ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

NDA: ಬಿಜೆಪಿಗೆ ಬಿಗ್ ಶಾಕ್ - NDA ಕೂಟದಿಂದ ಪ್ರಮುಖ ಪಕ್ಷ ಹೊರಕ್ಕೆ ?!

11:18 PM Jul 25, 2024 IST | ಸುದರ್ಶನ್
UpdateAt: 11:18 PM Jul 25, 2024 IST
Advertisement

NDA: ಕಳೆದು ಲೋಕಸಭಾ ಚುನಾವಣೆಯಲ್ಲಿ(Parliament Election) 400 ಸೀಟು ಪಡೆದೇ ಪಡೆಯುತ್ತೇನೆಂದು ಹಿರಿ ಹಿರಿ ಹಿಗ್ಗಿ ಕೊನೆಗೆ ಬಹುಮತ ಪಡೆಯದೆ ಮುಗ್ಗರಿಸಿ ಬಿದ್ದಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿತ್ತು. ಆದರೂ ಹೇಗೋ ಕಸರತ್ತು ನಡೆಸಿ NDA ಮೈತ್ರಿ ಕೂಟದ ಮೂಲಕ ಸರ್ಕಾರ ರಚಿಸಿತ್ತು. ಆದರೆ ಈ ಸರ್ಕಾರ ಸ್ಥಿರವಾಗಿರುತ್ತದೆ ಎಂದು ಯಾರಿಗೂ ಭರವಸೆಯಿಲ್ಲ. ಯಾಕೆಂದರೆ ಬಿಜೆಪಿ(BJP) ಜೊತೆ ಕೈ ಜೋಡಿಸಿದ ಕೆಲ ಪಕ್ಷದ ನಾಯಕರು ಹಾಗಿದ್ದಾರೆ. ಹೀಗಾಗಿ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು ಎಂಬುದು ಹಲವರ ಲೆಕ್ಕಾಚಾರ.

Advertisement

ಈ ಲೆಕ್ಕಾಚಾರಗಳನ್ನು ಹಾಕುವಾಗಲೇ ಇದೀಗ NDA ಸರ್ಕಾರದ ಬುಡ ಅಲುಗಾಡುತ್ತಿರುವ ಲಕ್ಷಣ ಕಂಡುಬರುತ್ತಿದೆ. ಯಾಕೆಂದರೆ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಬೆಂಬಲ ಘೋಷಿಸಿದ್ದ ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಇದೀಗ ಇಂಡಿಯಾ ಮೈತ್ರಿ ಕೂಟ ಸೇರುವತ್ತಾ ಒಲವು ತೋರಿದೆ ಎನ್ನಲಾಗಿದೆ.

ಹೌದು, YSRC ಪಕ್ಷದ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚುನಾವಣೆ ವೇಳೆ ತಮ್ಮ ಪಕ್ಷ ತಟಸ್ಥ ಧೋರಣೆ ಅನುಸರಿಸುವುದಾಗಿ ಹೇಳಿತ್ತು. ಫಲಿತಾಂಶ ಬಂದ ನಂತರ ದೇಶದ ಹಿತಾಸಕ್ತಿ ದೃಷ್ಟಿಯಿಂದ ನರೇಂದ್ರ ಮೋದಿಗೆ ಬೆಂಬಲ ನಿಡೋದಾಗಿ ಹೇಳಿತ್ತು. ಆದರೀಗ ಸದ್ಯದಲ್ಲೇ ವಿಪಕ್ಷಗಳ ಕೂಟಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ದೆಹಲಿ ರಾಜಕೀಯ ವಲಯ ಮಾತನಾಡುತ್ತಿದೆ.

Advertisement

ರಾಜಕೀಯ ವಲಯದಲ್ಲಿ ಹೀಗೊಂದು ಚರ್ಚೆ ಹುಟ್ಟಲು ಪ್ರಮುಖ ಕಾರಣ, ಬುಧವಾರ ಜಗನ್ ಮೋಹನ್ ರೆಡ್ಡಿ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿರೋದು. ನಾಲ್ವರು ಸಂಸದರನ್ನು ಹೊಂದಿರುವ ಜಗನ್ ಮೋಹನ್ ರೆಡ್ಡಿ ಅವರ ಪಕ್ಷವು ಒಂದು ವೇಳೆ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ನೀಡಿದರೆ ಸಂಸತ್ತಿನಲ್ಲಿ ವಿಪಕ್ಷಗಳ ಮೈತ್ರಿಕೂಟವು ಇನ್ನಷ್ಟು ಬಲಗೊಳ್ಳುತ್ತದೆ.

ಅಲ್ಲದೆ ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟವು ತಮ್ಮ ಒಗ್ಗೂಡಿಸುವಿಕೆಯಿಂದ ಲೋಕಸಭೆಯಲ್ಲಿ ಅಗತ್ಯವಿರುವ ಬಲವನ್ನು ಪಡೆಯಲು ಸಾಧ್ಯವಾಗದಿರಬಹುದು, ಆದರೆ YSRC ಪಕ್ಷವು ರಾಜ್ಯಸಭೆಯಲ್ಲಿ 11 ಸಂಸದರನ್ನು ಹೊಂದಿದೆ, ಅದು ದೊಡ್ಡ ಸಂಖ್ಯೆಯಾಗಿದೆ. 11 ರಾಜ್ಯಸಭಾ ಸಂಸದರು ಒಗ್ಗೂಡಿದರೆ, ಸಂಸತ್ತಿನ ಮೇಲ್ಮನೆಯಲ್ಲಿ ಇಂಡಿಯಾ ಒಕ್ಕೂಟವು ಅತ್ಯಂತ ಪ್ರಬಲ ಸ್ಥಾನದಲ್ಲಿರುತ್ತದೆ. ಆ ಮೂಲಕ ರಾಜ್ಯಸಭೆಯಲ್ಲಿ ಲೆಕ್ಕಾಚಾರ ಬದಲಾಗಲಿದೆ.

ಅಂದಹಾಗೆ ಸದ್ಯ ರಾಜ್ಯಸಭೆಯ ಒಟ್ಟು ಸದಸ್ಯಬಲ 250, ಅದರಲ್ಲಿ 238 ಸದಸ್ಯರನ್ನು ವೋಟು ಹಾಕಿ ಆಯ್ಕೆ ಮಾಡಲಾಗುತ್ತದೆ. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಗಳು ನಾಮ ನಿರ್ದೇಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸದ್ಯ ಸದಸ್ಯ ಬಲ 225, ಇದರಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 87 ಸದಸ್ಯರನ್ನು ಹೊಂದಿದೆ. ಅದರಲ್ಲಿ 26 ಸದಸ್ಯರು ಕಾಂಗ್ರೆಸಿಗರಾದರೆ, 13 ಟಿಎಂಸಿ ಸದಸ್ಯರು ಹಾಗೂ ಎಎಪಿ, ಡಿಎಂಕೆಯ ತಲಾ 10 ಸದಸ್ಯರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಕೂಡ ಭಾರತೀಯ ಮೈತ್ರಿಕೂಟಕ್ಕೆ ಸೇರಿದರೆ ವಿಪಕ್ಷಗಳ ಮೈತ್ರಿಕೂಟದ ಒಟ್ಟು ಸಂಸದರ ಸಂಖ್ಯೆ 98ಕ್ಕೆ ತಲುಪಲಿದೆ. ಇದರರ್ಥ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಯನ್ನು ಅಂಗೀಕರಿಸುವುದು ಮೋದಿ ಸರ್ಕಾರಕ್ಕೆ ತುಂಬಾ ಕಷ್ಟವಾಗಬಹುದು.

Advertisement
Advertisement