   ಆತನ ನ್ಯಾಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ ಗುರೂ
Advertisement

Viral video: ಸೋಷಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಒಂದೊಂದು ವಿಡಿಯೋಗಳು ಫೇಮಸ್ ಆಗೋದು, ವೈರಲ್ ಆಖೋದನ್ನು ನಾವು ನೋಡುತ್ತೇವೆ. ಕೆಲವು ಫನ್ನಿಯಾಗಿದ್ದರೆ ಕೆಲವು ಆಶ್ಚರ್ಯಕರವಾಗಿರುತ್ತದೆ. ಇನ್ನು ಕೆಲವು ನಮ್ಮನ್ನು ಚಿಂತೆಗೆ ಒಳಪಡಿಸುತ್ತವೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ವಿಶೇಷತೆಯಿಂದ ಕೂಡಿರುತ್ತದೆ. ಅಂತೆಯೇ ಇಂದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್(Viral video)ಆಗಿದ್ದು ಇದು ಬರಿ ಎರಡೂವರೆ ಗಂಟೆಗಳಲ್ಲಿ ಬರೋಬ್ಬರಿ 5 ಮಿಲಿಯನ್ ದೇವಸ್ಥಾನ ಕಂಡಿದೆ.

Advertisement

ಇದು ಯಾವುದೋ ಭಾಷಣದ ವಿಡಿಯೋ ಆಗಲಿ, ಯಾವುದೋ ಹುಡುಗಿಯರ ಅಥವಾ ಹುಡುಗರ ರೀಲ್ಸ್ ಆಗಲಿ, ಪವಾಡದ ವಿಡಿಯೋ ಅಲ್ಲ. ಬದಲಿಗೆ ತೆಂಗಿನ ಮರವನ್ನು ಕಡಿಯುವ(Coconut tree cutting) ವಿಡಿಯೋ ಕಂಡ್ರಿ. ಹೌದು, ಒಬ್ಬ ಮರ ಕಡಿಯುವಾತ ಮನೆ ಮುಂದಿರೋ ತೆಂಗಿನ ಮರವನ್ನು ಏರಿ ಕಟ್ಟಿಂಗ್ ಮಷಿನ್ ಹಿಡಿದು, ಅರ್ಧಕ್ಕೆ ನಿಂತು ಬರೀ ಸೆಕೆಂಡುಗಳಲ್ಲಿ, ಸ್ವಲ್ಪವೂ ತ್ರಾಸು ತೆಗೆದುಕೊಳ್ಳದೆ, ಯಾರಿಗೂ ಅಪಾಯವೂ ಆಗದಂತೆ ಕಚಾಣಾಕ್ಷತನದಿಂದ ಆ ಮರವನ್ನು ಕಟ್ ಮಾಡಿ ಈಸಿಯಾಗಿ ನೆಲಕ್ಕುರುಳಿಸುವ ವಿಡೀಯೋನೆ ಇಂದು ಕೆಲವೇ ಕೆಲವು ಗಂಟೆಗಳಲ್ಲಿ ಮಿಲಿಯನ್, ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡದ್ದು, ನೆಟ್ಟಿಗರೆಲ್ಲಾ ಫಿದಾ ಆಗಿದ್ದು.

ಮರ ಕಡಿಯುವದೇ ಒಂದು ದೊಡ್ಡ ಸಾಹಸ. ಅದರಲ್ಲೂ ದೊಡ್ಡ ದೊಡ್ಡ ಮರಗಳನ್ನು, ಏನೂ ಗ್ರಿಪ್ ಇಲ್ಲದಂತ ತೆಂಗಿನಮರಗಳನ್ನು ಹತ್ತಿ ಕಡಿಯುವದು ಹರಸಾಹಸವೇ ಬಿಡಿ. ಆದರೆ ಈ ವೀಡಿಯೋ ನೋಡಿದರೆ ನೀವು ಅಚ್ಚರಿ ಪಡದೇ ಇರುವುದಿಲ್ಲ. ಯಾಕೆಂದರೆ ತೆಂಗಿನ ಮರವನ್ನು ಮರದ ಮೇಲೆಯೇ ಕುಳಿತು, ಅದೂ ಕೂಡ ಅರ್ಧದಿಂದ ಏನನ್ನೂ ಹಿಡಿಯದೆ ಸೆಕೆಂಡಿನಲ್ಲಿ, ಯಾವುದೇ ಭಯವಿಲ್ಲದೆ ಆ ವ್ಯಕ್ತಿ ಮರವನ್ನು ಕತ್ತರಿಸಿ ಬಿಸಾಕುತ್ತಾನೆ.

Advertisement

ಅಂದಹಾಗೆ ಸನ್ ಆಫ್ ದಿ ಸಾಯಿಲ್ ಎಂಬ ಟ್ವಿಟ್ಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿರುವ 32 ಸೆಕೆಂಡಿನ, ಈ ವೈರಲ್ ಆದ ವಿಡಿಯೋದಲ್ಲಿ ಮರ ಕುಯ್ಯುವಾತ ಕೆಂಪು ಟೀ ಶರ್ಟ್ , ಜೀನ್ಸ್ ಚೆಡ್ಡಿ ಧರಿಸಿರುವ ಯುವಕನೋರ್ವ ಕಟ್ಟಿಂಗ್ ಮಷಿನ್ ಹಿಡಿದು ತೆಂಗಿನ ಮರವನ್ನು ಏರಿ ಅರ್ಧದಲ್ಲಿ ಕುಳಿತುಕೊಂಡು ಮರವನ್ನು ಕುಯ್ಯಲು ಶುರುಮಾಡುತ್ತಾನೆ. ಮರದ ಕೆಳಗಿನ ರಸ್ತೆಯಲ್ಲಿ ಜನರು, ವಾಹನಗಳು ಓಡಾಡುತ್ತಲೇ ಇರುತ್ತವೆ. ಇದಾವುದರ ಪರಿವು ಅವನಿಗೋರೋಲ್ಲ. ವಿಡಿಯೋ ವೀಕ್ಷಕರಿಗಂತೂ ಮರ ಈಗ ಬೀಳುತ್ತೆ, ಇನ್ನೇನು ಬಿತ್ತು, ಅಯ್ಯೋ ಜನರ ಗತಿಯೇನು ಎಂದು ಭಯ ಆಗೋದು ಮಾತ್ರ ಪಕ್ಕಾ!! ಆದರೆ ಆತ ಕಣ್ಣು ಮುಚ್ಚಿ ಕಣ್ಣು ಬಿಡೋದರೊಳಗೆ ಯಾವುದೋ ಕಡ್ಡಿಯನ್ನು ಮುರಿದಂತೆ ಕತ್ತರಿಸಿ ಕೆಳಕ್ಕೆಸೆಯುತ್ತಾನೆ.

ಇನ್ನು ಈ ವೀಡಿಯೋ ನೋಡಿದ ಎಲ್ಲರೂ ಈ ಯುವಕನ ಚಾಣಾಕ್ಷತನದ ಕೆಲಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಪೋಸ್ಟ್ ಆಗಿರುವ ಈ ವೀಡಿಯೋವನ್ನು ಈಗಾಗಲೇ 5 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ.

Advertisement
Advertisement
Advertisement